ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ

August 16, 2025
11:17 AM

ದೇಶದ ರೈತರ ಹಿತಕ್ಕೆ ಧಕ್ಕೆಯಾಗುವ ಯಾವುದೇ ಒಪ್ಪಂದಗಳನ್ನು ಭಾರತ ಮಾಡಿಕೊಳ್ಳುವುದಿಲ್ಲ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ರೈತರೊಂದಿಗೆ ಸಂವಾದ ನಡೆಸಿದ ಬಳಿಕ ಅವರು, ಭಾರತ ಇತರ ದೇಶಗಳೊಂದಿಗೆ ಸ್ನೇಹ ಸಂಬಂಧ ಕಾಪಾಡಿಕೊಂಡು ನ್ಯಾಯ ಸಮ್ಮತ ವಾಣಿಜ್ಯ ಒಪ್ಪಂದಗಳಿಗೆ ಇಚ್ಚಿಸುತ್ತದೆ. ಈ ಒಪ್ಪಂದಗಳು ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ಮಂತ್ರದ ಕರೆ ನೀಡಿದ್ದಾರೆ. ಅದರಂತೆ ರೈತರು ದೇಶದಲ್ಲೇ ತಯಾರಿಸಿದ ಉತ್ಪನ್ನಗಳನ್ನು ಬಳಸಲು ಸಂಕಲ್ಪ ಮಾಡಿದ್ದಾರೆ.  ಸರ್ಕಾರಕ್ಕೆ ರಾಷ್ಟ್ರೀಯ ಹಿತಾಸಕ್ತಿಯೆ ಅತಿಮುಖ್ಯವಾಗಿದೆ. ಪ್ರಧಾನಿ ಅವರು ಇಂದು ತಮ್ಮ ಭಾಷಣದಲ್ಲಿ ದೇಶಭಕ್ತಿಯ ಸ್ಫೂರ್ತಿ ತುಂಬಿದ್ದು, ಹೊಸ ಹಾದಿ ತೋರಿದ್ದಾರೆ ಎಂದರು. ಕೊನೆಯ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ವೇಳೆ ಎದುರಾಗುವ ಅಡೆತಡೆಗಳನ್ನು ನಿವಾರಿಸಲು ವಿಜ್ಞಾನಿಗಳ ತಂಡವೊಂದನ್ನು ರಚಿಸಲಾಗುವುದು. ಹಿಂಗಾರು ಬೆಳೆ ಹಂಗಾಮಿಗೆ ಕೃಷಿ ಇಲಾಖೆ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮುಂದಿನ ತಿಂಗಳ 15-16ರಂದು ದೆಹಲಿಯಲ್ಲಿ ಹಿಂಗಾರು ಸಮಾವೇಶ ನಡೆಯಲಿದ್ದು, ಇದರಲ್ಲಿ ರಾಜ್ಯಗಳ ಕೃಷಿ ಸಚಿವರು, ತಜ್ಞರು, ಕೃಷಿ ವಿಜ್ಞಾನಿಗಳು ಮತ್ತು ಎಲ್ಲ ರಾಜ್ಯಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ
April 10, 2026
3:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!
April 9, 2026
1:23 PM
by: ಸಾಯಿಶೇಖರ್ ಕರಿಕಳ
ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ : ಕರಾವಳಿಯಲ್ಲಿ ಒಣಹವೆ ಮುಂದುವರಿಕೆ!
April 9, 2026
6:42 AM
by: ಮಿರರ್‌ ಡೆಸ್ಕ್
ಆಟೋ ಗ್ಯಾಸ್ ಕೊರತೆ ವದಂತಿ- ರಾಜ್ಯ ಸರ್ಕಾರದಿಂದ ಸ್ಪಷ್ಟನೆ..!
April 8, 2026
10:24 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror