ರಬ್ಬರ್‌ ಧಾರಣೆ ಇಳಿಕೆ | ಕೇರಳದಲ್ಲಿ ರಬ್ಬರ್‌ ಮಾರಾಟ ಸ್ಥಗಿತಕ್ಕೆ ಬೆಳೆಗಾರರು ನಿರ್ಧಾರ |

November 17, 2024
3:48 PM
ರಬ್ಬರ್ ಬೆಲೆ ಆಗಸ್ಟ್ ತಿಂಗಳಲ್ಲಿ ಪ್ರತಿ ಕಿಲೋಗ್ರಾಂಗೆ 247 ರೂಪಾಯಿ ತಲುಪಿದ್ದು, ಈಗ 175-185 ರ ಆಸುಪಾಸಿಗೆ ಇಳಿದಿದೆ, ಇದು ಈಚೆಗಿನ ಕನಿಷ್ಟ ಧಾರಣೆಯಾಗಿದೆ.

ಕಳೆದ ಕೆಲವು ಸಮಯದಿಂದ ರಬ್ಬರ್‌ ಧಾರಣೆ ಇಳಿಕೆಯ ಹಾದಿಯಲ್ಲಿದೆ. ಸದ್ಯ ಸ್ಥಿರತೆ ಸಾಧಿಸಿದ್ದರೂ 200 ರೂಪಾಯಿಗಿಂತ ಕಡಿಮೆ ಧಾರಣೆ ಇದ್ದರೆ ಬೆಳೆಗಾರರಿಗೆ ನಷ್ಟವಾಗುತ್ತಿದೆ. ಹೀಗಾಗಿ  ಕೇರಳದಲ್ಲಿ ಸಣ್ಣ ಪ್ರಮಾಣದ ರಬ್ಬರ್‌ ಹೊಂದಿರುವ ಬೆಳೆಗಾರರು ಮಾರಾಟವನ್ನು ನಿಲ್ಲಿಸುವ ಅಭಿಯಾನ ಆರಂಭಿಸಿದ್ದಾರೆ.…..ಮುಂದೆ ಓದಿ….

Advertisement

ರಬ್ಬರ್‌ ಧಾರಣೆ ತೀವ್ರ ಕುಸಿತದ ಹಿನ್ನೆಲೆಯಲ್ಲಿ ರಬ್ಬರ್‌ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ರಾಷ್ಟ್ರೀಯ ರಬ್ಬರ್ ಉತ್ಪಾದಕರ ಒಕ್ಕೂಟಗಳ ಒಕ್ಕೂಟ  ಹಾಗೂ ಕೇರಳದ ಸಣ್ಣಪ್ರಮಾಣದ ರಬ್ಬರ್ ಬೆಳೆಗಾರರ ಸಂಘವು ರಬ್ಬರ್‌ ಉತ್ಪಾದನೆಯಲ್ಲಿ ಸರಿಯಾದ ಧಾರಣೆ ಸಿಗದೇ ಇದ್ದರೆ ಬೆಳೆಗಾರರಿಗೆ ತೀವ್ರ ನಷ್ಟವಾಗುವುದರಿಂದ ಸದ್ಯ ರಬ್ಬರ್‌ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಪ್ರತಿ ಕಿಲೋಗ್ರಾಂಗೆ 200 ರೂಪಾಯಿ ಲಭ್ಯವಾಗಬೇಕು ಎನ್ನುವುದು ಬೆಳೆಗಾರರ ಅಪೇಕ್ಷೆಯಾಗಿದೆ. ರಬ್ಬರ್‌ ಮಾರಾಟ ಸ್ಥಗಿತಗೊಳಿಸುವ ಅಭಿಯಾನದ ಭಾಗವಾಗಿ, ಕೇರಳದ ರಬ್ಬರ್ ಬೆಳೆಯುವ ಪ್ರದೇಶಗಳಲ್ಲಿ ಸಮಾವೇಶಗಳು ಮತ್ತು ರಾಲಿಗಳನ್ನು ನಡೆಸಲು ನಿರ್ಧರಿಸಿದ್ದಾರೆ. ರಬ್ಬರ್ ಬೆಲೆ ಪ್ರತಿ ಕಿಲೋಗ್ರಾಂಗೆ ₹ 200 ಕ್ಕಿಂತ ಹೆಚ್ಚಾಗುವವರೆಗೆ ಈ ಅಭಿಯಾನ ಮುಂದುವರಿಯಲಿದೆ.

ಟೈಯರ್ ಕಂಪನಿಗಳು ರಬ್ಬರ್  ಆಮದು ಮಾಡಿಕೊಳ್ಳುವ ಮೂಲಕ ‌ ಅವರಿಗೆ ನಷ್ಟವಾಗಿದೆ. ಈ ನಷ್ಟವನ್ನು ಈಗ ರಬ್ಬರ್‌ ಬೆಳೆಗಾರರ ಮೇಲೆ ಹೇರುತ್ತಿರುವುದು ಸರಿಯಲ್ಲ. ಇಲ್ಲಿನ ರಬ್ಬರ್‌ ಉತ್ಪಾದನೆ ಇದ್ದರೂ ಆಮದು ಮಾಡಿಕೊಂಡ ಕಂಪನಿಗಳಿಗೆ ಈಗ ನಷ್ಟವಾಗಿದೆ. ಇದಕ್ಕೆ ಬೆಳೆಗಾರರು ಹೊಣೆಯಲ್ಲ ಎಂದು ಎನ್‌ಸಿಆರ್‌ಪಿಎಸ್‌ನ ಪ್ರಧಾನ ಕಾರ್ಯದರ್ಶಿ ಬಾಬು ಜೋಸೆಫ್ ಮಾಧ್ಯಮಗಳಿಗೆ ಹೇಳಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಬ್ಬರ್‌ ಮಾರುಕಟ್ಟೆಯಲ್ಲಿನ ಈ ವ್ಯತ್ಯಾಸದ ಸಂದರ್ಭ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ತಕ್ಷಣವೇ ಬೆಳೆಗಾರರಿಗೆ ಸೂಕ್ತವಾದ ಧಾರಣೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಬ್ಬರ್ ಬೆಲೆ ಆಗಸ್ಟ್ ತಿಂಗಳಲ್ಲಿ ಪ್ರತಿ ಕಿಲೋಗ್ರಾಂಗೆ 247 ರೂಪಾಯಿ ತಲುಪಿದ್ದು, ಈಗ 175-185 ರ ಆಸುಪಾಸಿಗೆ ಇಳಿದಿದೆ, ಇದು ಅತ್ಯಂತ ಕನಿಷ್ಟ ಧಾರಣೆಯಾಗಿದೆ.

Natural Rubber rate is declining. Now the Rubber Growers’ Association have dicided to temporarily hold t the sale of rubber. This decision was made to prevent significant losses for growers due to the lack of proper retention in rubber production.The growers are demanding ₹200 per kilogram for rubber. Conventions and rallies are being planned in the rubber growing areas of Kerala as part of the campaign to stop the sale of rubber. The campaign will persist until the price of rubber surpasses ₹200 per kilogram.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರ ಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ | ಜಿಲ್ಲೆಯ ಅತ್ಯುತ್ತಮ ಕೃಷಿ ಸಖಿ ಪ್ರಶಸ್ತಿ
April 24, 2025
9:47 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 24-04-2025 | ಎ.26 ರಿಂದ ರಾಜ್ಯದ ವಿವಿದೆಡೆ ಮಳೆ ಪ್ರಮಾಣ ಹೆಚ್ಚಳ |
April 24, 2025
9:22 PM
by: ಸಾಯಿಶೇಖರ್ ಕರಿಕಳ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು
April 24, 2025
6:45 AM
by: The Rural Mirror ಸುದ್ದಿಜಾಲ
ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ
April 24, 2025
6:29 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group