ಹವಾಮಾನ ವೈಪರೀತ್ಯ | ಹಜ್​ ಯಾತ್ರೆ ವೇಳೆ ಬಿಸಿಲಿನ ತಾಪದಿಂದ 98 ಭಾರತೀಯರ ಸಾವು | ಯಾತ್ರಿಕರ ಸುರಕ್ಷತೆಗಾಗಿ 365 ವೈದ್ಯರ ನಿಯೋಜನೆ

June 22, 2024
1:13 PM

ಹವಾಮಾನ ವೈಪರಿತ್ಯ(Climate Change) ಇಡೀ ವಿಶ್ವವನ್ನೇ(World) ಹೈರಾಣಾಗಿಸಿದೆ. ವಿಶ್ವದಾದ್ಯಂತ ಪ್ರಕೃತಿಯ ವಿಕೋಪಕ್ಕೆ(Natural calamities) ಅನೇಕರು ಬಲಿಯಾಗುತ್ತಿದ್ದಾರೆ. ಈ ಬಾರಿ ಮುಸ್ಲಿಮರ ಪವಿತ್ರ ಹಜ್​ ಯಾತ್ರೆಗೆ(Muslim pilgrimage of Haj) ತೆರಳಿದ ಭಾರತೀಯರಲ್ಲಿ 98 ಮಂದಿ ಬಿಸಿಲಿನ ತಾಪಕ್ಕೆ(Heat) ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಸಾವನ್ನಪ್ಪಿದವರ ಸಂಖ್ಯೆ 187 ಆಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ(Ministry of External Affairs) ವಕ್ತಾರ ರಣದೀರ್​​ ಜೈಸ್ವಾಲ್​ ತಿಳಿಸಿದ್ದಾರೆ

Advertisement

ಈ ವರ್ಷ 1,75,000 ಯಾತ್ರಾರ್ಥಿಗಳು ಮೆಕ್ಕಾಗೆ ಭೇಟಿ ನೀಡಿದ್ದು, ಈ ಹಜ್​ ಯಾತ್ರೆ ಮೇ 9ರಿಂದ ಜುಲೈ 22ರವರೆಗೆ ಸಾಗಲಿದೆ. ಇಲ್ಲಿಯವರೆಗೆ 98 ಭಾರತೀಯರ ಸಾವಿನ ವರದಿಯಾಗಿದೆ. ಬಹುತೇಕ ನೈಸರ್ಗಿಕ ಕಾರಣ, ದೀರ್ಘ ಅನಾರೋಗ್ಯ ಮತ್ತು ವೃದ್ಧಾಪ್ಯದಿಂದಾಗಿ ಈ ಸಾವುಗಳು ಸಂಭವಿಸಿವೆ ಎಂದು ಇಲಾಖೆ ತಿಳಿಸಿದೆ. ಆರಾಫತ್​ ದಿನ ಆರು ಮಂದಿ ಸಾವನ್ನಪ್ಪಿದ್ದು, ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಭಾರತೀಯರ ಚಿಕಿತ್ಸೆಗೆ 365 ವೈದ್ಯರು: ಸೌದಿ ಅರೇಬಿಯಾದಲ್ಲಿ ಹೆಚ್ಚಿದ ತಾಪಮಾನದಿಂದ ಜನರು ಬಳಲುತ್ತಿರುವ ಹಿನ್ನೆಲೆಯಲ್ಲಿ ಹಜ್​ ಯಾತ್ರಿಕರ ವೈದ್ಯಕೀಯ ಆರೈಕೆಗಾಗಿ ಭಾರತದ 365 ವೈದ್ಯರು ಮತ್ತು ಅರೆವೈದ್ಯರನ್ನು ನಿಯೋಜಿಸಲಾಗಿದೆ. ವಿಪರೀತ ಹವಾಮಾನ ವೈಪರೀತ್ಯದ ನಡುವೆಯೇ 2 ಲಕ್ಷ ಒಪಿಡಿಗಳನ್ನು ತೆರೆಯಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಭಾರತದಿಂದ ಈ ವರ್ಷ 1.75 ಲಕ್ಷಕ್ಕೂ ಹೆಚ್ಚಿನ ಯಾತ್ರಿಕರು ಹಜ್ ಯಾತ್ರೆ ಕೈಗೊಂಡಿದ್ದು, ಅದರಲ್ಲಿ ಸುಮಾರು 40,000 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು, ಹಜ್​ ಯಾತ್ರಿಕರಿಗೆ ವೈದ್ಯಕೀಯ ಆರೈಕೆ ವ್ಯವಸ್ಥೆ ಎಂಬ ಶೀರ್ಷಿಕೆಯಲ್ಲಿ ಡಾಕ್ಯುಮೆಂಟ್​ ಬಿಡುಗಡೆ ಮಾಡಿದ್ದಾರೆ. ಈ ದಾಖಲೆ ಮೂಲಕ ಯಾತ್ರಿಕರು ಹೇಗೆ ವೈದ್ಯಕೀಯ ಸೇವೆ ಪಡೆಯಬಹುದು ಎಂದು ಅದರಲ್ಲಿ ಮಾಹಿತಿ ನೀಡಲಾಗಿದೆ.

ಯಾತ್ರಿಕರ ಸಹಾಯಕ್ಕಾಗಿ ಎನ್​ಐಸಿ ಪೋರ್ಟಲ್​ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ನೈಜ ಸಮಯದಲ್ಲಿ ಯಾತ್ರಿಕರಿಗೆ ವೈದ್ಯಕೀಯ ಸೇವೆ ಕುರಿತ ಡೇಟಾ ಮತ್ತು ವಿಶ್ಲೇಷಣೆ ನೀಡಲಿದೆ. ಯಾತ್ರಿಕರ ಆರೋಗ್ಯ ವಿಚಾರ ಕುರಿತು ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದೇವೆ. ಈ ಎನ್​ಐಸಿ ಸೇವೆಯ ಸುಧಾರಣೆಗೆ ಸಹಾಯ ಮಾಡಲಿದೆ. ಅಲ್ಲದೇ ಇತರ ದೇಶಗಳು ಇದನ್ನು ಅನುಸರಿಸಲು ಇದು ಸಹಾಯ ಮಾಡಲಿದೆ ಎಂದಿದ್ದಾರೆ.

ಯಾತ್ರಾರ್ಥಿಗಳ ಸುಲಭ ಅನುಕೂಲಕ್ಕಾಗಿ ಮೆಕ್ಕಾ ಮತ್ತು ಮದೀನಾದಲ್ಲಿ ವೈದ್ಯಕೀಯ ತಂಡಗಳ ನಿಯೋಜನೆ ಮಾಡಲಾಗಿದೆ. ಆರೋಗ್ಯ ಮಿಷನ್‌ನ ದಾಖಲಾತಿಗಳು ಮತ್ತು ಕಾರ್ಯಾಚರಣೆಗಳ ಡೇಟಾಗೆ ನೈಜ-ಸಮಯದ ಪ್ರವೇಶಕ್ಕಾಗಿ ಪೋರ್ಟಲ್ ಅನ್ನು ರಚಿಸುವಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಎನ್​ಐಸಿ ಸಹಯೋಗ ನಡೆಸಿದೆ ಎಂದರು.

Source : IANS

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

2026 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು
April 11, 2025
7:00 AM
by: The Rural Mirror ಸುದ್ದಿಜಾಲ
ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ
April 11, 2025
6:10 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಬಾಡಿಗೆ ಕೊಳವೆಬಾವಿಗಳಿಂದ ನೀರು ಪೂರೈಕೆ
April 11, 2025
6:00 AM
by: The Rural Mirror ಸುದ್ದಿಜಾಲ
ಶುಕ್ರ ನೇರ ಸಂಚಾರದ ಪರಿಣಾಮ : ಕೆಲ ರಾಶಿಗಳ ಮೇಲೆ ಪ್ರಭಾವ
April 11, 2025
5:51 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group