ರಬ್ಬರ್ ಧಾರಣೆ ಕುಸಿತದ ಕಾರಣದಿಂದ ಹಲವಾರು ದೇಶದ ರಬ್ಬರ್ ಬೆಳೆಗಾರರ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ತಕ್ಷಣವೇ ಸರ್ಕಾರ ಮಧ್ಯಪ್ರವೇಶಿಸಿ ಧಾರಣೆ ಕುಸಿಯದಂತೆ ತಡೆಯಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಹಾಗೂ ರಬ್ಬರ್ ಬೆಳೆಗಾರರ ಸಂಘವು ಒತ್ತಾಯಿಸಿದೆ.
ರಬ್ಬರ್ ಬೋರ್ಡ್ ಇರುವ ಕೊಟ್ಟಾಯಂ ಜಿಲ್ಲೆಯಲ್ಲಿ ರಬ್ಬರ್ ಬೆಲೆ ಈ ವರ್ಷದ ಆಗಸ್ಟ್‌ನಲ್ಲಿ ಕೆಜಿಗೆ 247 ರೂ.ಗೆ ಏರಿದ ನಂತರ ಅಕ್ಟೋಬರ್‌ನಲ್ಲಿ ಕೆಜಿಗೆ 184 ರೂ.ಗೆ ಕುಸಿದಿದೆ, ಇದೀಗ 180 ರೂಪಾಯಿಗೆ ಇಳಿಕೆಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ವಿಶೇಷವಾಗಿ ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್ ಬೆಲೆಗಳು ಹೆಚ್ಚಾದಾಗ ಹಾಗೂ ಬೇಡಿಕೆ ಇದ್ದಾಗಲೂ ಕೂಡಾ , ರಬ್ಬರ್ ಧಾರಣೆ ಹಠಾತ್ ಕಂಡಿದೆ. ಇದಕ್ಕೆ ಆಮದು ನೀತಿಯಲ್ಲಿನ ಸಡಿಲಿಕೆಯೇ ಕಾರಣ ಎಂದು ರೈತರು ಆರೋಪಿಸಿದ್ದಾರೆ.
ದೇಶದಲ್ಲಿ ಕೇರಳವು ಹೆಚ್ಚು ರಬ್ಬರ್ ಉತ್ಪಾದಿಸುತ್ತದೆ. 10 ಲಕ್ಷಕ್ಕೂ ಹೆಚ್ಚು ರಬ್ಬರ್ ಬೆಳೆಗಾರರು ಮತ್ತು ಸುಮಾರು 5 ಲಕ್ಷದಷ್ಟು ಕಾರ್ಮಿಕರು ರಬ್ಬರ್ ತೋಟಗಳಲ್ಲಿ ಕೆಲಸ ಮಾಡುತ್ತಾರೆ. ಜೀವನೋಪಾಯಕ್ಕಾಗಿ ರಬ್ಬರ್ ವಲಯವನ್ನು ಅವಲಂಬಿಸಿದ್ದಾರೆ.ಈಗ ಬೆಲೆಯ ಕುಸಿತವು ಈ ಕುಟುಂಬಗಳಿಗೆ, ವಿಶೇಷವಾಗಿ ಸಣ್ಣ ರೈತರು ಮತ್ತು ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ. ಈಗ ಬೆಲೆಗಳಲ್ಲಿನ ಅಸ್ಥಿರತೆ, ಹೆಚ್ಚುತ್ತಿರುವ ಆಮದು ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಇತರ ಪರಿಸ್ಥಿತಿಗಳು ಕೇರಳ ಮತ್ತು ತ್ರಿಪುರದಂತಹ ರಬ್ಬರ್ ಉತ್ಪಾದಕ ರಾಜ್ಯಗಳಲ್ಲಿ ಲಕ್ಷಾಂತರ ರಬ್ಬರ್ ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿವೆ. ಹೀಗಾಗಿ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಲೆ ಕುಸಿತದಿಂದಾಗಿ ಭಾರತದಲ್ಲಿ ಬೆಳೆಗಾರರು ಬಳಲುತ್ತಿರುವಾಗ, ರಬ್ಬರ್ ಆಮದು ಏಪ್ರಿಲ್ ಮತ್ತು ಸೆಪ್ಟೆಂಬರ್ 2024 ರ ನಡುವೆ ಶೇಕಡಾ 22 ರಷ್ಟು ಹೆಚ್ಚಾಗಿದೆ.ಕಳೆದ ವರ್ಷ 2,54,488 ಟನ್‌ಗಳಿಂದ ಈ ವರ್ಷ 3,10,713 ಟನ್‌ಗೆ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ರಬ್ಬರ್ ಬೆಲೆಗಳು ದೇಶೀಯ ಮಾರುಕಟ್ಟೆಯಿಂದ ಹೆಚ್ಚಾಗಿದೆ. ಹೀಗಿರುವಾಗ ವಾಣಿಜ್ಯ ಸಚಿವಾಲಯವು ಇಲ್ಲಿನ ಬೆಳೆಗಾರರಿಗೆ ಉತ್ತಮ ಬೆಲೆಯನ್ನು ನೀಡಲು ಸಹಾಯ ಮಾಡಲು ನೈಸರ್ಗಿಕ ರಬ್ಬರ್ ರಫ್ತು ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ರಬ್ಬರ್ ಬೆಳೆಗಾರರ ಸಂಘವು ಆರೋಪಿಸಿದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…