ಈ ವರ್ಷ ಕಬ್ಬಿಗೆ ಕಾರ್ಖಾನೆ ಮಾಲೀಕರು ರೈತರಿಗೆ ಹೇಗೆ ದರ ಕೊಡಬಹುದು..? ಪ್ರತಿ ವರ್ಷ ರೈತ ಹಾಗೂ ಸಕ್ಕರೆ ಕಾರ್ಖಾನೆ ಮಧ್ಯೆ ಬೆಲೆಗಾಗಿ ಕಾದಾಟ ಇದ್ದಿದ್ದೇ. ರೈತರು ಕಷ್ಟ ಪಟ್ಟು ಬೆಳೆದ ಕಬ್ಬಿಗೆ ಸರಿಯಾದ ಬೆಲೆ, ಸೂಕ್ತ ಸಮಯಕ್ಕೆ ಬೆಲೆ ಸಿಗುವ ಹಾಗೆ ಆಗಬೇಕು. ಸಕ್ಕರೆ ಕಾರ್ಖಾನೆಗಳು ಈ ವರ್ಷ 2023-24 ರ ಕಬ್ಬಿಗೆ ರೂಪಾಯಿ 3500.00 ಪ್ರತೀ ಟನ್ನಿಗೆ ಸಿಗುವ ಹಾಗೆ ಆಗಬೇಕು, ಇದು ನಿರೀಕ್ಷೆ…
Advertisement
ಪ್ರತೀ ಟನ್ ಕಬ್ಬಿಗೆ ಸರಾಸರಿ 115 ಕೆಜಿ ಸಕ್ಕರೆ ಸಿಗುತ್ತದೆ ಅಂದರೆ 3600 ರೂಪಾಯಿ ಪ್ರತೀಕ್ವಿಂಟಾಲ್ ಗೆ. ಇನ್ನು ಮಳಿ (molasys) , ಬಗ್ಯಸ್ (bagasse) , ಪ್ರೆಸ್ಸ್ ಮಡ್ ಎಲ್ಲಾ ಸೇರಿ ಅಂದಾಜು 5000 ರೂಪಾಯಿ ಲಭ್ಯವಾಗಬೇಕು. ಇನ್ನು ಪ್ರತಿ ಕಾರ್ಖಾನೆಗಳು ಎಥನಾಲ್ ಹಾಗೂ ವಿದ್ಯುತ್ ( ಕೋ.gen) ತಯಾರು ಮಾಡುತ್ತಿದ್ದಾರೆ. ಅದರಲ್ಲೂ ಆದಾಯ ಬರುತ್ತದೆ ಕಾರ್ಖಾನೆಗಳಿಗೆ. ಇನ್ನು ಒಟ್ಟು ಖರ್ಚು ಲೆಕ್ಕ ಹಾಕಿದರೂ 3700 ರೂಪಾಯಿ ಆಗುತ್ತದೆ. ಇದು ಎಥೆನಾಲ್ & co.gen ವಿದ್ಯುತ್ ಉತ್ಪಾದನೆ ಆದಾಯ ಬಿಟ್ಟು. ಹೀಗೆ ಪ್ರತೀ ಸಕ್ಕರೆ ಕಾರ್ಖಾನೆ ರೈತರ ಪ್ರತೀ ಟನ್ ಕಬ್ಬಿಗೆ 3500 ರೂ ಕೊಟ್ಟ ನಂತರವೂ ಕೂಡ ಸಾಕಷ್ಟು ಲಾಭ ಉಳಿಯುತ್ತದೆ. ಆದರೆ ಕಾರ್ಖಾನೆಯವರು ಕೊಡುವುದಿಲ್ಲ. ಕಾರಣ ರೈತ ತಾನು ಕಷ್ಟ ಪಟ್ಟು ಬೆಳೆದ ಕಬ್ಬಿಗೆ ಕಿಮ್ಮತ್ತು ಕೇಳುವ ಹಿಮ್ಮತ್ತು ಮಾಡುವುದಿಲ್ಲ. ಮೇಲಾಗಿ ದರ ಜಾಹೀರು ಮಾಡದೇ ಕಾರ್ಖಾನೆ ಶುರು ಮಾಡಲು ಕಬ್ಬು ಪೂರೈಸುತ್ತಾರೆ. ಹಾಗೆ ಕಬ್ಬು ಕೊಟ್ಟು , ಕಡಿಮೆ ದರ ಅದರೂ ಕೂಡ ಕಾರ್ಖಾನೆ ಶುರು ಮಾಡಿ ತಿಂಗಳ ನಂತರ ಕೊಟ್ಟರೂ ಸರಿ. ಸುಮ್ಮನೆ ಇರುತ್ತಾನೆ. ಈ ವರ್ಷ ಕೂಡ ಅದೇ ನಾಟಕ ನಡೆದಿದೆ. ರೈತರು ಹೀಗೆ ಕಾರ್ಖಾನೆಗಳಿಗೆ ಈಗಲೇ ಕಬ್ಬು ಕೊಟ್ಟರೆ 2900 ಕ್ಕಿಂತ ಹೆಚ್ಚಿನ ದರ ಕೊಡುವುದಿಲ್ಲ, ಯಾಕೆಂದರೇ ದರ ಕಡಿಮೆ ಇದೆ ಅಂತ ಗೊತ್ತಿದ್ದರೂ ಕೂಡ ಕಾರ್ಖಾನೆಗಳ ಅಡ್ಡೆಗಳು ಜಾಮ್ ಆದರೆ ನಂತರ ಕೊಡಲು ಕಾರ್ಖಾನೆಯ ಮಾಲೀಕರು ಅಷ್ಟೊಂದು ದಯಾಳುಗಳಲ್ಲಾ, ಕೊಟ್ಟರೂ 20..30. ಹೆಚ್ಚು ಕೊಡಬಹುದು, ಅಂದ್ರೆ 2900. ರ ಆಸು - ಪಾಸು ಕಥೆ ಮುಗಿಯುತ್ತದೆ. ಅದಕ್ಕೆ ಮಹಾರಾಷ್ಟ್ರದ ದರ ಘೋಷಣೆ ಆಗುವವರೆಗೆ ಕಾದು ನೋಡಿ. ಇಲ್ಲದಿದ್ದರೆ ಈ ವರ್ಷ ಕಬ್ಬು ಅತೀ ಕಡಿಮೆ ಇದೆ. ಸಕ್ಕರೆಗೆ ಹೆಚ್ಚು ದರ ಇದೆ. ಎಥನಾಲ್ ಮಾಡುತ್ತಿದ್ದಾರೆ. Co Gen (ಕರೆಂಟ್) ತಯಾರು ಮಾಡ್ತಾರೆ. ಇಂತಹ ವರ್ಷ ಕೂಡ ಲಾಭ ಪಡಿಯದೆ ಹೋದರೆ ರೈತ ಯಾವತ್ತೂ ಗೆಲ್ಲಲಾರ..ಬರಹ :ಅಂಬು ಮಾರಲಭಾವಿ ಗೋಲಗೇರಿ, ರೈತ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement