ರೈತ ಯುವಕರಿಗೆ ಮದುವೆಯಾಗಲು ಹೆಣ್ಣಿಲ್ಲ…! | ಸರ್ಕಾರದಿಂದ 5 ಲಕ್ಷ ರೂ. ಪ್ರೋತ್ಸಾಹಧನ ನೀಡಿ | ರೈತ ಸಂಘದಿಂದ ಜಾಗೃತಿ ಆಂದೋಲನ

December 6, 2023
12:01 PM
ರೈತ ಯುವಕರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕೂಗು ಎಲ್ಲೆಡೆ ಇದೆ. ಈ ದೇಶ ಉಳಿಯಬೇಕಾದರೆ ರೈತ ಉಳಿಯಬೇಕು. ರೈತ ಉಳಿಯಬೇಕಾದರೆ ಯುವ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು.

ರೈತ ಈ ದೇಶದ ಬೆನ್ನೆಲುಬು. ಇಡೀ ಜಗತ್ತಿನ ಜನ ದುಡಿದರೆ, ರೈತ ತಾನು ದುಡಿದು ತನ್ನ ಹೊಟ್ಟೆಯ ತುಂಬುವುದು ಮಾತ್ರವಲ್ಲ ಜಗದ ಜನರ ಹೊಟ್ಟೆ ತುಂಬುತ್ತಿದ್ದಾನೆ. ಆದರೂ ರೈತ ಅದೇನೇ ಕಷ್ಟ ಬಂದರೂ  ಸರಿದೂಗಿಸಿಕೊಂಡು, ಯಾರು ಸಹಾಯ ಮಾಡಲಿ ಬಿಡಲಿ, ತಾನು ಬೆಳೆಯ ಬೇಕಾದ ಬೆಳೆಯನ್ನು ಬೆಳೆಯದೇ ಬಿಡನು. ಅದರಲ್ಲೇ ಸಂತೋಷ ನೆಮ್ಮದಿ ಕಾಣುವನು ಕಾಯಕ ಯೋಗಿ. ಎಲ್ಲವನ್ನೂ ಸಹಿಸಿಕೊಳ್ಳಬಹುದು. ಆದರೆ ಈ ಕಾಯಕಯೋಗಿ, ಜಗದ ಹೊಟ್ಟೆ ತುಂಬಿಸುವ ರೈತ ಯುವಕರಿಗೆ(youth farmers) ಮದುವೆಗೆ(Marriage) ಹೆಣ್ಣು(Girl) ಸಿಕ್ಕಿಲ್ಲ ಅಂದ್ರೆ ಹೇಗೆ..? ಮುಂದೆ ದಾರಿ ಏನು..? ಅನ್ನೋ ಚಿಂತೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದಾದ್ಯಂತ ಆಂದೋಲನವೇ (Movement) ಆರಂಭವಾಗಿದೆ.

Advertisement

ರೈತನ ಮಕ್ಕಳಿಗೆ 45 ವರ್ಷ ತುಂಬಿದರೂ ಕನ್ಯ ಸಿಗುತ್ತಿಲ್ಲ. ಇದೊಂದು ಸಾಮಾಜಿಕ ಸಮಸ್ಯೆಯಾಗಿ ನಿರ್ಮಾಣಗೊಂಡಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸಲು ರೈತ ಸಂಘದಿಂದ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. ರೈತರಿಗೆ ಆಗುವ ಅನ್ಯಾಯದ ವಿರುದ್ಧ ರೈತ ಸಂಘ ಇಲ್ಲಿಯವರೆಗೆ ಹೋರಾಟ ಮಾಡಿಕೊಂಡು ಬರುತ್ತಿದೆ. ಆದರೆ ಯಾರೂ ರೈತರ ಮಕ್ಕಳಿಗೆ ಹಾಗೂ ಯುವ ರೈತರಿಗೆ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಇದೊಂದು ಸಾಮಾಜಿಕ ಸಮಸ್ಯೆಯಾಗಿ ರೈತರನ್ನು ಚಿಂತೆಗೇಡು ಮಾಡಿದೆ. ಮೊದಲ ಬಾರಿಗೆ ರೈತರ ಸಾಮಾಜಿಕ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ರಾಜ್ಯ ರೈತ ಸಂಘ ಹಸಿರು ಸೇನೆ ಜಾಗೃತಿ ಆಂದೋಲನ ಹಮ್ಮಿಕೊಂಡಿದೆ. . ಈ ಆಂದೋಲನದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡಿ ಎಂಬ ವಿಚಾರದ ಬಗ್ಗೆ ಸಾಮಾಜಿಕ ಅರಿವು ಮೂಡಿಸುವ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.

45 ವರ್ಷ ತುಂಬಿದರೂ ರೈತರ ಮಕ್ಕಳ ಮದುವೆ ಇಲ್ಲ: ರಾಜ್ಯದ ಎಲ್ಲಾ ಕಡೆ ಈ ಸಮಸ್ಯೆ ಇದೆ. ರೈತರಿಗೆ ಹೆಣ್ಣು ಸಿಗದೇ ಇರಲು ಕಾರಣ ಹಳ್ಳಿಗಳಲ್ಲಿ ಮೂಲ ಸೌಲಭ್ಯಗಳ ಕೊರತೆ, ರೈತರಿಗೆ ಆದಾಯ ಖಾತರಿ ಇಲ್ಲ, ಹೆಣ್ಣು ಕೊಟ್ಟರೆ ಗಂಡನ ಮನೆಯವರು ನಾಳೆ ಹೇಗೆ ಸಾಕುತ್ತಾರೆ ಎಂಬ ಚಿಂತೆಯಿಂದ ಪೋಷಕರು ಹೆಣ್ಣು ಕೊಡುತ್ತಿಲ್ಲ. ಇದೊಂದು ಸಾಮಾಜಿಕ ಸಮಸ್ಯೆ, ಸರ್ಕಾರ ಪರಿಗಣಿಸಿ ಪರಿಹಾರ ಒದಗಿಸಬೇಕು. ಈ ಸಮಸ್ಯೆ ನಿವಾರಣೆ ಹಾಗೂ ರೈತರ ಮಕ್ಕಳ ಮದುವೆಗಾಗಿ ಸರ್ಕಾರ ಯೋಜನೆ ಜಾರಿಗೆ ತರಬೇಕು ಎಂದು ಬಡಗಲಪುರ ನಾಗೇಂದ್ರ ಮನವಿ ಮಾಡಿದ್ದಾರೆ.

5 ಲಕ್ಷ ಪ್ರೋತ್ಸಾಹಧನ ಸರ್ಕಾರ ನೀಡಬೇಕು: ನಮ್ಮ ಅಭಿಯಾನದ ಮುಖ್ಯ ಉದ್ದೇಶ ಹೆಣ್ಣು ಮಕ್ಕಳಿಗೆ ಕೃಷಿಯಿಂದ ಬದುಕು ಕಟ್ಟಿಕೊಳ್ಳಬಹುದು ಎಂಬ ಅರಿವು ಮೂಡಿಸುವುದು. ರೈತರ ಮಕ್ಕಳನ್ನು ಮದುವೆ ಆದರೆ ಸರ್ಕಾರ 5 ಲಕ್ಷ ಪ್ರೋತ್ಸಾಹಧನ ನೀಡಬೇಕು. ಕನಿಷ್ಠ 25 ಲಕ್ಷ ರೂ. ಯಾವುದೇ ಗ್ಯಾರಂಟಿ ಇಲ್ಲದೆ ಸರ್ಕಾರ ರೈತರ ಮಕ್ಕಳಿಗೆ ಲೋನ್ ನೀಡುವ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಬಡಗಲಪುರ ನಾಗೇಂದ್ರ ಮಾಹಿತಿ ನೀಡಿದ್ದಾರೆ.

ರೈತ ಸಂಘದಿಂದ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಅದಕ್ಕಾಗಿ ರೈತರ ಮಕ್ಕಳಿಗೆ ಹೆಣ್ಣು ಕೊಡಿ. ರೈತರ ಮಕ್ಕಳನ್ನು ಮದುವೆಯಾದ್ರೆ 5 ಲಕ್ಷ ಪ್ರೋತ್ಸಾಹ ಧನ ನೀಡಬೇಕೆಂಬ ವಿಚಾರದ ಬಗ್ಗೆ ಚರ್ಚೆ ಮಾಡಲು ಸಮಾವೇಶ ನಡೆಸಲಾಗುವುದೆಂದು ಹೇಳಿದರು. ಅರ್ಜುನನ ಸಾವು ತುಂಬ ನೋವು ತಂದಿತು: ಅರ್ಜುನನ ಸಾವು ನಮಗೆ ಬಹಳ ನೋವು ತಂದಿದೆ. ಗಟ್ಟಿಯಾದ ಸಂಸಾರದಲ್ಲಿ ಒಬ್ಬ ಮನೆಯವರೇ ತೀರಿಕೊಂಡಷ್ಟು ನೋವಾಗಿದೆ. ಚಿನ್ನದ ಅಂಬಾರಿ ಹೊರುತ್ತಿದ್ದ ಆನೆ ಅರ್ಜುನ, ಪುನಃ ಅಂತಹ ಅನೆಯನ್ನ ತಯಾರು ಮಾಡುವುದು ಕಷ್ಟ. ಅರ್ಜುನನ ಪಾವು ಬಹಳ ನೋವಿನ ಸಂಗತಿ ಎಂದು ಬಡಗಲಪುರ ನಾಗೇಂದ್ರ ಬೇಸರ.

Farmer's children don't get virgin even after reaching 45 years of age. State President of Green Sena of State Farmers Association, Badagalpura Nagendra said that this is a social problem and to create awareness about it, farmers association will start a movement. Farmers Union has been fighting till now against the injustice done to the farmers. But no one is coming forward to give daughters to farmers' children and young farmers. This is a social problem that has worried the farmers.

– ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡುಗೆ ಗ್ಯಾಸ್ ಬೆಲೆ‌ ಸಿಲಿಂಡರ್‌ಗೆ 50 ರೂ. ಹೆಚ್ಚಳ
April 7, 2025
6:20 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 07-04-2025 | ಕೆಲವೆಡೆ ಇಂದೂ ಮಳೆ ನಿರೀಕ್ಷೆ | ಎ.9 ರಿಂದ ಅಲ್ಲಲ್ಲಿ ಸಾಧಾರಣ ಮಳೆಯ ಸಾಧ್ಯತೆ |
April 7, 2025
2:11 PM
by: ಸಾಯಿಶೇಖರ್ ಕರಿಕಳ
ಜೇನು ಹುಳಗಳ ಸಂಖ್ಯೆ ಗಣನೀಯ ಇಳಿಕೆ | ಜೇನು ಕುಟುಂಬ ಉಳಿಸುವ ಅಭಿಯಾನ |
April 7, 2025
12:27 PM
by: ವಿಶೇಷ ಪ್ರತಿನಿಧಿ
ಹುಲಿಸಂರಕ್ಷಿತ ಪ್ರದೇಶಲ್ಲಿ ರಾತ್ರಿ ಸಂಚಾರ ನಿಷೇಧ | ನಿಷೇಧ ತೆರವುಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ
April 7, 2025
6:44 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group