ಹವಾಮಾನ ವೈಪರೀತ್ಯ | ಪ್ರಕೃತಿಯ ಮೇಲಿರುವ ಎಲ್ಲಾ ಜೀವ ಜಂತುಗಳ ಮೇಲೆ ಹೊಡೆತ | ಬಿಸಿಲ ಬೇಗೆಗೆ ಪ್ರಾಣಿ-ಪಕ್ಷಿ-ಜಲಚರಗಳೂ ಸಂಕಷ್ಟ |

April 30, 2024
10:36 AM

ಈ ಬಾರಿಯ ಹವಾಮಾನ ವೈಪರೀತ್ಯ (Climate change) ಹಾಗೂ ಬರಗಾಲ(Drought) ಕೇವಲ ಮನುಷ್ಯರಿಗೆ ಮಾತ್ರವಲ್ಲ. ಪ್ರಕೃತಿಯಲ್ಲಿ(Nature) ಬದುಕುವ ಪ್ರತಿ ಪ್ರಾಣಿ- ಪಕ್ಷಿಗಳು(Animal-Birds), ಜಲಚರಗಳು(Aquatic), ಕ್ರೀಮಿ ಕೀಟಗಳಿಗೂ(Insects) ಕಾಡುತ್ತಿದೆ. ದಿನದಿಂದ ದಿನಕ್ಕೆ ಬಿಸಿಲ ಧಗೆ(Heat) ಏರುತ್ತಿದೆ. ತಾಪಮಾನ(Temperature) 40 ಡಿಗ್ರಿ ದಾಟುತ್ತಿದೆ. ಕರಾವಳಿಯ ಅನೇಕ ಭಾಗಗಳಲ್ಲಿ ಕೆಂಪಿರುವೆ ಬಿಸಿಲ ತಾಪ ತಾಳಲಾರದೆ ಸಾಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಈಗ ಬಿಸಿಲಿನ ತಾಪಮಾನ ಜಲಚರಕ್ಕೂ ಕಂಟಕವಾಗಿದೆ. ಅರಮನೆ ನಗರಿಯ(Palace city) ಕುಕ್ಕರಹಳ್ಳಿ ಕೆರೆಯಲ್ಲಿರುವ ಮೀನು(Fish) ಸಾಲು ಸಾಲಾಗಿ ಸಾವನ್ನಪ್ಪುತ್ತಿವೆ. ಸತ್ತು ನೀರಿನ ಮೇಲೆ ತೇಲಾಡುತ್ತಿರುವುದನ್ನು ಕಂಡು ಜನ ಆತಂಕ ವ್ಯಕ್ತಪಡಿಸಿದ್ದಾರೆ.

Advertisement
Advertisement

ಮೈಸೂರಿನಲ್ಲಿಯೂ(Mysore) ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ಬಿಸಿಲಿನ ಬೇಗೆಯಿಂದ ಜಲಚರಗಳು ತತ್ತರಿಸುತ್ತಿವೆ. ಪ್ರತಿದಿನ ಹತ್ತಾರು ಮೀನುಗಳು ಸಾವನ್ನಪ್ಪುತ್ತಿದೆ. ಅವುಗಳ ಮೃತದೇಹಗಳು ಕೆರೆ ದಡಕ್ಕೆ ತೇಲಿಕೊಂಡು ಬರುತ್ತಿವೆ. ಕಳೆದ ಎರಡು ದಿನಗಳಿಂದ ಕುಕ್ಕರಹಳ್ಳಿಕೆರೆಯಲ್ಲಿ ಮೃತಪಡುತ್ತಿರುವ ಮೀನುಗಳ ಸಂಖ್ಯೆ ಹೆಚ್ಚಾಗುತ್ತಿದೆ.…….ಮುಂದೆ ಓದಿ…..

ಭಾನುವಾರ ಮುಂಜಾನೆ ಕುಕ್ಕರಹಳ್ಳಿಕೆರೆಗೆ ಬಂದ ವಾಯುವಿಹಾರಿಗಳಿಗೆ ಕೆರೆಯಲ್ಲಿ ಸತ್ತು ತೇಲುತ್ತಿರುವ ಮೀನುಗಳು ಕಂಡಿವೆ. ಅಲ್ಲದೆ, ಸತ್ತ ಮೀನುಗಳು ಕೊಳೆಯಲಾರಂಭಿಸಿದ್ದು, ಕೆರೆ ಪರಿಸರ ಹದಗೆಡುತ್ತಿದೆ ಎಂದು ʼಕನ್ನಡಪ್ರಭʼ ವರದಿ ಮಾಡಿದೆ. ಇನ್ನು ಮೃತ ಮೀನುಗಳನ್ನು ತೋಟಗಾರಿಕಾ ವಿಭಾಗದ ಸಿಬ್ಬಂದಿಗಳು ತೆರವುಗೊಳಸಿದ್ದಾರೆ. ಆದರೆ, ಈ ಬಾರಿಯ ರಣ ಬಿಸಿಲು ಜಲಚರಗಳ ಜೀವಕ್ಕೂ ಕಂಟಕವಾಗುತ್ತಿರುವುದು ಆತಂಕ ಮೂಡಿಸಿದೆ.

 

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ
May 16, 2025
7:23 AM
by: The Rural Mirror ಸುದ್ದಿಜಾಲ
ಕೃಷಿಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದೆ | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ |
May 16, 2025
7:16 AM
by: The Rural Mirror ಸುದ್ದಿಜಾಲ
ಮೇ 18 ರ ನಂತರ ರಾಹು ಕಾಟದಿಂದ ಈ 5 ರಾಶಿಯವರಿಗೆ ಕಷ್ಟಗಳು
May 16, 2025
7:12 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಹಾಳೆಯ ಸಂಬಂಧಿತ ಉತ್ಪನ್ನಗಳ ರಫ್ತು ನಿಷೇಧ | ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳೇನು..?
May 15, 2025
10:06 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror

Join Our Group