ರಬ್ಬರ್‌ ಧಾರಣೆ ಕುಸಿತ | ಸರ್ಕಾರದ ಮಧ್ಯಪ್ರವೇಶಕ್ಕೆ ಬೆಳೆಗಾರರ ಒತ್ತಾಯ |

November 12, 2024
6:55 AM
‌ರಬ್ಬರ್ ಬೆಲೆ ಕುಸಿತದಿಂದಾಗಿ ಭಾರತದಲ್ಲಿ ಬೆಳೆಗಾರರು ಬಳಲುತ್ತಿರುವಾಗ, ರಬ್ಬರ್ ಆಮದು ಏಪ್ರಿಲ್ ಮತ್ತು ಸೆಪ್ಟೆಂಬರ್ 2024 ರ ನಡುವೆ ಶೇಕಡಾ 22 ರಷ್ಟು ಹೆಚ್ಚಾಗಿದೆ.ಕಳೆದ ವರ್ಷ 2,54,488 ಟನ್‌ಗಳಿಂದ ಈ ವರ್ಷ 3,10,713 ಟನ್‌ಗೆ ಏರಿಕೆಯಾಗಿದೆ.

ರಬ್ಬರ್‌ ಧಾರಣೆ ಕುಸಿತದ ಕಾರಣದಿಂದ ಹಲವಾರು ದೇಶದ  ರಬ್ಬರ್‌ ಬೆಳೆಗಾರರ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ತಕ್ಷಣವೇ ಸರ್ಕಾರ ಮಧ್ಯಪ್ರವೇಶಿಸಿ ಧಾರಣೆ ಕುಸಿಯದಂತೆ ತಡೆಯಬೇಕು ಎಂದು ಅಖಿಲ ಭಾರತ ಕಿಸಾನ್‌ ಸಭಾ ಹಾಗೂ ರಬ್ಬರ್‌ ಬೆಳೆಗಾರರ ಸಂಘವು ಒತ್ತಾಯಿಸಿದೆ.

Advertisement
Advertisement

ರಬ್ಬರ್ ಬೋರ್ಡ್ ಇರುವ ಕೊಟ್ಟಾಯಂ ಜಿಲ್ಲೆಯಲ್ಲಿ ರಬ್ಬರ್ ಬೆಲೆ ಈ ವರ್ಷದ ಆಗಸ್ಟ್‌ನಲ್ಲಿ ಕೆಜಿಗೆ 247 ರೂ.ಗೆ ಏರಿದ ನಂತರ ಅಕ್ಟೋಬರ್‌ನಲ್ಲಿ ಕೆಜಿಗೆ 184 ರೂ.ಗೆ ಕುಸಿದಿದೆ, ಇದೀಗ 180 ರೂಪಾಯಿಗೆ ಇಳಿಕೆಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ವಿಶೇಷವಾಗಿ ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್ ಬೆಲೆಗಳು ಹೆಚ್ಚಾದಾಗ ಹಾಗೂ ಬೇಡಿಕೆ ಇದ್ದಾಗಲೂ ಕೂಡಾ , ರಬ್ಬರ್ ಧಾರಣೆ   ಹಠಾತ್ ಕಂಡಿದೆ. ಇದಕ್ಕೆ ಆಮದು ನೀತಿಯಲ್ಲಿನ ಸಡಿಲಿಕೆಯೇ ಕಾರಣ ಎಂದು ರೈತರು ಆರೋಪಿಸಿದ್ದಾರೆ.

ದೇಶದಲ್ಲಿ ಕೇರಳವು ಹೆಚ್ಚು ರಬ್ಬರ್‌ ಉತ್ಪಾದಿಸುತ್ತದೆ. 10 ಲಕ್ಷಕ್ಕೂ ಹೆಚ್ಚು ರಬ್ಬರ್ ಬೆಳೆಗಾರರು ಮತ್ತು ಸುಮಾರು 5 ಲಕ್ಷದಷ್ಟು ಕಾರ್ಮಿಕರು ರಬ್ಬರ್‌ ತೋಟಗಳಲ್ಲಿ ಕೆಲಸ ಮಾಡುತ್ತಾರೆ. ಜೀವನೋಪಾಯಕ್ಕಾಗಿ ರಬ್ಬರ್‌ ವಲಯವನ್ನು ಅವಲಂಬಿಸಿದ್ದಾರೆ.ಈಗ ಬೆಲೆಯ ಕುಸಿತವು ಈ ಕುಟುಂಬಗಳಿಗೆ, ವಿಶೇಷವಾಗಿ ಸಣ್ಣ ರೈತರು ಮತ್ತು ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ. ಈಗ ಬೆಲೆಗಳಲ್ಲಿನ ಅಸ್ಥಿರತೆ, ಹೆಚ್ಚುತ್ತಿರುವ ಆಮದು ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಇತರ ಪರಿಸ್ಥಿತಿಗಳು ಕೇರಳ ಮತ್ತು ತ್ರಿಪುರದಂತಹ  ರಬ್ಬರ್ ಉತ್ಪಾದಕ ರಾಜ್ಯಗಳಲ್ಲಿ ಲಕ್ಷಾಂತರ ರಬ್ಬರ್ ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿವೆ. ಹೀಗಾಗಿ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಲೆ ಕುಸಿತದಿಂದಾಗಿ ಭಾರತದಲ್ಲಿ ಬೆಳೆಗಾರರು ಬಳಲುತ್ತಿರುವಾಗ, ರಬ್ಬರ್ ಆಮದು ಏಪ್ರಿಲ್ ಮತ್ತು ಸೆಪ್ಟೆಂಬರ್ 2024 ರ ನಡುವೆ ಶೇಕಡಾ 22 ರಷ್ಟು ಹೆಚ್ಚಾಗಿದೆ.ಕಳೆದ ವರ್ಷ 2,54,488 ಟನ್‌ಗಳಿಂದ ಈ ವರ್ಷ 3,10,713 ಟನ್‌ಗೆ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ರಬ್ಬರ್ ಬೆಲೆಗಳು ದೇಶೀಯ ಮಾರುಕಟ್ಟೆಯಿಂದ ಹೆಚ್ಚಾಗಿದೆ. ಹೀಗಿರುವಾಗ  ವಾಣಿಜ್ಯ ಸಚಿವಾಲಯವು ಇಲ್ಲಿನ ಬೆಳೆಗಾರರಿಗೆ ಉತ್ತಮ ಬೆಲೆಯನ್ನು ನೀಡಲು ಸಹಾಯ ಮಾಡಲು ನೈಸರ್ಗಿಕ ರಬ್ಬರ್  ರಫ್ತು ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ರಬ್ಬರ್ ಬೆಳೆಗಾರರ ಸಂಘವು ಆರೋಪಿಸಿದೆ.

ರಬ್ಬರ್‌ ಬೆಳೆಗಾರರು ಧಾರಣೆ ಅಸ್ಥಿರತೆಯ ವಿರುದ್ಧ ಹೋರಾಡುತ್ತಿದ್ದಾರೆ. ಅನೇಕ ಬೆಳೆಗಾರರಿಗೆ ರಬ್ಬರ್‌ ಪ್ರಮುಖ ಆದಾಯದ ಮೂಲವಾಗಿದೆ. ಕೇರಳ ಮಾತ್ರವಲ್ಲ ಕರ್ನಾಟಕದ ಕೆಲವು ಕಡೆ, ತ್ರಿಪುರಾದಲ್ಲಿ ಕೂಡಾ ಹಲವಾರು ಮಂದಿ ಇದ್ದಾರೆ. ಇಂತಹ ರೈತರಿಗೆ ಸಮಸ್ಯೆಯಾಗುತ್ತಿದೆ.‌ ಹೀಗಾಗಿ ತಕ್ಷಣವೇ ಸರ್ಕಾರ ಮಧ್ಯಪ್ರವೇಶಿಸಿ ಧಾರಣೆ ಸ್ಥಿರತೆ ಹಾಗೂ ಇಳಿಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು  ಎಐಕೆಎಸ್ ರಾಜ್ಯ ಉಪಾಧ್ಯಕ್ಷ ಕೆ ಜೆ ಜೋಸೆಫ್ ಹೇಳುತ್ತಾರೆ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ |29.05.2025 | ಮೇ.31ರಿಂದ ಮಳೆ ಪ್ರಮಾಣ ಕಡಿಮೆ
May 29, 2025
2:42 PM
by: ಸಾಯಿಶೇಖರ್ ಕರಿಕಳ
ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ
May 29, 2025
7:40 AM
by: The Rural Mirror ಸುದ್ದಿಜಾಲ
ಭಾರತ್ ಮುನ್ಸೂಚನಾ ವ್ಯವಸ್ಥೆ | ಭಾರತದಿಂದ ವಿಶ್ವದ ಅತ್ಯಂತ ನಿಖರವಾದ ಹವಾಮಾನ ಮಾದರಿಗೆ ಚಾಲನೆ | ಸಣ್ಣ ಪ್ರಮಾಣದ ಹವಾಮಾನ ಸ್ಥಿತಿಗತಿಗಳ ನಿಖರವಾದ ಮಾಹಿತಿ ಲಭ್ಯ|
May 29, 2025
7:37 AM
by: ದ ರೂರಲ್ ಮಿರರ್.ಕಾಂ
ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ
May 29, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group