Advertisement
ಕೃಷಿ

ಒಂದು ಎಕರೆ ಬದನೆ ತೋಟ – 6 ಲಕ್ಷ ಆದಾಯ | ಯುವ ಕೃಷಿಕನ ಸಾಧನೆ

Share

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಅಶೋಕ ಮಾಸಾಳ ಅವರು ಜಮೀನಿನಲ್ಲಿ ಯುವ ತಂತ್ರಜ್ಞಾನದ ಸಹಾಯದಿಂದ 1083 ತಳಿಯ 2200 ಬದನೆಕಾಯಿ ಸಸಿಗಳನ್ನು ನೆಟ್ಟು ಉತ್ತಮ ಆದಾಯವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೊಟ್ಟಿಲು ಮಾದರಿಯ ಸರಿಯಾದ ಅಂತರ ಹಾಗೂ ನೀರಾವರಿ ಕ್ರಮದೊಂದಿಗೆ ಸಸಿಗಳಿಗೆ ಪೋಷಕಾಂಶ ಸಮರ್ಪಕವಾಗಿ ತಲುಪುವಂತೆ ಮಾಡಿದ್ದಾರೆ. ಮಾತ್ರವಲ್ಲ, ಅವರು ರೂ 12,000 ಮೌಲ್ಯದ ಪ್ಲಾಸ್ಟಿಕ್ ಮಲ್ಚಿಂಗ್ ಶೀಟ್‌ ಗಳು ಮತ್ತು ರೂ 9,000 ಮೌಲ್ಯದ ಡ್ರಿಪ್ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಇದರಿಂದ ನೀರಿನ ಉಳಿತಾಯವಾಗಿದ್ದು, ಹುಲ್ಲು ಬೆಳೆಯುವುದನ್ನು ತಡೆದು, ಬೆಳೆ ಆರೋಗ್ಯಕರವಾಗಿ ಬೆಳೆಯುವುದಕ್ಕೂ ಸಹಾಯವಾಗಿದೆ.

ಅಶೋಕ ಮಾಸಾಳರು ಬದನೆಕಾಯಿ ಬೆಳೆಗಳಿಗೆ ಯಾವುದೇ ರೋಗಗಳು ಬರದಂತೆ ಗಮನವಹಿಸಿ 7 ದಿನಗಳ ಅಂತರದಲ್ಲಿ ಪೋಷಕ ದ್ರವ್ಯಗಳ ಸಿಂಪಡಣೆ ಹಾಗೂ 3 ದಿನಗಳ ಅಂತರದಲ್ಲಿ ಹಾನಿಕಾರಕ ಕೀಟ ನಿರ್ವಹಿಸುತ್ತಾರೆ. ಇವರಿಗೆ ಈ ಕೃಷಿಯಿಂದ ಒಟ್ಟು ಉತ್ಪಾದನೆ 18 ರಿಂದ 20 ಟನ್ ಆಗಿದ್ದು, ಪ್ರತಿ ಕಿಲೋಗೆ ರೂ 40 ರಿಂದ ರೂ 50 ದರ ಸಿಕ್ಕಿದೆ. ಹೀಗಾಗಿ ಕೇವಲ ಒಂದು ಎಕರೆ ಬದನೆ ತೋಟದಿಂದಲೇ 6 ಲಕ್ಷದ ವರೆಗೂ ಆದಾಯ ಪಡೆದಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…

1 day ago

ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!

ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…

1 day ago

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…

1 day ago

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

1 day ago

ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!

ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…

2 days ago