ಹವಾಮಾನ ವೈಪರೀತ್ಯ ಈಚೆಗೆ ಪ್ರಪಂಚದಾದ್ಯಂತ ವಿವಿಧ ರೀತಿಯಲ್ಲಿ ಕಾಡುತ್ತಿದೆ. ಭಾರತದಲ್ಲಿ ವಿಪರೀತ ಶಾಖ ಒಂದು ಕಡೆಯಾದರೆ, ಭಾರೀ ಮಳೆ ಇನ್ನೊಂದು ಕಡೆ. ಈ ಬಾರಿ ಹವಾಮಾನದಲ್ಲಿನ ಬದಲಾವಣೆ ಹೆಚ್ಚಾಗಿ ಕಂಡುಬಂದಿದೆ. ದೆಹಲಿಯಲ್ಲಿ 50 ಡಿಗ್ರಿಗಿಂತ ಅಧಿಕ ತಾಪಮಾನ ತಲುಪಿದೆ. ಗ್ರಾಮೀಣ ಭಾಗದಲ್ಲೂ 40 ಡಿಗ್ರಿ ತಾಪಮಾನ ಸಾಮಾನ್ಯವಾಗತೊಡಗಿದೆ. ಕಳೆದ 6 ತಿಂಗಳಲ್ಲಿ ಹವಾಮಾನ ವೈಪರೀತ್ಯ ಕಾರಣದಿಂದ $41 ಬಿಲಿಯನ್ ನಷ್ಟವನ್ನು ಉಂಟುಮಾಡಿದೆ ಎಂದು ಅಂತರರಾಷ್ಟ್ರೀಯ ಅಭಿವೃದ್ಧಿ ಚಾರಿಟಿಯ ಹೊಸ ವರದಿ ತಿಳಿಸಿದೆ.
ಹವಾಮಾನ ಬದಲಾವಣೆಯಿಂದ ಹಲವು ದೇಶಗಳು ಕಂಗಾಲಾಗಿವೆ. ಮುಖ್ಯವಾಗಿ ಕೃಷಿಗೆ ವಿಪರೀತವಾದ ಸಮಸ್ಯೆಯಾಗುತ್ತಿದೆ. ಬಾಂಗ್ಲಾದೇಶದಂತಹ ದೇಶಗಳಲ್ಲಿ ಪರಿಸ್ಥಿತಿಯು ವಿಕೋಪಕ್ಕೆ ಹೋಗುತ್ತಿದೆ. ಹೆಚ್ಚಿದ ಹವಾಮಾನ ವೈಪರೀತ್ಯ ದೇಶಗಳಲ್ಲಿ ತುರ್ತು ಕ್ರಮಗಳ ಅಗತ್ಯವಿದೆ ಎಂದು ಚಾರಿಟಿ ಅಭಿಪ್ರಾಯಪಟ್ಟಿದೆ.
2019 ಮತ್ತು 2023 ರ ನಡುವಿನ ಐದು ವರ್ಷಗಳಲ್ಲಿ ಹವಾಮಾನ ಸಂಬಂಧಿತ ವಿಪತ್ತುಗಳಿಂದಾಗಿ ಭಾರತವು $ 56 ಶತಕೋಟಿ ನಷ್ಟು ಹಾನಿಯನ್ನು ಅನುಭವಿಸಿದೆ. ಇದು ದಕ್ಷಿಣ ಏಷ್ಯಾದಲ್ಲಿ ಅನುಭವಿಸಿದ ಹೆಚ್ಚಿನ ಹಾನಿಯಾಗಿದೆ. ಏಷ್ಯಾ ಪೆಸಿಫಿಕ್ ಪ್ರದೇಶದ ದೇಶಗಳಿಗೆ $230 ಶತಕೋಟಿ ಹಾನಿಯಾಗಿದೆ. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸೆಂಟರ್ ಫಾರ್ ರಿಸರ್ಚ್ ಆನ್ ದಿ ಎಪಿಡೆಮಿಯಾಲಜಿ ಆಫ್ ಡಿಸಾಸ್ಟರ್ಸ್ ಡೇಟಾವು ಈ ಬಗ್ಗೆ ಉಲ್ಲೇಖಿಸಿದೆ.
ಇಡೀ ದಕ್ಷಿಣ ಏಷ್ಯಾ, ಭಾರತ, ಪಾಕಿಸ್ತಾನ, ಇರಾನ್, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾವನ್ನು ಒಳಗೊಂಡಿರುವ ಈ ಅವಧಿಯಲ್ಲಿ ಚೀನಾ, ಹಾಂಗ್ ಕಾಂಗ್ ಒಳಗೊಂಡಿರುವ ಪೂರ್ವ ಏಷ್ಯಾದ ಪ್ರದೇಶದ ನಂತರ $59.2 ಶತಕೋಟಿ ಡಾಲರ್ ನಷ್ಟು ಎರಡನೇ ಅತಿ ಹೆಚ್ಚು ಹಾನಿಯನ್ನು ಅನುಭವಿಸಿದೆ. ಹವಾಮಾನ ಸಂಬಂಧಿತ ವಿಪತ್ತುಗಳಿಂದಾಗಿ ತೈವಾನ್, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಜಪಾನ್ ಮತ್ತು ಮಂಗೋಲಿಯಾ $130.7 ಬಿಲಿಯನ್ ಕಳೆದುಕೊಂಡಿವೆ.
ಹವಾಮಾನ-ಸಂಬಂಧಿತ ವಿಪತ್ತುಗಳಿಂದಾಗಿ 2019 ಮತ್ತು 2023 ರ ನಡುವಿನ ಅವಧಿಯಲ್ಲಿ ಭಾರತವು 10,000 ಸಾವುಗಳಾಗಿವೆ. ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಮತ್ತು ಪಶ್ಚಿಮ ಏಷ್ಯಾದ ರಾಷ್ಟ್ರಗಳಾದ ಇಸ್ರೇಲ್, ತುರ್ಕಿಯೆ, ಯೆಮೆನ್, ಸೌದಿ ಅರೇಬಿಯಾ ಮತ್ತು ಇರಾಕ್ ಸೇರಿದಂತೆ ಮಧ್ಯ ಏಷ್ಯಾದ ದೇಶಗಳು ಈ ಅವಧಿಯಲ್ಲಿ 4,723 ಸಾವುಗಳಿಗೆ ಕಾರಣವಾಗಿವೆ.
ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮವನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹವಾಮಾನ ಬದಲಾವಣೆ ತಡೆಗೆ ಅಗತ್ಯವಾದ ಹಲವು ಕ್ರಮಗಳು ಇನ್ನೂ ತೆಗೆದುಕೊಳ್ಳಲು ಬಾಕಿ ಇದೆ. ಪರಿಸರ ಉಳಿವು, ಜಾಗೃತಿ, ಹಸಿರು ಹೆಚ್ಚಿಸುವುದು, ಮಣ್ಣಿನ ಸಂರಕ್ಷಣೆಗೆ ಸೇರಿದಂತೆ ತಾಪಮಾನ ಕಡಿಮೆಯಾಗಿಸುವ ಕೆಲಸಗಳು ನಡೆಯಬೇಕಿದೆ.
Source : weather analysis agency