ತಮಿಳುನಾಡು ಅಡಿಕೆ | ಬೆಲೆ ಕುಸಿತದಿಂದ ತಮಿಳುನಾಡು ಅಡಿಕೆ ಬೆಳೆಗಾರರಿಗೆ ಸಮಸ್ಯೆ | ನೇರ ಖರೀದಿ ಕೇಂದ್ರ ತೆರೆಯಲು ಬೆಳೆಗಾರರ ಒತ್ತಾಯ |

February 13, 2025
3:08 PM
ಕಳೆದ 5 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಅಡಿಕೆ ಕೃಷಿ ಶೇ. 50 ರಷ್ಟು ಹೆಚ್ಚಾಗಿದೆ.ಇದುವರೆಗೂ ಉತ್ತಮ ಧಾರಣೆಯೂ ಇತ್ತು. ಈ ಬಾರಿ ಧಾರಣೆ ಕುಸಿತವಾಗಿದೆ.ಹೀಗಾಗಿ ಅಲ್ಲಿನ ಅಡಿಕೆ ಬೆಳೆಗಾರರು ಧಾರಣೆ ಏರಿಕೆಯ ಬಗ್ಗೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. (Source-TOI)

ಅಡಿಕೆ ಬೆಳೆ ವಿಸ್ತರಣೆಯ ನಂತರ ಇದೀಗ ತಮಿಳುನಾಡಿನಲ್ಲಿ ಅಡಿಕೆ ಬೆಲೆಯ ಸಮಸ್ಯೆ ಶುರುವಾಗಿದೆ. ಸದ್ಯ ಹಸಿ ಅಡಿಕೆ ಕೆಜಿಗೆ 42 – 47 ರೂ.ಗಳಿಗೆ ಮತ್ತು ಒಣ ಅಡಿಕೆ(ಸೀಳಿದ ಅಡಿಕೆ) ಕೆಜಿಗೆ 52 – 57 ರೂ.ಗಳಿಗೆ ಮಾರಾಟವಾಗುತ್ತಿದೆ. ಹೀಗಾಗಿ ಅಡಿಕೆ ಬೆಳೆಗಾರರು ಸಂಕಷ್ಟವನ್ನು ಅನುಭವಿಸುತ್ತಿದ್ದು, ಕೊಯಮತ್ತೂರು ಜಿಲ್ಲೆಯಲ್ಲಿ ಅಡಿಕೆ ನೇರ ಖರೀದಿ ಕೇಂದ್ರವನ್ನು ತೆರೆಯಬೇಕೆಂದು ಬೆಳೆಗಾರರು ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.……… ಮುಂದೆ ಓದಿ…….

ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯನ್ನು ಈಗ ಬೆಳೆಯಲಾಗುತ್ತಿದೆ. ಕೆಲವು ಸಮಯಗಳಿಂದ ಬೆಳೆ ವಿಸ್ತರಣೆ ವ್ಯಾಪಕವಾಗಿತ್ತು.  ತಮಿಳುನಾಡಿನ ಮೆಟ್ಟುಪಾಳಯಂ, ಅಣ್ಣೂರು, ಪೆರೂರ್ ಮತ್ತು ಪೊಲ್ಲಾಚಿ ಪ್ರದೇಶಗಳಲ್ಲಿ 15,000 ಎಕರೆಗಳಿಗೂ ಹೆಚ್ಚು ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಅಲ್ಲಿ ಒಬ್ಬ ರೈತ ಅಡಿಕೆ ತೋಟಕ್ಕೆ ಎಕರೆಗೆ 4.5 ಲಕ್ಷ ರೂ.ಗಳವರೆಗೆ ಖರ್ಚು ಮಾಡುತ್ತಾನೆ. ಹೀಗೆ ನಾಟಿ ಮಾಡಿದ ತೋಟಗಳಲ್ಲಿ ಈಗ ಫಸಲು ಆರಂಭವಾಗಿದೆ. ಮೋಹಿತ್ ನಗರ್ ಮತ್ತು ಸುಮಂಗಳ ತಳಿಯನ್ನು ಹೆಚ್ಚಾಗಿ ಬೆಳೆಯಲಾಗಿದೆ. ಸದ್ಯ ಪ್ರತೀ ಮರಕ್ಕೆ 5 ಕೆಜಿ ಅಡಿಕೆ ಬೆಳೆಯಲಾಗುತ್ತಿದೆ ಎಂದು ರೈತರು ಹೇಳುತ್ತಾರೆ. ಪ್ರಸ್ತುತ, ಹಸಿ ಅಡಿಕೆ ಕೆಜಿಗೆ 42 – 47 ರೂ.ಗಳಿಗೆ ಮತ್ತು ಸೀಳಿದ ಅಡಿಕೆ ಕೆಜಿಗೆ 52 – 57 ರೂ.ಗಳಿಗೆ ಮಾರಾಟವಾಗುತ್ತಿದೆ. ಕರ್ನಾಟಕ ಮತ್ತು ಕೇರಳ ಪ್ರಮುಖ ಮಾರುಕಟ್ಟೆಗಳಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ, ಅಡಿಕೆ ಕೆಜಿಗೆ 58 ರೂ.ಗೆ ಮಾರಾಟವಾಗಿತ್ತುಎಂದು ಹೇಳುತ್ತಾರೆ ಅಡಿಕೆ ಬೆಳೆಗಾರರು.

ಕಳೆದ 5 ವರ್ಷಗಳಲ್ಲಿ ಅಡಿಕೆ ಕೃಷಿ ಶೇ. 50 ರಷ್ಟು ಹೆಚ್ಚಾಗಿದೆ.ಉತ್ತಮ ಧಾರಣೆಯೂ ಇತ್ತು. ಈ ಬಾರಿ ಧಾರಣೆ ಕುಸಿತವಾಗಿದೆ. ಮದ್ಯವರ್ತಿಗಳ ಹಸ್ತಕ್ಷೇಪವೇ ಇದಕ್ಕೆ ಕಾರಣ ಎನ್ನುತ್ತಾರೆ ರೈತರು.

 

In Tamil Nadu, arecanut growers are facing significant challenges due to a drastic decline in prices. This downturn has severely impacted their livelihoods, as arecanut cultivation is a crucial source of income for many farmers in the region. These issues have compounded financial pressures on growers, many of whom are already grappling with rising production costs and unfavorable weather conditions. As a result, farmers are calling for government intervention and support to stabilize prices and provide relief to the struggling agricultural community.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರೈತರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ ; ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಆದ್ಯತೆ
November 10, 2025
7:32 AM
by: ದ ರೂರಲ್ ಮಿರರ್.ಕಾಂ
ಇಲಿಗಳ ಕಾಟಕ್ಕೆ ಇಲ್ಲಿದೆ ಸುಲಭ ಪರಿಹಾರ…!
November 10, 2025
7:26 AM
by: ರೂರಲ್‌ ಮಿರರ್ ಸುದ್ದಿಜಾಲ
ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ, ಕ್ಯಾನ್ಸರ್ ಪ್ರತಿಬಂಧಕ – ಅಧ್ಯಯನ ವರದಿ
November 10, 2025
7:16 AM
by: ರೂರಲ್‌ ಮಿರರ್ ಸುದ್ದಿಜಾಲ
ಪಶ್ಚಿಮಘಟ್ಟಗಳಲ್ಲಿ ಹೊಸ ಸಸ್ಯ ಪ್ರಭೇದಗಳು ಪತ್ತೆ | ಸೊನೆರೆಲಾ ಜಾತಿಯ   ಮೂರು  ಪ್ರಭೇದಗಳು
November 10, 2025
7:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror