Advertisement
ಸುದ್ದಿಗಳು

ರೈತರು ಭೂಮಿ ಕೊಟ್ಟರು | ಸ್ಥಳೀಯರಿಗೆ ಉಚಿತವಾಗಿ ರೋಗ ಕೊಟ್ಟ ಕಂಪನಿ…! | ಹೋರಾಟದ ಎಚ್ಚರಿಕೆ ನೀಡಿದ ಸ್ಥಳೀಯರು |

Share

ತಮ್ಮ ಊರಿಗೆ ಒಂದಷ್ಟು ಕೈಗಾರಿಗಳು, ಕಂಪನಿಗಳು ಬಂದರೆ ಅಲ್ಲಿನ ಜನತೆಗೆ ಉದ್ಯೋಗ ಸಿಗಬಹುದು ಎಂಬ ನಿರೀಕ್ಷೆ ಜನರದ್ದು. ಆರ್ಥಿಕ ವ್ಯವಹಾರ ಕೂಡಾ ಉತ್ತಮವಾಗುತ್ತದೆ ಎಂಬ ಭರವಸೆ ನೀಡಿ  3-4 ದಶಕಗಳೇ ಕಳೆಯಿತು. ಆದರೆ ಇದ್ಯಾವುದೂ ಆಗಿಲ್ಲ..!. ಈ ಕತೆ ಮಂಗಳೂರಿನದ್ದು.

ಮಂಗಳೂರಿನಲ್ಲಿ ಈಗ ಬೃಹತ್ ಕೈಗಾರಿಕೆಗಳ ಬಣ್ಣ ಮಾತ್ರ ಒಂದೊಂದಾಗಿ ಕಳಚಿಕೊಳ್ಳುತ್ತಿದೆ.  ಸಾರ್ವಜನಿಕ ರಂಗದ ಪ್ರತಿಷ್ಠಿತ ಕಂಪನಿಯಾದ ಎಂಆರ್ ಪಿಎಲ್ ಬಂದ ಬಳಿಕ ಸಾಲು ಸಾಲಾಗಿ ಲಗ್ಗೆ ಇಟ್ಟ ಬೃಹತ್ ಕೈಗಾರಿಕೆಗಳು ಉದ್ಯೋಗವೇನೋ ಸೃಷ್ಟಿಸಿದೆ. ಆದರೆ  ಅದರಲ್ಲಿ ಸ್ಥಳೀಯರ ಪಾಲು ಕಡಿಮೆ. ಅನ್ಯ ರಾಜ್ಯಗಳ ನೌಕರರ ಪಾಲಾಗುತ್ತಿದೆ. ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಕೊಟ್ಟ ರೈತ – ಕೃಷಿಕರಿಗೆ ಈ ಕಂಪನಿಗಳು ಉಚಿತವಾಗಿ ರೋಗವನ್ನಂತು ಕೊಡುತ್ತಿದೆ. ಪರಿಸರಕ್ಕೆ ಮಹಾ ಕಂಟಕವಾಗಿ ಕಾಡುತ್ತಿವೆ…!. ಇದೀಗ ಹೋರಾಟ ಅನಿವಾರ್ಯವಾಗಿದೆ ಇಲ್ಲಿನ ಜನರಿಗೆ.

ಸಾರ್ವಜನಿಕ ರಂಗದ ಎಂಆರ್ ಪಿಎಲ್ ತಡರಾತ್ರಿ ಮಾಲಿನ್ಯ ಬಿಡುಗಡೆಯಿಂದ ಉಂಟಾಗುವ ದುರ್ನಾತ ಬಗ್ಗೆ ಇತ್ತೀಚೆಗಷ್ಟೇ ಹೋರಾಟ ನಡೆದಿತ್ತು.  ನಾಗರಿಕರು ತಮ್ಮ ಸಮಸ್ಯೆ ಕೇಳಲು ಎಂಆರ್ ಪಿಎಲ್ ನ ಎಂಡಿ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರೂ ಎಂಡಿಯಾಗಲಿ, ಸ್ಥಳೀಯರೇ ಆದ ಜನರಲ್ ಮೆನೇಜರ್ ಆಗಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸದೆ ವೆಲ್ಫೇರ್ ಆಫೀಸರ್ ಅವರನ್ನು ಸ್ಥಳೀಯರ ಜತೆ ಮಾತುಕತೆಗೆ ಕಳುಹಿಸಿದ್ದರು.

ಇದೀಗ ಕಳೆದ ನಾಲ್ಕೈದು ದಿನಗಳಿಂದ ಬೈಕಂಪಾಡಿ ಕೈಗಾರಿಕಾ ವಲಯ, ಎಂಆರ್ ಪಿಎಲ್, ಎಸ್ ಇಝಡ್ ತಮ್ಮ ಕೈಗಾರಿಕಾ ಮಾಲಿನ್ಯದ ತ್ಯಾಜ್ಯವನ್ನು ಫಲ್ಗುಣಿ ನದಿ ಸೇರುವ ತೋಕೂರು ಹಳ್ಳಕ್ಕೆ ಹರಿಬಿಡಲಾಗುತ್ತಿದೆ. ಇದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗಿ ಪೂರ್ತಿ ಕೊಳೆತು ನಾರುತ್ತಿದ್ದೆ. ಇದೆಲ್ಲ ನೇರವಾಗಿ ಪಲ್ಗುಣಿ ನದಿಗೆ ಸೇರುತ್ತಿದೆ ಎನ್ನುವುದು  ಜನರ ಆರೋಪ.


ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗೆ ಹೋರಾಟ ಸಮಿತಿ ದೂರು ನೀಡಿದೆ. ಪ್ರಾದೇಶಿಕ ಅಧಿಕಾರಿ ರಮೇಶ್ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿ ನೀರಿನ ಸ್ಯಾಂಪಲ್ ಸಂಗ್ರಹಿಸಿದೆ.‌ ಅಷ್ಟೇ ಅಲ್ಲದೆ ಕೈಗಾರಿಕಾ ಮಾಲಿನ್ಯ ಆಗುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿರುವುದಾಗಿ ತಂಡ ಒಪ್ಪಿಕೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಕುರಿತು ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥ ಕಂಪೆನಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು, ಪಲ್ಗುಣಿ ನದಿಯನ್ನು ಉಳಿಸಲು ನಾಗರಿಕ ಹೋರಾಟ ಸಮಿತಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಆಗ್ರಹಿಸಿದೆ.‌ ಇಲ್ಲದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದೆ.

ಎಂಆರ್ ಪಿಎಲ್ ಸೇರಿದಂತೆ ಇಲ್ಲಿನ ಬೃಹತ್ ಕೈಗಾರಿಕೆಗಳು ಪರಿಸರ, ಉದ್ಯೋಗದ ವಿಷಯದಲ್ಲಿ ಖಾಸಗಿ ಕಾರ್ಪೊರೇಟ್ ಕಂಪೆನಿಗಳಿಗಿಂತಲೂ ಕೆಟ್ಟದಾಗಿ ವರ್ತಿಸುತ್ತಿದೆ. ಹಸಿರು ವಲಯ ನಿರ್ಮಾಣದ ಕಡ್ಡಾಯ ನಿಯಮವನ್ನೂ ಉಲ್ಲಂಘಿಸಿದೆ. ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮಗಳ ಜನವಸತಿ ಪ್ರದೇಶದಲ್ಲಿ ಮಾರಣಾಂತಿಕ ಪೆಟ್ ಕೋಕ್ ಮಾಲಿನ್ಯ ತಡೆಯಲು 27 ಎಕರೆ ಹಸಿರು ವಲಯ ನಿರ್ಮಿಸುವ ಸರಕಾರಿ ಆದೇಶದಂತೆ ಭೂಮಿ ಗುರುತಿಸಿದರೂ ಕಂಪೆನಿ ಕುಂಟು ನೆಪಗಳನ್ನು ಮುಂದಿಟ್ಟು ಕಾಲಹರಣ ಮಾಡುತ್ತಿದೆ.

ಇದರಿಂದ ಜೋಕಟ್ಟೆ, ಕಳವಾರು ಗ್ರಾಮಗಳು ರೋಗಗ್ರಸ್ತಗೊಂಡಿವೆ. ಜನರಿಗೆ ಕಣ್ಣುರಿ, ಚರ್ಮರೋಗ ಶುರುವಾಗಿದೆ. ಉಬ್ಬಸ, ಉಸಿರಾಟ ಸಮಸ್ಯೆಯೂ ಅಧಿಕವಾಗಿದೆ. ಕಂಪೆನಿಗಳ ಮಾಲಿನ್ಯದಿಂದ ಪಲ್ಗುಣಿ ನದಿಯಲ್ಲಿ ಮೀನುಗಳ ಮಾರಣ ಹೋಮ ನಡೆದಿದೆ. ಸಮುದ್ರದಲ್ಲಿ ಮೀನುಗಳ ಸಂತತಿ ಕಡಿಮೆಯಾಗುತ್ತಿದೆ. ಅದಲ್ಲದೆ  ಸ್ಥಳೀಯರಿಗೆ ಉದ್ಯೋಗ ನೀಡದೆ ಬೃಹತ್ ಕೈಗಾರಿಕಾ ಕಂಪನಿಗಳು ವಂಚನೆ ಎಸಗುತ್ತಿವೆ ಎಂದು ಜನರು ಆರೋಪಿಸುತ್ತಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

5 hours ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

1 day ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

1 day ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

2 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

2 days ago

ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?

ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…

2 days ago