ರೈತರಿಗಾಗಿ ಕೇಂದ್ರ ಸರ್ಕಾರವು ಇನ್ನೊಂದು ಯೋಜನೆಯನ್ನು ಜಾರಿಗೊಳಿಸಿದೆ. ರೈತರಿಗೆ ಕೃಷಿ ಕೆಲಸವನ್ನು ಸುಲಭಗೊಳಿಸುವ ದೃಷ್ಟಿಯಲ್ಲಿ ಕಿಸಾನ್ ಟ್ರಾಕ್ಟರ್ ಯೋಜನೆಯನ್ನು ಜಾರಿಗೊಳಿಸಿದೆ.
ಕೃಷಿ ಯಾಂತ್ರೀಕರಣದ ಉಪ-ಮಿಷನ್ ಅಡಿಯಲ್ಲಿ ‘ಕಿಸಾನ್ ಟ್ರ್ಯಾಕ್ಟರ್ ಯೋಜನೆ’ ಯನ್ನು ಜಾರಿ ಮಾಡಲಾಗಿದ್ದು, ಇದೊಂದು ಉಪ ಯೋಜನೆಯಾಗಿದೆ. ಯೋಜನೆಯಡಿ ಟ್ರ್ಯಾಕ್ಟರ್ ಮತ್ತು ಇತರ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರವು ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿ, ಅರ್ಹ ರೈತರು ಹೊಸ ಟ್ರ್ಯಾಕ್ಟರ್ ನ ಆನ್-ರೋಡ್ ಬೆಲೆಯ ಮೇಲೆ ಶೇಕಡಾ 50 ರಷ್ಟು ವರೆಗೆ ಸಬ್ಸಿಡಿ ಪಡೆಯಬಹುದು. ಈ ಯೋಜನೆಗಳನ್ನು ಪಡೆಯಲು ಕೃಷಿ ಯಾಂತ್ರೀಕರಣ ಮತ್ತು ತಂತ್ರಜ್ಞಾನಕ್ಕಾಗಿ ಡಿಜಿಟಲ್ ವೇದಿಕೆ ಜಾಲತಾಣ ಕೇಂದ್ರ ಸರ್ಕಾರದ ಈ ಟ್ರ್ಯಾಕ್ಟರ್ ಸಹಾಯಧನ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

