Advertisement
Exclusive - Mirror Hunt

ಅಡಿಕೆ ನಡುವೆ ಕಾಫಿ ಬೆಳೆ | ಅಡಿಕೆ ನಾಡಿನಲ್ಲಿ 10 ವರ್ಷಗಳಿಂದ ಉಪ ಬೆಳೆಯಾಗಿ ಕಾಫಿ ಬೆಳೆದ ಕೃಷಿಕ |

Share

ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಪ್ರಮುಖ ಬೆಳೆಯಾಗಿದ್ದ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದ್ದಂತೆಯೇ ಕರಾವಳಿ ಜಿಲ್ಲೆಯಲ್ಲಿ ಅಡಿಕೆಗೆ ಪರ್ಯಾಯದ ಹುಡುಕಾಟ ಆರಂಭವಾಗಿದೆ. ಕಾಳುಮೆಣಸು, ಕೊಕೋ ಬೆಳೆಯ ಬಗ್ಗೆ ಸಾಕಷ್ಟು ಚರ್ಚೆಯಾದ ಬಳಿಕ ಇದೀಗ ಕಾಫಿ ಬೆಳೆಯ ಕಡೆಗೂ ಕೃಷಿಕರು ಗಮನಹರಿಸಿದ್ದಾರೆ. ಅಡಿಕೆಯ ನಡುವೆ ಕಾಫಿ ಬೆಳೆಯೂ ಯಶಸ್ವಿಯಾಗಿ ಬೆಳೆದ ಕೃಷಿಕರು ಕೆಲವರು. ಕಳೆದ 10 ವರ್ಷಗಳಿಂದ ಸುಳ್ಯ ತಾಲೂಕಿನ ಗುತ್ತಿಗಾರು ಗೋವಿಂದ ಭಟ್‌ ಚೈಪೆ ಅವರು ಕಾಫಿಯನ್ನು ಅಡಿಕೆಯ ಜೊತೆ ಉಪಬೆಳೆಯಾಗಿ ಬೆಳೆದು ಯಶಸ್ವಿಯಾಗಿದ್ದಾರೆ.…..ಮುಂದೆ ಓದಿ….

Advertisement
Advertisement
Advertisement

ಕಾಫಿ ಬೆಳೆಯು ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಕಾಫಿಯ ಕಾರಣದಿಂದ ಚಿಕ್ಕಮಗಳೂರು ಜಿಲ್ಲೆಯನ್ನು ಕಾಫಿ ನಾಡು ಎಂದು ಕರೆಯಲಾಗುತ್ತದೆ. ಕರ್ನಾಟಕವು ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯವಾಗಿದ್ದು, ದೇಶದ ಕಾಫಿ ಉತ್ಪಾದನೆಯ ಸುಮಾರು 70% ರಷ್ಟಿದೆ. ಭಾರತದ ಕಾಫಿಯ ಸುಮಾರು 80% ರಫ್ತು ಮಾಡಲಾಗುತ್ತದೆ.  ಸಾಮಾನ್ಯವಾಗಿ ಉತ್ತಮವಾದ ಕಾಫಿ ಬೆಳೆಗೆ ಉತ್ತಮವಾದ ಹವಾಮಾನವೂ ಅಗತ್ಯವಿದೆ. 23 ಡಿಗ್ರಿಯಿಂದ 28 ಡಿಗ್ರಿಯವರೆಗಿನ ನಡುವಿನ ತಾಪಮಾನವು ಕಾಫಿ ಬೆಳೆಗೆ ಅನುಕೂಲವಾಗಿದೆ. ಸುಮಾರು 32  ಡಿಗ್ರಿಯ ನಂತರದ ತಾಪಮಾನವು ಕಾಫಿ ಬೆಳೆಗೆ ಪೂರಕವಾಗಿಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ಆದರೆ ವರ್ಷಕ್ಕೆ ಸರಾಸರಿ ಸುಮಾರು 5 ಸಾವಿರ ಮಿಮೀ ಮಳೆಯೂ ಇದ್ದರೆ ಇಳುವರಿಯೂ ಪಡೆಯಲು ಸಾಧ್ಯವಿದೆ. ಇದೆಲ್ಲಾ ಅಧ್ಯಯನ ನಡೆಸಲು  ಕಾಫಿ ಸಂಶೋಧನಾ ಉಪಕೇಂದ್ರವನ್ನು ಕರ್ನಾಟಕದ ಕೊಡಗು ಜಿಲ್ಲೆಯ ಚೆಟ್ಟಳ್ಳಿ ಗ್ರಾಮದಲ್ಲಿದೆ. 1946 ರಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದೆ. ಅನೇಕ ವರ್ಷಗಳಿಂದ ಕೊಡಗು ಸೇರಿದಂತೆ ಕರ್ನಾಟಕದ ಮಲೆನಾಡು ಭಾಗಗಳಲ್ಲಿ ಕಾಫಿ ಬೆಳೆ ಬೆಳೆಯಲಾಗುತ್ತಿದೆ.

Advertisement

ಹೀಗಿದ್ದರೂ ಮಲೆನಾಡು ತಪ್ಪಲು ಭಾಗದಲ್ಲಿ ಕಾಫಿ ಬೆಳೆಯನ್ನು ಉಪಬೆಳೆಯಾಗಿ ಅನೇಕ ಕೃಷಿಕರು ಮಾಡಿದ್ದಾರೆ. ಸುಮಾರು 10 ವರ್ಷಗಳಿಂದ ಅಡಿಕೆ ಬೆಳೆಯ ನಡುವೆ ಉಪಬೆಳೆಯಾಗಿ ಕಾಫಿಯನ್ನು ಮಾಡಿದವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಚೈಪೆಯ ಗೋವಿಂದ ಭಟ್‌ ಅವರು. ಇದೀಗ ಹಲವು ವರ್ಷಗಳಿಂದ ಕಾಫಿಯಲ್ಲಿ ಉತ್ತಮ ಇಳುವರಿಯನ್ನೂ ಪಡೆಯುತ್ತಿದ್ದಾರೆ. ವಾರ್ಷಿಕವಾಗಿ ಸುಮಾರು 45 ರಿಂದ 50 ಕ್ವಿಂಟಾಲ್‌ವರೆಗೂ ಇಳುವರಿ ಪಡೆದಿದ್ದಾರೆ. ಈಗಲೂ ಕಾಫಿ ಬೆಳೆ ಹಾಗೂ ಫಸಲು ಉತ್ತಮವಾಗಿದೆ.

Advertisement
ಕೃಷಿಕರಿಗೆ ಉಪಬೆಳೆ ಹಾಗೂ ತಾವೇ ಸ್ವತ: ದುಡಿಮೆ ಮಾಡುವುದು ಮತ್ತು ತೋಟವನ್ನು ನಿತ್ಯವೂ ಗಮನಿಸುವುದು ಅಗತ್ಯ ಎನ್ನುವುದು ಅವರ ಅಭಿಪ್ರಾಯ. ಕೃಷಿಯಲ್ಲಿ ಸೋಲು ಎನ್ನುವುದು ಇಲ್ಲ, ಸಾಲ ಎನ್ನುವುದೂ ಬೇಕಿಲ್ಲ ಎನ್ನುತ್ತಾರೆ ಗೋವಿಂದ ಭಟ್
ಗೋವಿಂದ ಭಟ್‌ , ಚೈಪೆ, ಗುತ್ತಿಗಾರು

ಸುಮಾರು 10-12 ವರ್ಷಗಳ ಹಿಂದೆ ಸಕಲೇಶಪುರ ಪ್ರದೇಶದಿಂದ ಕಾಫಿ ಗಿಡವನ್ನು ತಂದು ಅಡಿಕೆಯ ನಡುವೆ ನಾಟಿ ಮಾಡಿದ್ದಾರೆ ಗೋವಿಂದ ಭಟ್‌. ಬೇರೆ ಬೇರೆ ತಳಿಯಲ್ಲಿ ಪ್ರಯೋಗ ಮಾಡಿರುವ ಅವರು ಮಲೆನಾಡಿನ ಅದರಲ್ಲೂ ಅಡಿಕೆಯ ನಡುವೆ ಬೆಳೆಯಲು ರೋಬಸ್ಟ ಕಾಫಿ ತಳಿ ಉತ್ತಮವಾಗಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಗೋವಿಂದ ಭಟ್‌ ಅವರು ಜಮೀನಿನ 17 ಎಕ್ರೆ ಪ್ರದೇಶದಲ್ಲಿ ಖಾಲಿ ಜಾಗವನ್ನು ಎಲ್ಲೂ ಬಿಡದೆ ಅಡಿಕೆ , ತೆಂಗು ತೋಟದ ನಡುವೆ ಕಾಫಿ ಗಿಡವನ್ನು ನಾಟಿ ಮಾಡಿದ್ದಾರೆ. ಉಳಿದ ಕಾಫಿ ಬೆಳೆಯುವ ಪ್ರದೇಶದಲ್ಲಿ ಮಾಡುವಂತೆ ಕಾಫಿ ಗಿಡಗಳನ್ನೂ ಸರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ. ವರ್ಷಕ್ಕೆ ಎರಡು ಬಾರಿ ಗೊಬ್ಬರ ನೀಡುತ್ತಾರೆ. ಅಡಿಕೆಗೆ ಗೊಬ್ಬರ ನೀಡುವ ಸಮಯದಲ್ಲಿಯೇ ಕಾಫಿಗೂ ಗೊಬ್ಬರ ನೀಡುತ್ತಾರೆ. ಆ ಬಳಿಕ ಪ್ರೋನಿಂಗ್‌ ಸೇರಿದಂತೆ ಅಗತ್ಯವಾದ ಎಲ್ಲಾ ನಿರ್ವಹಣೆಯನ್ನೂ ಮಾಡುತ್ತಾರೆ. ಡಿಸೆಂಬರ್‌ ವೇಳೆಗೆ ಕಾಫಿ ಕಟಾವು ಮಾಡುವ ಕೆಲಸ ಮಾಡುತ್ತಿದ್ದಾರೆ.

Advertisement

ಎಲ್ಲೂ ಹೆಚ್ಚುವರಿಯಾದ ಕಾರ್ಮಿಕರ ನೆರವು ಇಲ್ಲದೆ ತಮ್ಮ ದೈನಂದಿನ ಕೆಲಸಗಳ ನಡುವೆ ಕಾಫಿ ಕೃಷಿಯೂ ನಡೆಯುತ್ತದೆ ಎನ್ನುತ್ತಾರೆ ಗೋವಿಂದ ಭಟ್.‌ ಅಡಿಕೆ ಹೆಕ್ಕುವುದಕ್ಕೆ, ಅಡಿಕೆ ಕೊಯ್ಲು ಸೇರಿದಂತೆ ಯಾವುದೇ ಅಡಿಕೆ ಕೆಲಸಕ್ಕೂ ಸಮಸ್ಯೆಯೂ ಆಗುವುದಿಲ್ಲ‌ , ಸರಿಯಾದ ನಿರ್ವಹಣೆಯೇ ಅಗತ್ಯ ಎನ್ನುವುದು ಗೋವಿಂದ ಭಟ್‌ ಅವರ ಅಭಿಪ್ರಾಯ. ಹಲವು ವರ್ಷಗಳ ಹಿಂದೆ ನೆಟ್ಟಿರುವ ರಬ್ಬರ್‌ ತೋಟ ಟ್ಯಾಪಿಂಗ್‌ ಇಲ್ಲದೆ ಇದೆ. ಈ ಬಾರಿ ಅದನ್ನೂ ಕಡಿದು ಕಾಫಿ ಗಿಡ ನೆಡುವ ಯೋಚನೆಯಲ್ಲಿದ್ದಾರೆ ಗೋವಿಂದ ಭಟ್.‌ ಹಲವು ಸಲ ಉಪಬೆಳೆಗಳೇ ಕೃಷಿಕರನ್ನು ಆಧರಿಸುವ ಕೆಲಸ ಮಾಡುತ್ತವೆ , ಸದ್ಯ ಕಾಫಿ, ಕೊಕೋ , ಕಾಳುಮೆಣಸು,ಜಾಯಿಕಾಯಿ ಇಲ್ಲಿ ಪ್ರಮುಖ ಉಪಬೆಳೆಗಳು.

Advertisement

ಪ್ರತೀ ವರ್ಷ ಉತ್ತಮ ಕೊಕೋ ಇಳುವರಿಯವನ್ನೂ ಪಡೆಯುತ್ತಿರುವ ಗೋವಿಂದ ಭಟ್‌ ಅವರು ವಾರಕ್ಕೆ ಸುಮಾರು ಒಂದು ಕ್ವಿಂಟಾಲ್‌ ನಷ್ಟು ಕೊಕೋ ಮಾರಾಟ ಮಾಡುತ್ತಿದ್ದರು. ವರ್ಷಕ್ಕೆ 5-10 ಕ್ವಿಂಟಾಲ್‌ ಕಾಳುಮೆಣಸು ಕೂಡಾ ಪ್ರಮುಖವಾದ ಆದಾಯವಾಗಿದೆ.  ( ಗೋವಿಂದ ಭಟ್‌ ಅವರ ಸಂಪರ್ಕ :9900920972 – ಸಂಜೆಯ ನಂತರ ಸಂಪರ್ಕಿಸಿ )

Govinda Bhat from Chaipe in Guthigar village, Sullia taluk, has been cultivating coffee as a sub-crop alongside Arecanut crops for the past decade. Over the years, they have consistently achieved a high yield of approximately 45 to 50 quintals annually. The coffee crop continues to thrive, with the current harvest also proving to be successful.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ| 21-11-2024 | ಮಳೆಯ ಸಾಧ್ಯತೆ ಕಡಿಮೆ | ನ.26 ಸುಮಾರಿಗೆ ಚಂಡಮಾರುತ ಸಾಧ್ಯತೆ |

22.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

1 hour ago

ಮನೆಯು ಮತ್ತೊಮ್ಮೆ ಮೊದಲ ಪಾಠಶಾಲೆಯಾಗಲಿ

“ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ…

19 hours ago

ದ ಕ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ

ಕೃಷಿ ಇಲಾಖೆಯಿಂದ ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ…

20 hours ago

ಹವಾಮಾನ ವರದಿ | 20-11-2024 | ರಾಜ್ಯದಲ್ಲಿ ಒಣಹವೆ | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ |

21.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ ಸೇರಿದಂತೆ…

23 hours ago

ರಾಜ್ಯದ ಕೈಗಾರಿಕೆಗಳಲ್ಲಿ ಹಸಿರು ತಂತ್ರಜ್ಞಾನ ಅಳವಡಿಸಲು ಆದ್ಯತೆ | ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ತಂತ್ರಜ್ಞಾನ ಮತ್ತು ಕೈಗಾರಿಕಾ ಪ್ರಗತಿಯ ಸಂಕೇತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. …

23 hours ago

ನಬಾರ್ಡ್ ಸಾಲದ ಮೊತ್ತ ಇಳಿಕೆ ಹಿನ್ನೆಲೆ | ಕೇಂದ್ರ ಹಣಕಾಸು ಸಚಿವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ

ನಬಾರ್ಡ್ ನಿಂದ ರಾಜ್ಯಕ್ಕೆ ನೀಡಲಾಗುವ ಸಾಲದ ಮೊತ್ತವನ್ನು 5600 ಕೋಟಿ ರೂಪಾಯಿಗಳಿಂದ, ಈ…

23 hours ago