ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮಸ್ಲಾ ಅಂಜಂಗಾವ್ ಬಾರಿ ಗ್ರಾಮದ ರೈತ ರವೀಂದ್ರ ಮಾನಿಕ್ರಾವ್ ಮೆಟ್ಕರ್ ಅವರ ವೃತ್ತಿಯ ಯಶಸ್ಸು ಇದೀಗ ಜಾಗತಿಕ ವೇದಿಕೆಗೆ ತಲುಪಿದೆ. ಅಂದು ದಿನಕ್ಕೆ ಕೇವಲ ₹5 ಕೂಲಿ ಮಾಡಿಕೊಂಡಿದ್ದ ಅವರು, ಇದೀಗ ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕೃತಕ ಬುದ್ಧಿಮತ್ತೆ (AI) ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಲು ಆಹ್ವಾನ ಪಡೆದಿದ್ದಾರೆ.
1984ರಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗ ಮನೆಯ ಮೇಲ್ಚಾವಣಿಯಲ್ಲೇ ಕೇವಲ 100 ಕೋಳಿಗಳೊಂದಿಗೆ ಪೌಲ್ಟ್ರಿ ಕೃಷಿ ಆರಂಭಿಸಿದ ಅವರು, ತಂದೆಯಿಂದ ಪಡೆದ ₹3,000 ನೆರವಿನಿಂದ ತಮ್ಮ ಉದ್ಯಮಕ್ಕೆ ಚಾಲನೆ ನೀಡಿದರು. ನಂತರ ಬ್ಯಾಂಕಿನಿಂದ ₹5 ಲಕ್ಷ ಸಾಲ ಪಡೆದು 4,000 ಕೋಳಿಗಳ ಫಾರ್ಮ್ ಸ್ಥಾಪಿಸಿದರು. ಅದೇ ವೇಳೆ ಔಷಧ ಅಂಗಡಿಯಲ್ಲಿ ತಿಂಗಳಿಗೆ ₹150 ಸಂಬಳದಿಂದ ಕೆಲಸವನ್ನೂ ಆರಂಭಿಸಿ ಮೆಟ್ಕರ್, ಬಳಿಕ ಸ್ವಂತ ಕೃಷಿ ಪ್ರಯೋಗಗಳ ಮೂಲಕ ಸಾಧನೆಯನ್ನೂ ಮಾಡಿದ್ದಾರೆ. ಕೇವಲ ಒಂದು ಎಕ್ರೆ ಜಮೀನಿನಿಂದ ಕೆಲಸ ಆರಂಭಿಸಿದ ಾವರು 2006ರ ವೇಳೆಗೆ ಈ ವ್ಯವಹಾರ ವೇಗವಾಗಿ ಬೆಳೆಯಿತು.
ಬರ್ಡ್ ಫ್ಲೂ ಕಾರಣದಿಂದ ಕೋಳಿ ಉದ್ಯಮ ದೊಡ್ಡ ಹಿನ್ನಡೆಯನ್ನೂ ಎದುರಿಸಿದರೂ, 2008ರಲ್ಲಿ ₹25 ಲಕ್ಷ ಸಾಲದೊಂದಿಗೆ ಪುನಃ ಆರಂಭಿಸಿ ತಮ್ಮ ಪರಿಶ್ರಮದಿಂದ ಮತ್ತೆ ಯಶಸ್ಸಿನ ಹಾದಿ ಹಿಡಿದರು. ಇಂದು ಸುಮಾರು 50 ಏಕರೆ ಪ್ರದೇಶದಲ್ಲಿ 1.8 ಲಕ್ಷಕ್ಕೂ ಹೆಚ್ಚು ಕೋಳಿಗಳ ಫಾರ್ಮ್ ನಡೆಸುತ್ತಿದ್ದು, ವಾರ್ಷಿಕವಾಗಿ ಸುಮಾರು ₹15 ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಜೊತೆಗೆ ಹಣ್ಣು ಬೆಳೆಗಳು ಸೇರಿದಂತೆ ಮಿಶ್ರ ಕೃಷಿಯನ್ನೂ ಕೈಗೊಂಡಿದ್ದಾರೆ.
ಇನ್ನೊಂದೆಡೆ, ಕಡಿಮೆ ವೆಚ್ಚದ ಕೃಷಿ ವಿಧಾನಗಳು ಹಾಗೂ ಸಾವಯವ ಗೊಬ್ಬರ ತಂತ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ ತಮ್ಮ ಕೃಷಿಯನ್ನು ವಿಸ್ತರಿಸಿರುವ ಅವರು, ಸಾವಿರಾರು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
“AI for Every Mind” ಎಂಬ ವಿಷಯದಡಿ ಮೇ 1 ರಿಂದ 5ರವರೆಗೆ ನಡೆಯಲಿರುವ ಈ ಜಾಗತಿಕ ಸಮ್ಮೇಳನವನ್ನು ಗ್ಲೋಬಲ್ ಎಕಾನಾಮಿಕ್ ಫೋರಂ (GEF) ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸುತ್ತಿದೆ. ಈ ವೇದಿಕೆಯಲ್ಲಿ ಗ್ರಾಮೀಣ ನವೀನ ಕೃಷಿ ಮಾದರಿ ಹಾಗೂ ತಮ್ಮ ಅನುಭವಗಳನ್ನು ಜಗತ್ತಿನ ಮುಂದೆ ಹಂಚಿಕೊಳ್ಳಲಿರುವುದು ಭಾರತೀಯ ರೈತರ ಪರಿಶ್ರಮ ಮತ್ತು ನವೀನತೆಗೆ ದೊರೆಯುತ್ತಿರುವ ಜಾಗತಿಕ ಮಾನ್ಯತೆಯ ಸಂಕೇತವಾಗಿದೆ.
ಇತ್ತೀಚಿನ ದಿನಗಳಲ್ಲಿ ಕೋಳಿಗಳ ಸಂಖ್ಯೆಯನ್ನು ಹೆಚ್ಚಿಸುವುದನ್ನು ನಿಲ್ಲಿಸಿ, ಇತರ ರೈತರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಸಿಂಗಾಪುರ್ ಸೇರಿದಂತೆ ದೇಶ-ವಿದೇಶದ ಹಲವು ಕೃಷಿ ವೇದಿಕೆಗಳಲ್ಲಿ ತಮ್ಮ ಯಶೋಗಾಥೆಯನ್ನು ಈಗಾಗಲೇ ಹಂಚಿಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಖರೀದಿಸುವುದನ್ನು ತಪ್ಪಿಸಿ, ಸ್ವಂತವಾಗಿ ತಯಾರಿಸಿದ ಸಾವಯವ ಹಾಗೂ ಕಡಿಮೆ ವೆಚ್ಚದ ಗೊಬ್ಬರ ತಂತ್ರಗಳನ್ನು ಅಭಿವೃದ್ಧಿಪಡಿಸುವುದು ಅವರ ಯಶಸ್ಸಿನ ಪ್ರಮುಖ ಕಾರಣವಾಗಿದೆ. ಈ ವಿಧಾನಗಳನ್ನು ಬಳಸಿ ಅವರು ತಮ್ಮ ಕೃಷಿಯನ್ನು 50 ಎಕ್ರೆ ವರೆಗೆ ವಿಸ್ತರಿಸಿದ್ದು, ಲಕ್ಷಾಂತರ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Ravindra Manikrao Metkar, a farmer-entrepreneur from Maharashtra, has risen from earning ₹5 a day to building a ₹15-crore agri and poultry enterprise. He has now been invited to speak at an international AI conference at the University of Oxford, showcasing grassroots innovation and resilience in Indian agriculture.
ಆಲಿಕಲ್ಲು ಮಳೆಯಂತಹ ತೀವ್ರ ಹವಾಮಾನದಿಂದ ಬೆಳೆ ರಕ್ಷಿಸಲು ಆಂಟಿ-ಹೈಲ್ ನೆಟ್ ಪ್ರಮುಖ ತಂತ್ರಜ್ಞಾನವಾಗಿ…
ದೇಶಾದ್ಯಂತ ಹವಾಮಾನದಲ್ಲಿ ತೀವ್ರ ಬದಲಾವಣೆ ಕಂಡುಬರುತ್ತಿದ್ದು, ಅನೇಕ ರಾಜ್ಯಗಳಲ್ಲಿ ಮಳೆ, ಗುಡುಗು ಹಾಗೂ…
ರಾಜ್ಯದಲ್ಲಿ ಸಧ್ಯಕ್ಕೆ ಮಳೆ ಕಡಿಮೆಯಾಗಿದ್ದು ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದೆ. ಇಂದು…
ಉತ್ತಮ ಗುಣಮಟ್ಟದ ಅಡಿಕೆಗಳಿಗೆ ₹530 ದರ ಸ್ಥಿರವಾಗಿದ್ದು ಹೊಸ ಅಡಿಕೆಗೆ ಸ್ಪಷ್ಟ ಬೇಡಿಕೆ…
ಹೊಸ ತಂತ್ರಜ್ಞಾನಗಳಿಂದ ಕಾಳುಮೆಣಸು ಕೃಷಿಯಲ್ಲಿ ಇಳುವರಿ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಕಂಡುಬಂದಿದ್ದು,…
ರಾಜ್ಯದ ಹಲವೆಡೆ ಇಂದು ಸಂಜೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.…