ದಿನ ದಿನಕ್ಕೂ ಬಡವರಾಗಿಯೇ ಹೋಗುತ್ತಿರುವುದು ರೈತರು | ರೈತ ಸೋತು ಕೃಷಿ, ಆಹಾರ ಧಾನ್ಯ ಬೆಳೆಯುವುದರಿಂದ ಹಿಂದೆ ಸರಿದರೆ ಈ ದೇಶ ಅನ್ನ ಆಹಾರವಿಲ್ಲದೇ ಪರದಾಡಬೇಕಾಗುತ್ತದೆ |

January 16, 2024
8:59 PM

ಮಾರುಕಟ್ಟೆಯಲ್ಲಿ(Market) ನಮಗೆ ಟೊಮ್ಯಾಟೊ(Tomato) ಕೆಜಿಗೆ ಯಾವುದೇ ಕಾಲಕ್ಕೂ ಹತ್ತೇ ಹತ್ತು ರೂಪಾಯಿಗೆ ಸಿಗಬೇಕು. ಹಾಲಿಗೆ(Milk) ಲೀಟರ್ ಗೆ ಕೇವಲ ಐವತ್ತು ಪೈಸೆ ಆದರೂ ನಾವು ಗಲಾಟೆ ಮಾಡಿ ದೊಂಬಿ ಮಾಡಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುತ್ತೇವೆ..!!  ಆದರೆ ನಾವು ಎಂದಾದರೂ ನಾವು ಕಂಪನಿಯವರು ಹೇಳಿದಷ್ಟು ಹಣ ಕೊಟ್ಟು ಖರೀದಿಸುವ ಕಾರಿ ಗೆ ಇಷ್ಟು ಬೆಲೆ ಏಕೆ..? ಎಂದು ಕೇಳಿ ಕೊಂಡಿದ್ದೀವಾ? ಹೀಗೆ ವಾಷಿಂಗ್ ಮಿಷನ್, ಫ್ರಿಜ್, ಕೇರಂಬೋರ್ಡ ನ ನಮೂನೆಯ ಚಪ್ಪಟೆಯ ಟಿವಿಯ ಬೆಲೆ, ಅಂಗೈ ಅಗಲದ ಸ್ಮಾರ್ಟ್ ಮೊಬೈಲ್ ಬೆಲೆ, ಏಸಿ ಷೋ ರೂಂ ರೆಡಿಮೇಡ್ ಬಂಗಾರದ ಬೆಲೆ(Gold Rate), ತೂಕದ ಲೆಕ್ಕಾಚಾರದಲ್ಲಿ ಚಪ್ಪಲಿ‌ ಷೋ ರೂಂಗೆ ಬರುವ ಚಪ್ಪಲಿಗೆ ಯಾಕೆ ಅಷ್ಟು ಬೆಲೆ..? ಗೊತ್ತೇ ಆಗದಂತೆ ದಿನ ದಿನಕ್ಕೂ ಪೈಸೆ ಪೈಸೆ ಬೆಲೆ ಏರಿಸುತ್ತಾ ನೂರು ರೂಪಾಯಿಗೆ ತಂದು ಮುಟ್ಟಿಸಿದ ಪೆಟ್ರೋಲ್(Petrol) ಬೆಲೆಯ ಬಗ್ಗೆ ಸರ್ಕಾರಕ್ಕೆ(Govt) ಯಾಕೆ ಹೀಗೆ ಏರಿಸಿದ್ದೀರ ..? ಎಂದು ಕೇಳಿದ್ದೀರಾ..?

Advertisement
Advertisement
Advertisement

ಇಲ್ಲ ಇಲ್ಲ.. ಇವರಾರನ್ನ ಈ ದೇಶದ ಶ್ರೀ ಸಾಮಾನ್ಯ ಪ್ರಶ್ನೆ ಮಾಡೋಲ್ಲ.. ಆದರೆ ಈರುಳ್ಳಿ ಬೆಲೆ ಹೆಚ್ಚಾದರೆ ಸರ್ಕಾರ ಗಳೇ ಉರುಳುತ್ತದೆ.. ಟೊಮ್ಯಾಟೊ ಬೆಲೆ ಹೆಚ್ಚಾದರೆ ರಾಜ್ಯವೇ ಅಲ್ಲೋಲ ಕಲ್ಲೋಲ ಆಗುತ್ತದೆ.. ಯಾವತ್ತೋ ಐದು ಹತ್ತು ವರ್ಷಗಳಿಗೊಮ್ಮೆ ಕೆಲವೊಂದು ಬೆಳೆಗೆ ಕೆಲವು ರೈತರಿಗೆ(Farmer) ಮಾತ್ರ ಬಂಪರ್ ಬೆಲೆ ಸಿಗುತ್ತದೆ. ಸಾಮಾನ್ಯವಾಗಿ ರೈತ ನಷ್ಟಕ್ಕೊಳಗಾಗುವುದೇ ಹೆಚ್ಚು.. ರೈತರಿಗೆ ಕೃಷಿ(Agriculture) ಮಾಡಲು ಪಟ್ಟಣದ ಮಂದಿಗೆ ಗೃಹ ನಿರ್ಮಾಣಕ್ಕೆ ಅತ್ಯಂತ ಕಡಿಮೆ ಬಡ್ಡಿಯಲ್ಲಿ ಸಿಗುವ ನಲವತ್ತು ವರ್ಷಗಳ‌ ಸುದೀರ್ಘ ಕಂತಿನ ಸಾಲ ಸಿಗುವಂತೆ ಸಿಗುವುದಿಲ್ಲ.!! ಬ್ಯಾಂಕ್ ಗಳು ಅತ್ಯಂತ ನಿರ್ಲಜ್ಜವಾಗಿ ಅನ್ನ ಬೆಳೆವ ರೈತರಿಗೆ ಹೆಂಡತಿ ಒಡವೆ ತೆಗೆದುಕೊಂಡು ಬಾ ಅದನ್ನು ಅಡವಿಟ್ಟು ಕೃಷಿ ಮಾಡು ಎನ್ನುತ್ತವೆ..!!! ಐನೂರು ಜನ ಸಂಸದರಲ್ಲಿ ಯಾವೊಬ್ಬ ಸಂಸದನೂ ರೈತ ಯಾಕೆ ಬಂಗಾರ ಅಡವಿಟ್ಟು ಕೃಷಿ ಮಾಡಬೇಕು..? ರೈತರ ಕಂದಾಯ ಭೂಮಿಗೆ ಬೆಲೆಯೇ ಇಲ್ವಾ.? ರೈತ ತನ್ನ ಹೆಂಡತಿ ತಾಳಿ ಸರ ಅಡವಿಟ್ಟು ಕೃಷಿ ಮಾಡಬೇಕಾ..?ಎಂದು ಸದನದಲ್ಲಿ ಪ್ರಶ್ನೆ ಮಾಡಿದ್ದು ನಾನು ಕೇಳಿಲ್ಲ..!!

Advertisement

ಒಂದಲ್ಲ ಎರಡಲ್ಲ ಹದಿನೈದು ಲಕ್ಷ ಕೋಟಿ ರೂಪಾಯಿಗಳ ಉದ್ಯಮಿಗಳ‌ ಸಾಲ ಮನ್ನ‌ವಾಗಿದೆ. ರಾಜ್ಯದ ಬರ ಪೀಡಿತ ರೈತರಿಗೆ ಸಂಘವೊಂದು, ಸಂಬಂಧಿಸಿದ ಸಚಿವರಿಗೆ ಒತ್ತಡ ಹಾಕಿದ ಮೇಲೆ ಕೇಂದ್ರದ ಪಾಲು ಬಿಡುಗಡೆ ಆಗಿದೆ.  ಇನ್ನ ರಾಜ್ಯದ ಪಾಲು ಯಾವ ಕಾಲಕ್ಕೆ ಬಿಡುಗಡೆ ಆಗಿ ಅದು ಎಷ್ಟರ ಮಟ್ಟಿಗೆ ಪಾಪದ ಬಡ ರೈತರಿಗೆ ತಲುಪುತ್ತದೋ ಗೊತ್ತಿಲ್ಲ..!! “ಬಡ ಮೇಷ್ಟ್ರು” ತರದಲ್ಲಿ ಈ ದೇಶದಲ್ಲಿ “ಬಡ” ಎಂಬ ಸಂಭೋದನೆ ಮಾಡುವ ವೃತ್ತಿಯವರೆಲ್ಲರೂ “ಬಡಾ” ಆಗಿದ್ದಾರೆ. ಆದರೆ ದಿನ ದಿನಕ್ಕೂ ಬಡವರಾಗಿಯೇ ಹೋಗುತ್ತಿರುವುದು ರೈತರು ಮಾತ್ರ.!!! ರೈತರ ಸೋಲು ರೈತರ ನಷ್ಟ, ಸದ್ಯದ ಪರಿಸ್ಥಿತಿಯಲ್ಲಿ ರೈತರ ಕುಟುಂಬಕ್ಕೆ ಮಾತ್ರ. ಈಗಾಗಲೇ ಮಾರುಕಟ್ಟೆ ವ್ಯವಸ್ಥೆ ರೈತರ ನೋಯಿಸಿ ಭತ್ತವನ್ನು ಕಡಿಮೆ ಬೆಲೆಗೆ ಖರೀದಿಸಿ ಖರೀದಿಸಿ ರೈತ ಭತ್ತ ಬೆಳೆಯುವುದನ್ನ ಕಡಿಮೆ ಮಾಡಿ ಕಡಿಮೆ ಮಾಡಿ ಅಕ್ಕಿ ಬೆಲೆ ಅರವತ್ತು ದಾಟಿದೆ..!??

ಎಚ್ಚರಿಕೆ ಮಿತ್ರರೆ.. ರೈತರು ಸೋಲಬಾರದು.. ರೈತ ಸೋತು ಕೃಷಿ ಆಹಾರ ಧಾನ್ಯ ಬೆಳೆಯುವುದರಿಂದ ಹಿಂದೆ ಸರಿದರೆ ಈ ದೇಶ ಅನ್ನ ಆಹಾರವಿಲ್ಲದೇ ಪರದಾಡುವಂತಾಗುತ್ತದೆ. ಸಾಮಾನ್ಯ ಜನಗಳು ಆಗ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ ಕೊಳ್ಳಲಾರದಂತ ದುಸ್ಥಿತಿಗೆ ಬಂದು ನಿಲ್ಲುತ್ತಾನೆ. ಅದು ಪಾಕಿಸ್ತಾನದ ದುಸ್ಥಿತಿಗಿಂತ ಕೆಟ್ಟ ಪರಿಸ್ಥಿತಿ ಗೆ ಹೋಗಬಹುದು.!!! ಇವತ್ತು ಬಯಲು ಸೀಮೆಯ ಮೂರು ಬೆಳೆ ಭತ್ತ ಬೆಳೆವ ರೈತ ಬಂಗಾರದಂಹ ಭತ್ತ ಬೆಳೆವ ಗದ್ದೆಯಲ್ಲಿ ಇಂದು ವಾಣಿಜ್ಯ ಬೆಳೆ ಅಡಿಕೆ ಹಾಕುತ್ತಿದ್ದಾನೆ. ಭತ್ತಕ್ಕೆ ಅವನಿಗೆ ನ್ಯಾಯಯುತ ಲಾಭದಾಯಕ ಬೆಲೆ ಸಿಕ್ಕಿದ್ದಿದ್ದರೆ ಅವನು ಅಡಿಕೆ ಬೆಳೆಯುತ್ತಿದ್ದನಾ.? ಇವತ್ತು ಅನೇಕರು ಅವನು ಆಹಾರ ಬೆಳೆಯೇ ಬೆಳೆಯಬೇಕು ಎನ್ನುತ್ತಾರೆ. ಆದರೆ ಭತ್ತ ಬೆಳೆದು ಸೋತವನಿಗೂ ನಾನೂ ಎಕರೆಗೆ ಲಕ್ಷ ಲಕ್ಷ ಹಣ ಉತ್ಪತ್ತಿ ಬರುವ ಬೆಳೆ ಕೃಷಿ ಮಾಡಬೇಕು ಎಂಬ ಆಸೆ ಇರಬಾರದಾ..?

Advertisement

ಮಿತ್ರರೇ.. ಈ ಸಂಕ್ರಾಂತಿಯಲ್ಲಿಯಾದರು ನಮಗಾಗಿ ನಮ್ಮಂಥ ಶ್ರೀ ಸಾಮಾನ್ಯ ರೇ ಹೆಚ್ಚಿರುವ ಸಹ ಸಮಾಜಕ್ಕಾಗಿ ಈ ನಾಡಿನ ಆಹಾರ ಧಾನ್ಯ ಬೆಳೆವ, ದೇಸಿ ತಳಿ ಆಹಾರ ಧಾನ್ಯ ಬೆಳೆವ, ಗೋವುಗಳ ಸಂವರ್ಧನೆ ಮಾಡುವವರ ಆರೋಗ್ಯಕರ ಉತ್ಪನ್ನ ಗಳನ್ನು ನೇರವಾಗಿ ಉತ್ತಮ ಬೆಲೆಗೆ ಖರೀದಿಸಿ ಆ ರೈತರನ್ನು ಪ್ರೋತ್ಸಾಹಿಸುವ ಸಂಕಲ್ಪ ಮಾಡೋಣ. ಸಾಧ್ಯವಾದಷ್ಟು ಸಾವಯವ ಹಣ್ಣು ಹಾಲು ತರಕಾರಿ ಧಾನ್ಯಗಳನ್ನು ಬೆಳೆವ ಕೃಷಿಕರನ್ನ ನೇರವಾಗಿ ತಲುಪಿ ಅವನ ಕೃಷಿ ಯನ್ನು ಉತ್ತೇಜಿಸಿ ಈ ಸಮಾಜ ವನ್ನು ಉಳಿಸೋಣ. ರೈತ ಮತ್ತು ಕೃಷಿ ಉಳಿಯಬೇಕು. ಉಳಿದರೆ ನಾವೆಲ್ಲರೂ ಉಳಿಯಲು ಸಾಧ್ಯ.
ಜೈ ಕಿಸಾನ್..

ಬರಹ :
ಪ್ರಬಂಧ ಅಂಬುತೀರ್ಥ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror