ದೇಶದ ಹಲವು ಕಡೆಗಳಲ್ಲಿ 5G ಸೇವೆ ಆರಂಭಗೊಂಡಿದೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಒಟಿಪಿ ಮೂಲಕ ಹಣ ಬ್ಯಾಂಕ್ ಖಾತೆಯಿಂದ ಹಣ ದೋಚುವ ಸಾಧ್ಯತೆ ಇರುತ್ತದೆ. ಹೀಗಾಗಿ ಮೊಬೈಲ್ ಗ್ರಾಹಕರು ಎಚ್ಚರವಹಿಸಬೇಕಿದೆ. ಈಗಾಗಲೇ ಹಲವರಿಗೆ ಇಂತಹ ಕರೆಗಳು ಬಂದಿವೆ. ಯಾವುದೇ ಕಾರಣಕ್ಕೂ ಒಟಿಪಿ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡದೇ ಇರಲಿ ಎಚ್ಚರಿಕೆ ನೀಡಲಾಗಿದೆ. ಗ್ರಾಮೀಣ ಭಾಗದ ಸಂಖ್ಯೆಗಳನ್ನು ಹುಡುಕಿ ಕರೆ ಮಾಡುವ ಸಾಧ್ಯತೆಗಳೂ ಹೆಚ್ಚಿದೆ. ಈಗಾಗಲೇ ಕೆಲವರಿಗೆ ಇಂತಹ ಕರೆ ಬರಲು ಆರಂಭವಾಗಿದೆ.
ಖಾಸಗಿ ಕಂಪನಿಯ ಹೆಸರು ಹೇಳಿ ಕರೆ ಮಾಡಿ ನಿಮ್ಮ 4G ಸಿಮ್ 5G ಗೆ ಅಪ್ ಡೇಟ್ ಮಾಡುತ್ತೇವೆ ಎಂದು ಓಟಿಪಿ ಅಥವಾ ಲಿಂಕ್ ಕಳುಹಿಸಿ ನಿಮ್ಮ ಖಾತೆಯಲ್ಲಿರುವ ಹಣವನ್ನು ದೋಚುವ ಸಾಧ್ಯತೆ ಇರುತ್ತದೆ.ಹಾಗಾಗಿ ಯಾವುದೇ ಕಾರಣಕ್ಕೂ ಓಟಿಪಿ ಹಾಗೂ ಲಿಂಕ್ ಗಳನ್ನು ಕ್ಲಿಕ್ ಮಾಡಬಾರದು ಮತ್ತು ಕರೆ ಮಾಡಿದಲ್ಲಿ ವೈಯಕ್ತಿಕ ಬ್ಯಾಂಕ್ ಮಾಹಿತಿ ಹಂಚಿಕೊಳ್ಳಬಾರದು. ತೀರಾ ಅಗತ್ಯ ಇದ್ದಲ್ಲಿ ಯಾವುದೇ ನೆಟ್ವರ್ಕ್ ನ ಅಧಿಕೃತ ಶಾಖೆಗೆ ತೆರಳಿ ಮಾಹಿತಿ ಪಡೆಯಬಹುದಾಗಿದೆ.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…