ರಾಸಾಯನಿಕ ಮುಕ್ತ, ಹವಾಮಾನ-ಸ್ಥಿರ ಮತ್ತು ರೈತ-ಕೇಂದ್ರಿತ ಕೃಷಿ ಪದ್ಧತಿಯನ್ನು ದೇಶದಾದ್ಯಂತ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು 2024ರ ನವೆಂಬರ್ 25ರಂದು ಅನುಮೋದಿಸಿದೆ. ಇದು 15ನೇ ಹಣಕಾಸು ಆಯೋಗದ ಅವಧಿಯಾದ 2025-26ರ ವರೆಗೆ ಜಾರಿಯಲ್ಲಿರುವ ಒಂದು ಸ್ವತಂತ್ರ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ರೈತರ ಕೃಷಿ ವೆಚ್ಚವನ್ನು ಇಳಿಸಲು ಮಾತ್ರವಲ್ಲ ಕಡಿಮೆ ನೀರಿನ ಬಳಕೆಯಿಂದ ಹವಮಾನ ಬದಲಾವಣೆಯ ಸವಾಲುಗಳಿಗೆ ಪ್ರತಿರೋಧಕ ಶಕ್ತಿ ಪಡೆಯುವ ಉದ್ದೇಶದಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಲ್ಲಿ ಹೆಚ್ಚಿನ ಅನುದಾನ, ನೆರವು ಲಭ್ಯವಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




