ಅಯೋಧ್ಯೆ ರಾಮಮಂದಿರ ಅರ್ಚಕರೆಂದು ಹೇಳುವ ನಕಲಿ ವಿಡಿಯೋ ವೈರಲ್‌ | ವಿಡಿಯೋ ಶೇರ್‌ ಮಾಡಿದ ಕಾಂಗ್ರೆಸ್ ಮುಖಂಡ ಬಂಧನ |

December 12, 2023
8:44 PM

ಅಯೋಧ್ಯೆ ರಾಮ ಮಂದಿರ ಅರ್ಚಕ ಎಂದು ಹೇಳಿಕೊಂಡು ಅಶ್ಲೀಲ ಚಿತ್ರಗಳು ವೈರಲ್‌ ಆಗಿದ್ದವು. ಈ ವಿಡಿಯೋಗಳನ್ನು  ಶೇರ್ ಮಾಡಿದ್ದಕ್ಕಾಗಿ  ಕಾಂಗ್ರೆಸ್ ಮುಖಂಡನನ್ನು ಗುಜರಾತ್‌ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement
Advertisement
Advertisement
Advertisement

ಸಾಮಾಜಿಕ ಜಾಲತಾಣದಲ್ಲಿ ರಾಮಮಂದಿರದ ಅರ್ಚಕರೆಂದು ಹೇಳುವ ನಕಲಿ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದು ಈಗ  ಆಕ್ರೋಶಕ್ಕೆ ಗುರಿಯಾಗಿದೆ. ಅಶ್ಲೀಲ ಚಿತ್ರಗಳಲ್ಲಿ ಕಂಡುಬರುವ ವ್ಯಕ್ತಿ ಮೋಹಿತ್ ಪಾಂಡೆ ಎಂದು ಬಿಂಬಿಸಲಾಗುತ್ತಿದೆ. ಮೋಹಿತ್ ಪಾಂಡೆ ಅವರು ಇತ್ತೀಚೆಗೆ ಅಯೋಧ್ಯೆಯ ಶ್ರೀರಾಮ ಮಂದಿರದ ಮುಖ್ಯ ಅರ್ಚಕರಾಗಿ ಆಯ್ಕೆಯಾಗಿದ್ದರು.

Advertisement

ಕೆಲವು ಸಾಮಾಜಿಕ ಮಾಧ್ಯಮಗಳು  ಮೋಹಿತ್ ಪಾಂಡೆ ಅವರ ಹೆಸರಿನಲ್ಲಿ ನಕಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿವೆ. ಇದೇ ರೀತಿ  ಕಾಂಗ್ರೆಸ್ ನಾಯಕ ಹಿತೇಂದ್ರ ಪಿತಾಡಿಯಾ ಕೂಡ ಮೋಹಿತ್ ಪಾಂಡೆಯ ಎಂದು ಹೇಳುವ ಮೂಲಕ ಫೋಟೋಗಳು ಮತ್ತು ವೀಡಿಯೊಗಳನ್ನು ವಿಡಿಯೋ ಶೇರ್‌ ಮಾಡಿದ್ದರು. ಅರ್ಚಕರ ಆಕ್ಷೇಪಾರ್ಹ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಹಿತೇಂದ್ರ ಪಿತಾಡಿಯಾ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

ಹಿಂದೂಗಳ ಸುಮಾರು 200 ವರ್ಷಗಳ ಕನಸು ನನಸಾಗೋ ಕಾಲ ಹತ್ತಿರವಾಗುತ್ತಿದ್ದಂತೆಯೇ ಕಿಡಿಗೇಡಿಗಳು ಈಗ ಅರ್ಚಕರ ಬಗ್ಗೆಯೂ ಅಪಪ್ರಚಾರ ಆರಂಭಿಸಿದ್ದಾರೆ. ಹೀಗಾಗಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

Advertisement

ಅಯೋಧ್ಯೆ ರಾಮಮಂದಿರ ಅರ್ಚಕರಾಗಿ ನೇಮಕಗೊಂಡಿರುವ ಮೋಹಿತ್ ಪಾಂಡೆ ವಿರುದ್ಧ ನಕಲಿ ವಿಡಿಯೋ, ಫೋಟೋ ಹರಿಬಿಡಲಾಗಿದೆ. ಅರ್ಚಕ ಮೋಹಿತ್ ಪಾಂಡೆ ಮಹಿಳೆಯೊಬ್ಬರ ಜೊತೆ ಅಶ್ಲೀಲ ಭಂಗಿಯಲ್ಲಿದ್ದು, ಚುಂಬಿಸುತ್ತಿರುವಂತೆ ನಕಲಿ ವಿಡಿಯೋ ತಯಾರಿಸಲಾಗಿದೆ. ಇದು ಫೇಕ್ ವಿಡಿಯೋ ಎನ್ನುವುದು ದೃಢಪಟ್ಟಿದೆ.

Source :Organiser

Advertisement

Ayodhya: Congress leader held for sharing morphed pictures of porn star, claiming to be Ram Mandir pujari Mohit Pandey

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror