ಬರಗಾಲಕ್ಕೆ ರೈತ ಸಹೋದರರ ಸವಾಲ್ | ಸಾವಯವ ಕೃಷಿ ಮೂಲಕ 4 ಎಕರೆಯಲ್ಲಿ 40 ಕ್ವಿಂಟಾಲ್ ಬೆಳ್ಳುಳ್ಳಿ

February 29, 2024
12:39 PM

‌ಅನ್ನದಾತ(Farmer) ಸದಾ ಕಷ್ಟದಲ್ಲೇ ಜೀವನ ನಡೆಸುವವನು. ಪ್ರಕೃತಿಯ ಆಟಕ್ಕೆ ತಕ್ಕಂತೆ ರೈತ ತನ್ನ ಜೀವನವನ್ನು ರೂಪಿಸಿಕೊಳ್ಳಬೇಕು. ಅದರಲ್ಲೂ ಈ ಬಾರಿ ಮುಂಗಾರು(Mansoon Rain) ಕೈಕೊಟ್ಟ ಕಾರಣ ಮಳೆಯನ್ನೇ ನಂಬಿ ಬೆಳೆ ಬೆಳೆಯುವ ರೈತನಿಗೆ ಬಹಳ ತ್ರಾಸದಾಯಕವಾಗಿದೆ. ಮಳೆ ನಂಬಿ ಬಿತ್ತನೆ ಮಾಡಿದ ಬೀಜವೆಲ್ಲಾ(Seed) ಒಣಗಿ ಹೋಗಿದೆ. ಮಳೆ ಇಲ್ಲ, ಅಂತರ್ಜಲ(ground water) ಮಟ್ಟ ಕುಸಿತ. ಅತ್ತ ಚೂರು ಪಾರು ನೀರಿದ್ದರು ವಿದ್ಯುತ್‌ ಕಣ್ಣ ಮುಚ್ಚಾಲೆ ಆಟ. ಇದು ಸಾಲದು ಎಂಬುದಕ್ಕೆ ಕಷ್ಟಪಟ್ಟು ಬೆಳೆದ ಬೆಳೆಗೆ ಕೊನೆಗೆ ಬೆಲೆ ಇಲ್ಲ.  ಇಚ್ಟೆಲ್ಲಾ ಸಂಕಷ್ಟದ ಮಧ್ಯೆಯೂ ಇಲ್ಲೊಬ್ಬ ರೈತ ಸಹೋದರರು ಸಾವಯವ ಕೃಷಿ(Organic Farming) ಮೂಲಕ ಬಂಪರ್‌ ಬೆಳ್ಳುಳ್ಳಿ ಬೆಳೆ(Garlic crop) ಬೆಳೆದಿದ್ದಾರೆ.

Advertisement
Advertisement
Advertisement

 ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಲಿಂಗದಳ್ಳಿ ಗ್ರಾಮದ ಲಕ್ಷೆಟ್ಟಿ ಸಹೋದರರು ನಾಲ್ಕು ಎಕರೆ ಜಮೀನಿನಲ್ಲಿ ಬೆಳ್ಳುಳ್ಳಿ ಬೆಳೆದು ಸುಮಾರು 40 ಕ್ವಿಂಟಾಲ್​ ಫಸಲು ಪಡೆದಿದ್ದಾರೆ. ಇವರ ಈ ಯಶೋಗಾಥೆಗೆ ಜೈವಿಕ ಗೊಬ್ಬರ ಹಾಗೂ ಅಂತರ್ಜಲಮಟ್ಟ ಕಾಪಾಡಿಕೊಂಡಿರುವುದು ಹಾಗೂ ಇಷ್ಟೆಲ್ಲ ಕಷ್ಟಪಟ್ಟು ಬೆಳೆದ ಬೆಳೆಗೆ ಈ ಬಾರಿ ಬಂಪರ್ ಬೆಲೆ ಬಂದಿರುವುದು ಕಾರಣವಾಗಿದೆ.

Advertisement

ಶ್ರಮಕ್ಕೆ ತಕ್ಕ ಪ್ರತಿಫಲ : ಬೆಳ್ಳುಳ್ಳಿ ಬೆಳೆಗೆ ಈ ವರ್ಷ ಕ್ವಿಂಟಾಲ್‌ಗೆ 25 ಸಾವಿರ ರೂಪಾಯಿವರೆಗೆ ಬೆಲೆ ಸಿಕ್ಕಿರುವುದು ಈ ರೈತರು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ. ಗ್ರಾಮದ ಸಹೋದರರಾದ ಶರಣಪ್ಪ ಮತ್ತು ಕರೇಗೌಡ ಕಳೆದ ಹಲವು ವರ್ಷಗಳಿಂದ ಬೆಳ್ಳುಳ್ಳಿ ಬೆಳೆಯುತ್ತಿದ್ದಾರೆ. ಆದರೆ ಈ ವರ್ಷ ವಿಭಿನ್ನವಾದ ಸಮಸ್ಯೆ ಅವರಿಗೆ ಕಾಡಲಾರಂಭಿಸಿತ್ತು.

ಬೆಳ್ಳುಳ್ಳಿ ಬೆಲೆ ಒಂದು ಹಂತಕ್ಕೆ ಬಂದಾಗ ತೇವಾಂಶದ ಕೊರತೆ ಕಾಣಲಾರಂಭಿಸಿತು. ಮತ್ತೊಂದು ಕಡೆ ಕೊಳವೆಬಾವಿ ನೀರು ಸಹ ಕಡಿಮೆಯಾಗಲಾರಂಭಿಸಿತು. ಇದರಿಂದ ತೀವ್ರ ಆತಂಕಕ್ಕೀಡಾದ ಲಕ್ಷೆಟ್ಟಿ ಸಹೋದರರ ಕೈಹಿಡಿದಿದ್ದು ಸಾವಯವ ಕೃಷಿ. ಅವರು ಕಳೆದ ಹಲವು ವರ್ಷಗಳಿಂದ ಜಮೀನಿಗೆ ತಿಪ್ಪೆಗೊಬ್ಬರ, ಕೋಳಿಗೊಬ್ಬರ, ಜಮೀನಿನಲ್ಲಿ ಕುರಿ ನಿಲ್ಲಿಸುವುದು ಸೇರಿದಂತೆ ವಿವಿಧ ಸಾವಯವ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಸಿದ್ದರೆ ಜಮೀನಿನಲ್ಲಿರುವ ಪೈರು ಒಣಗಿಹೋಗುತ್ತಿತ್ತು. ಬಿಸಿಲು ತೇವಾಂಶಕ್ಕೆ ಸಿಲುಕಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿತ್ತು. ಈ ಸಹೋದರರು ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳ್ಳುಳ್ಳಿಯೇ ಬರುತ್ತೋ ಇಲ್ಲವೋ ಎಂದು ಆತಂಕಗೊಂಡಿದ್ದರು.

Advertisement

ಬಂಪರ್​ ಬೆಳೆ: ಈ ಮಧ್ಯೆ ಜಮೀನಿನ ತೇವಾಂಶ ಉಳಿಸಿಕೊಂಡಿದ್ದರಿಂದ ಸಾವಯವ ಗೊಬ್ಬರ ಉತ್ಪನ್ನಗಳು ಇವರ ಕೈಹಿಡಿದವು. ಪರಿಣಾಮ ಪ್ರತಿವರ್ಷ ಎಕರೆಗೆ 6 ಕ್ವಿಂಟಾಲ್ ಇಲ್ಲವೇ 7 ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದ ಈ ಸಹೋದರರು, ಪ್ರಸ್ತುತ ವರ್ಷ ಎಕರೆಗೆ 10 ಕ್ವಿಂಟಾಲ್ ಬೆಳ್ಳುಳ್ಳಿ ಬೆಳೆದಿದ್ದಾರೆ. ಒಂದು ಕಡೆ ಬಂಪರ್ ಫಸಲು ಬಂದರೆ, ಇನ್ನೊಂದು ಕಡೆ ಬಂಪರ್ ಬೆಲೆ ಸಹ ಇದೆ. ಅವರು ಬೆಳ್ಳುಳ್ಳಿ ಬೆಳೆಯಲು ಆರಂಭಿಸಿದಾಗಿನಿಂದ ಇಷ್ಟು ದರವನ್ನು ಅವರು ನೋಡಿರಲಿಲ್ಲ. ಅಷ್ಟು ಅಧಿಕ ದರ ಬೆಳ್ಳುಳ್ಳಿಗೆ ಸಿಕ್ಕಿದೆ.

ಎಕರೆಗೆ ತಲಾ 30 ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ. ಎಕರೆಗೆ 10 ಕ್ವಿಂಟಾಲ್ ಬೆಳೆ ಬಂದಿದ್ದು, ಇದರಿಂದ ಕನಿಷ್ಠ ಒಂದೂವರೆ ಲಕ್ಷ ರೂಪಾಯಿ ಆದಾಯ ಸಿಕ್ಕಂತಾಗುತ್ತದೆ ಎನ್ನುತ್ತಾರೆ ರೈತ ಕರೇಗೌಡ. ಇದೀಗ ಬೆಳ್ಳುಳ್ಳಿ ಫಸಲು ಬಂದಿದ್ದು, ಅದನ್ನು ಕಿತ್ತು ಜಮೀನಿನಲ್ಲಿ 20 ದಿನ ಒಣಗಿಸಲಾಗುತ್ತದೆ. ನಂತರ ಸಂಸ್ಕರಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗುತ್ತದೆ. ಅದರಲ್ಲಿ ಈ ರೈತರು ಬೆಳೆದ ಬೆಳ್ಳುಳ್ಳಿ ಜವಾರಿ ತಳಿಯಾಗಿದ್ದು, ಸಾಕಷ್ಟು ಬೇಡಿಕೆ ಹೊಂದಿದೆ ಎನ್ನುತ್ತಾರೆ ಸಾವಯವ ತಜ್ಞ ಗಂಗಯ್ಯ ಕುಲಕರ್ಣಿ. ಈ ರೈತರ ಯಶೋಗಾಥೆ ಉಳಿದ ರೈತರ ಗಮನ ಸೆಳೆದಿದೆ. ಅಕ್ಕಪಕ್ಕದ ರೈತರು ಸಹ ತಾವು ಸಹ ಸಾವಯವ ಗೊಬ್ಬರ ಬಳಸಿ ಕೃಷಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror