Advertisement
Opinion

ರೈತ ಹಿತಚಿಂತನೆ | ಹುಲಿ ರಕ್ಷಣಾ ಕಾನೂನಿಗಿಂತ ಗೋವು ರಕ್ಷಣಾ ಕಾನೂನಿಗೆ ಮೊದಲು ಆದ್ಯತೆ ನೀಡುವ ಅವಶ್ಯಕತೆ ಬಂದೊದಗಿದೆಯೇ?

Share

ಜೀವ ವೈವಿದ್ಯತೆಯಿಂದ ಕೂಡಿದ ಪ್ರಕೃತಿಯು ಉಳಿಯಬೇಕಾದರೆ ಎಲ್ಲ ಜೀವರಾಶಿಗಳ ಅವಶ್ಯಕತೆಯೂ ಕೂಡ ಅಷ್ಟೇ ಇದೆ. ನಾಗರೀಕತೆಗಳು ಮುಂದುವರೆದಂತೆ ಕೆಲವೊಮ್ಮೆ ನಾಗರೀಕರ ಪ್ರಜ್ಞಾರಹಿತ‌ ನಡೆಯಿಂದ ಇತರ ಜೀವರಾಶಿಗಳಿಗೆ ಹಾನಿಯುಂಟಾಗಿ ಅವು ನಶಿಸಿ ಹೋಗುವ ಸಂದರ್ಭ ಸೃಷ್ಟಿಯಾಗುವುದು. ಆ ಸಂದರ್ಭದಲ್ಲಿ ಪ್ರಜ್ಞಾವಂತ ನಾಯಕರ ಆಡಳಿತವಿದ್ದರೆ, ನಶಿಸುತ್ತಿರುವ ಪ್ರಾಣಿಗಳನ್ನು ರಕ್ಷಿಸುವ ಉದ್ದೇಶದಿಂದ ಸೂಕ್ತ ಕಾನೂನು ಜಾರಿಗೆ ತರುವರು. ಈ ನಿಟ್ಟಿನಲ್ಲಿ 50 ವರ್ಷಗಳ ಹಿಂದೆ ಹುಲಿಯ(tiger) ಸಂತತಿ ಗಣನೀಯವಾಗಿ ನಾಶವಾಗುತ್ತಿರುವ ಕಾರಣದಿಂದ ಪ್ರೊಜೆಕ್ಟ ಟೈಗರ್(project tiger) ಎಂಬ ಯೋಜನೆ ಜಾರಿಗೆ ತರುವ ಮೂಲಕ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ(national animal) ಘೋಷಣೆ ಮಾಡಲಾಯಿತು. ಅಂದಿನ ನಾಯಕರ ಪ್ರಜ್ಞಾವಂತ ನಡೆಯಿಂದ ಹುಲಿಗಳ ಸಂಖ್ಯೆ ಕಳೆದ ನಾಲ್ಕು ವರ್ಷದಿಂದ 6 ಪ್ರತಿಶತ ಏರಿಕೆಯಾಗುತ್ತಿದೆ. ಅಂದು ಜಾರಿಗೊಳಿಸಿದ ಯೋಜನೆಯು ಸಫಲತೆ ಕಾಣುತ್ತಿರುವುದು ಸಂತೋಷದ ಸಂಗತಿ.

Advertisement
Advertisement
Advertisement

ಅಂದಿನ ಪ್ರಜ್ಞಾವಂತ ನಾಯಕರ‌‌ ನಡೆಯಿಂದ ನಶಿಸಿ ಹೋಗುತ್ತಿರುವ ಹುಲಿಗಳ ಸಂತತಿ ಇಂದು ಉಳಿದು ಬೆಳೆಯುಂತಹ ವಾತಾವರಣ ನಿರ್ಮಾಣವಾಗಿದೆ. ಹಾಗಾದರೆ, ಇಂದು ನಶಿಸುತ್ತಿರುವ ದೇಸಿ ಗೋವುಗಳ ಪೋಷಣೆ ಹಾಗೂ ರಕ್ಷಣೆಗಾಗಿ ಸೂಕ್ತ ಕಾನೂನು ತರುವುದು ಇಂದಿನ ಪ್ರಜ್ಞಾವಂತ ನಾಯಕರ ಮೊದಲ ಜವಾಬ್ದಾರಿಯಾಗಿದೆ.

Advertisement

ಇಂದು ಪ್ರತಿಯೊಬ್ಬ ಭಾರತೀಯ ರೈತರಿಗೆ ಅವಶ್ಯವಿರುವ ಹಾಗೂ ಜಗತ್ತಿನಲ್ಲಿಯೇ ವಿಶೇಷವಾದ‌ ಗುಣಲಕ್ಷಣ ಹೊಂದಿದ ಹಲವು ದೇಸಿ ಗೋವುಗಳು ನಾಶವಾಗುತ್ತಿವೆ ಎಂಬುದನ್ನು ಹಲವು ಸಮೀಕ್ಷೆಗಳು ಹೇಳುತ್ತಿವೆ. ಕೇವಲ ಗೋವು ರಕ್ಷಣಾ ಕಾನೂನು ಜಾರಿಗೆ ತಂದರೆ ಸಾಲದು, ದೇಸಿ ಗೋವು ಸಾಕಾಣಿಕೆ ಲಾಭದಾಯಕ ವಾಗುವಂತೆ ಮಾಡುವ ಯೋಜನೆಗಳನ್ನು ಜಾರಿಗೆ ತರಬೇಕಾದ ಅವಶ್ಯಕತೆಯಿದೆ. ಏಕೆಂದರೆ ಈಗಾಗಲೇ ಫಲವತ್ತತೆ ಕಳೆದುಕೊಳ್ಳುತ್ತಿರುವ ಮಣ್ಣನ್ನು ಉಳಿಸಬೇಕಾದರೆ ದೇಸಿ ಹಸುಗಳ ಸಗಣಿ ಹಾಗೂ ಗಂಜಲನ್ನು ಯಥೇಚ್ಛವಾಗಿ ಭೂಮಿಗೆ ಸೇರಿಸಬೇಕಾದ ಅವಶ್ಯಕತೆಯಿದೆ. ಇಂದು ಈ ನಿಟ್ಟಿನಲ್ಲಿ ಪ್ರಯತ್ನಿಸುವ ನಾಯಕರಿಗೆ ಮಾತ್ರ ವಾಸ್ತವಿಕ ಸಮಸ್ಯೆಗಳ ಕುರಿತು ಪ್ರಜ್ಞೆ ಇದೆ ಎಂದು ಅರ್ಥವಾಗುತ್ತದೆ. ಪ್ರಜ್ಞಾವಂತ ನಾಯಕರು ಮಾತ್ರ ಆಯಾ ಸಮಯಕ್ಕೆ ಅವಶ್ಯವಿರುವ ಪ್ರಕೃತಿಗೆ ಪೂರಕವಾದ ಕಾನೂನುಗಳನ್ನು ಜಾರಿಗೊಳಿಸಬಲ್ಲರು.

ಐವತ್ತು ವರ್ಷಗಳ ಹಿಂದೆ ನಾಶವಾಗುತ್ತಿರುವ ಹುಲಿ ಸಂತತಿ ಉಳಿಸುವ ಉದ್ದೇಶದಿಂದ ಯೋಜನೆ ಜಾರಿಗೆ ತಂದು ಹುಲಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡಿದಂತೆ, ಇಂದು ನಾಶವಾಗುತ್ತಿರುವ ದೇಸಿ ಗೋವುಗಳನ್ನು ಉಳಿಸಲು ಬೃಹತ್ ಯೋಜನೆ ಜಾರಿಗೊಳಿಸಿ ‘ನಂದಿ’ ಯನ್ನು ಹೊಸದಾಗಿ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡುವ ಅವಶ್ಯಕತೆ ಬಂದೊದಗಿದೆ. ಐವತ್ತು ವರ್ಷಗಳ ಹಿಂದೆ ಹುಲಿಯ ಸಂತತಿ ಉಳಿಸುವ ಯೋಜನೆ ಜಾರಿಗೆ ತರದಿದ್ದರೆ ಇಂದು ಬೆರಳೆಣಿಕೆಯಷ್ಟು ಹುಲಿಗಳೂ ಕೂಡ ಉಳಿಯುತ್ತಿರಲಿಲ್ಲ. ಇದೇ ರೀತಿ ನಾವಿಂದು ದೇಸಿ ಗೋವುಗಳನ್ನು ಉಳಿಸುವುದಕ್ಕಾಗಿ ರಾಷ್ಟ್ರ‌ ಮಟ್ಟದ ಬೃಹತ್ ಯೋಜನೆ ಜಾರಿಗೆ ತರದಿದ್ದರೆ ಮುಂದಿನ ಐವತ್ತು ವರ್ಷಗಳಲ್ಲಿ ದೇಸಿ ಗೋವುಗಳು ಬೆರಳೆಣಿಕೆಯಷ್ಟು ಕೂಡ ಉಳಿಯಲು ಸಾಧ್ಯವಿಲ್ಲ. ಇಂದಿನ ವಾಸ್ತವಿಕ ಪರಿಸ್ಥಿತಿಯನ್ನು ಅರಿತು ದೇಸಿ ಗೋವುಗಳು ಹಾಗೂ ಎತ್ತುಗಳನ್ನು ಸಾಕಾಣಿಕೆ ಮಾಡುತ್ತಿರುವ ಪ್ರಜ್ಞಾವಂತ ರೈತರಿಗೆ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಬೇಕಾದ ಅವಶ್ಯಕತೆಯಿದೆ.

Advertisement

ಪ್ರಜ್ಞಾವಂತ ನಾಯಕರು‌ ಮಾತ್ರ ಆಯಾ ಸಂದರ್ಭದ ಅವಶ್ಯಕತೆಯನ್ನು ಅರಿತು ಸ್ಪಂದಿಸಬಲ್ಲರು. ಭಾರತೀಯ ಕೃಷಿ ಸಂಸ್ಕೃತಿಯ ಆಧಾರ ಸ್ತಂಭವಾದ ದೇಸಿ ಗೋವುಗಳು ಹಾಗೂ ಎತ್ತುಗಳನ್ನು ಉಳಿಸುವ ಯೋಜನೆಗಳನ್ನು ಜಾರಿಗೆ ತರುವಂತಹ ಪ್ರಜ್ಞಾವಂತ ನಾಯಕರಿಗೆ ಮತ ನೀಡಿ ಚುನಾವಣೆಗಳಲ್ಲಿ ಆಯ್ಕೆ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ನಮ್ಮೆಲ್ಲರಿಗೆ ಆರೋಗ್ಯಯುತ ಆಹಾರ ದೊರೆಯಬೇಕಾದರೆ ಕೃಷಿ ಭೂಮಿಯನ್ನು ಫಲವತ್ತಾಗಿಸುವ ದೇಸಿ ಗೋವುಗಳನ್ನು ಉಳಿಸಲೇಬೇಕಾಗಿದೆ. ದೇಸಿ ಗೋವುಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಸೂಕ್ತ ಯೋಜನೆ ಹಾಗೂ ಕಾನೂನು ಜಾರಿಗೆ ತರುವ ನಾಯಕರನ್ನು ಚುನಾವಣೆಗಳಲ್ಲಿ ಆಯ್ಕೆ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯ ಜವಾಬ್ದಾರಿಯಾಗಿದೆ.

ಬರಹ :
ಬಸವರಾಜ ಬಿರಾದಾರ, ಮಣ್ಣು ಉಳಿಸಿ  ಅಭಿಯಾನದ ಸ್ವಯಂ ಸೇವಕ, ವಿಜಯಪುರ
Due to the actions of the wise leaders of that time, an environment has been created where the descendants of the tigers, which are dying out, remain and thrive today. Therefore, the first responsibility of today's conscious leaders is to bring appropriate laws for the protection and protection of the endangered desi cows.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ

25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

8 hours ago

ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |

ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…

12 hours ago

ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?

ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..

13 hours ago

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.

1 day ago

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…

2 days ago

ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ

ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…

2 days ago