ರೈತ ಹಿತಚಿಂತನೆ | ಜಗತ್ತಿನಲ್ಲಿ ಭಾರತೀಯ ಕೃಷಿಯು ಅತ್ಯಂತ ಪುರಾತನ‌ ಕಾಲದಿಂದಲೂ ಏಕೆ ಉಳಿದು ಬಂದಿದೆ?

October 27, 2023
9:01 PM

ಮಾನವರು ಮಾಡುವ ಯಾವ ಕ್ರಿಯೆ ಪ್ರಕೃತಿಗೆ(nature) ಪೂರಕವಾಗಿರುವುದೋ ಅದು ಬಹುಕಾಲದವರೆಗೆ ಉಳಿದು ಬೆಳೆಯುವುದು. ಭಾರತೀಯ ಕೃಷಿಕರು(farmer) ಅನುಸರಿಸುತ್ತಾ ಬಂದ ಕೃಷಿ ಪದ್ಧತಿಗಳು ಪ್ರಕೃತಿಗೆ ಅತ್ಯಂತ ಪೂರಕವಿರುವ ಕಾರಣ ಅತ್ಯಂತ ಪುರಾತನ ಕಾಲದ ಕೃಷಿಯು ಭಾರತೀಯರದ್ದಾಗಿದೆ.

ಪ್ರಕೃತಿಗೆ ಪೂರಕವಾದ ಕೃಷಿ ಪದ್ಧತಿಗಳ ಶೋಧನೆ ಮಾಡಿ ಕೃಷಿಕರಿಗೆ ಅತ್ಯಂತ ಸರಳ ರೂಪದಲ್ಲಿ ಪರಿಚಯ‌ ಮಾಡಿದವರೇ ಭಾರತೀಯ ಋಷಿಗಳಾಗಿದ್ದಾರೆ. ಋಷಿ ಎಂದರೆ ವಿವಿಧ ಯೋಗ ಮಾರ್ಗದಿಂದ ತಮ್ಮ ಜೀವಂತಿಕೆಯನ್ನು ಹೆಚ್ಚಿಸಿಕೊಂಡು ಪ್ರಕೃತಿ ಮಾತೆಯ ಅಭಿವ್ಯಕ್ತಿಯೇ ಅವರಾದವರು ಎಂದು ಅರ್ಥ.‌ ಇಂತಹ ಋಷಿಗಳು ಪ್ರಕೃತಿಗೆ ಹಾನಿ ಮಾಡದೇ ಮಾನವ ಕುಲಕ್ಕೆ ಅವಶ್ಯವಿರುವ ಆಹಾರವನ್ನು ಹೇಗೆ ಉತ್ಪಾದಿಸಬೇಕು ಎಂಬ ಕೃಷಿ ಪದ್ಧತಿಗಳನ್ನು ರೈತರಿಗೆ ಪರಿಚಯಿಸಿದ್ದರು. ರೈತರು ತಮಗೆ ತಿಳಿಯದಿದ್ದರೂ ಸಹ ಕೆಲವು ಹಬ್ಬಗಳ ಆಚರಣೆಯಲ್ಲಿ ತೊಡಗಿದರೆ ಆ ಮೂಲಕ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗುತ್ತಿತ್ತು.

ಬನ್ನಿ ಗಿಡವು ಪ್ರತಿ ಜಮೀನಿನಲ್ಲಿ ಇರಬೇಕು ಹಾಗೂ ಅದನ್ನು ಪೂಜಿಸಬೇಕು ಎಂಬ ಆಚರಣೆ ವೈಜ್ಞಾನಿಕವಾಗಿ ಅನೇಕ ರೀತಿಯಲ್ಲಿ ಭೂಮಿಯ ಫಲವತ್ತತೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಿದೆ. ಇದೇ ರೀತಿ ಒಂದು ವರ್ಷದಲ್ಲಿ ರೈತರು ಆಚರಿಸುವ ಹಲವು ಆಚರಣೆಗಳು ಪ್ರಕೃತಿಗೆ ಪೂರಕವಾಗಿವೆ. ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ಬಿಟ್ಟು ಹೋಗುವ ವ್ಯವಸ್ಥೆಯನ್ನು ಕೃಷಿಕರಿಗೆ ಭಾರತ ದೇಶದ ಋಷಿಗಳು ಅನೇಕ ಆಚರಣೆಗಳ ಮೂಲಕ ಪರಿಚಯಿಸಿದ್ದರು. ಋಷಿಗಳು ರೈತ ಸಮುದಾಯದಲ್ಲಿ ಪ್ರಕೃತಿಗೆ ಪೂರಕ ಕೃಷಿ ಪದ್ಧತಿಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಆಗುವಂತಹ ವ್ಯವಸ್ಥೆ ನಿರ್ಮಾಣ ಮಾಡಿದ್ದರಿಂದ ಭಾರತ ದೇಶದ ಕೃಷಿಯು ಜಗತ್ತಿನ ಎಲ್ಲ ದೇಶಗಳಲ್ಲಿ ಅತ್ಯಂತ ಪುರಾತನವಾದ ಕೃಷಿಯಾಗಿದೆ.

ಜಗತ್ತಿನ ಇತರ ಹಲವು ದೇಶಗಳ ನಾಗರೀಕತೆಗಳು ನಾಯಿಕೊಡೆಯಂತೆ ಬಹುಬೇಗನೆ ಎತ್ತರಕ್ಕೆ ಬೆಳೆದು, ಅಷ್ಟೇ ಬೇಗನೆ ಅವನತಿ ಹೊಂದಿದ ಇತಿಹಾಸವಿದೆ. ಇದಕ್ಕೆ ಮೂಲ‌ ಕಾರಣವೇ ಪ್ರಕೃತಿ ಮಾತೆಯನ್ನು ಅರಿಯದೆ ಕೃಷಿ ಮಾಡಿ ಮಣ್ಣು ನಾಶವಾಗಿರುವುದಾಗಿದೆ. ರೋಮ್, ಮೆಸೊಪಟ್ಯಾಮಿಯಾ ಹಾಗೂ ಇತರ ಹಲವು ನಾಗರೀಕತೆಗಳು ನಾಶವಾಗಿರುವುದಕ್ಕೆ ಮೂಲ ಕಾರಣವೇ ಆ ಸಂದರ್ಭದಲ್ಲಿ ಅಲ್ಲಿನ ಮಣ್ಣು ನಾಶವಾಗಿರುವುದಾಗಿದೆ.

ಇತ್ತೀಚಿನ ದಿನಗಳಲ್ಲಿ ಸಮಗ್ರತೆ ರಹಿತ ವಿಜ್ಞಾನಿಗಳ ಆವಿಷ್ಕಾರಗಳನ್ನು ರೈತರ ಮೇಲೆ ಹೇರುತ್ತಿರುವ ಕಾರಣ ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ಪ್ರದೇಶದ ಮಣ್ಣು ಮರಭೂಮಿಯಾಗಿ ಪರಿವರ್ತಿತವಾಗುತ್ತಿದೆ.‌ ಇದನ್ನೇ ಮರಭೂಮಿಕರಣ ಎಂದು ಕರೆಯಲಾಗುವುದು.‌ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅತ್ಯಂತ ಪುರಾತನ ಕಾಲದಿಂದ ಕೃಷಿ ಉಳಿದು ಬರಲು ಕಾರಣವಾದ ಭಾರತೀಯ ಋಷಿಗಳು ಪರಿಚಯಿಸಿದ ಕೃಷಿ ಪದ್ಧತಿಗಳು ಕೃಷಿ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳ ಮುಖ್ಯ ವಿಷಯವಾಗಬೇಕಾದ ಅವಶ್ಯಕತೆಯಿದೆ.

Advertisement

ಹಸಿರು ಕ್ರಾಂತಿಯ ಭರದಲ್ಲಿ ಹಲವು ಪ್ರಜ್ಞಾರಹಿತ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ‌ ಕಳೆದ ಕೆಲವು ದಶಕಗಳಲ್ಲಿ ಭಾರತ ದೇಶದ ಮೂಲ ಕೃಷಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದು ಹೀಗೆಯೇ ಮುಂದುವರೆದರೆ, ಭಾರತ ದೇಶದ ಕೆಲವು ನಾಗರೀಕತೆಗಳು ಅಹಾರ ಕೊರತೆಯಿಂದ ನಾಶವಾಗುವ ಸಾಧ್ಯತೆಯಿದೆ.‌ ಭಾರತೀಯ ಕೃಷಿಯ ಮೂಲ‌ ಆಧಾರ ಸ್ತಂಭ ಎತ್ತುಗಳು ಹಾಗೂ ಗೋವು ಆಧಾರಿತ ಕೃಷಿ ಪದ್ಧತಿಯಾಗಿತ್ತು.‌ ಇತ್ತೀಚಿನ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಎತ್ತುಗಳು ಹಾಗೂ ನಾಟಿ ಹಸುಗಳು‌ ನಾಶವಾಗುತ್ತಿರುವುದು ನಾಗರೀಕತೆಗಳ ನಾಶದ ಮೊದಲ ಸೂಚಕವಾಗಿದೆ.

ಭಾರತೀಯ ಕೃಷಿಯ ಮೂಲ ಅಧಾರ ಸ್ತಂಭಗಳಾದ‌ ಎತ್ತುಗಳು ಹಾಗೂ ಗೋವು ಆಧಾರಿತ ಕೃಷಿಯನ್ನು ಪ್ರೋತ್ಸಾಹಿಸುವ ರಾಷ್ಟ್ರ ಮಟ್ಟದ ದೊಡ್ಡ ಯೋಜನೆಯನ್ನು ಜಾರಿಗೆ ತಂದು ನಂದಿಯನ್ನು ಭಾರತ ದೇಶದ ರಾಷ್ಟ್ರ ಪ್ರಾಣಿಯಾಗಿ ಘೋಷಿಸುವ ಅವಶ್ಯಕತೆಯಿದೆ. ‌ಅಂದಾಗ ಮಾತ್ರ ನಮ್ಮ ಋಷಿಗಳು ನೀಡಿದ ಕೃಷಿ ಪದ್ಧತಿಗಳು ಮುನ್ನಲೆಗೆ ಬಂದು ಕೇವಲ‌ ಭಾರತ ದೇಶ ಮಾತ್ರವಲ್ಲ, ಇತರ ಹಲವು ದೇಶಗಳಿಗೂ ಕೂಡ ಆಹಾರ ಭದ್ರತೆಯನ್ನು ಒದಗಿಸಲು ಸಾಧ್ಯ.

ಬರಹ :
ಬಸವರಾಜ ಬಿರಾದಾರ, ಮಣ್ಣು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ

Many other countries of the world have a history of civilizations that have risen to the top like a dog umbrella and then declined just as quickly. The root cause of this is that the soil has been destroyed by farming without knowing Mother Nature. The root cause of the destruction of Rome, Mesopotamia and many other civilizations was the destruction of the soil there.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ
January 10, 2026
10:35 PM
by: ರೂರಲ್‌ ಮಿರರ್ ಸುದ್ದಿಜಾಲ
ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..
January 10, 2026
10:33 PM
by: ರೂರಲ್‌ ಮಿರರ್ ಸುದ್ದಿಜಾಲ
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ | 2026 ಮಾರ್ಚ್ ವರೆಗೆ ಅವಕಾಶ
January 10, 2026
10:30 PM
by: ರೂರಲ್‌ ಮಿರರ್ ಸುದ್ದಿಜಾಲ
ಸ್ವಾವಲಂಬಿ ಸಾರಥಿ ಯೋಜನೆ | ಆಟೋ ಗೂಡ್ಸ್ ವಾಹನ ಖರೀದಿಗೆ ರೂ.4 ಲಕ್ಷ ಸಹಾಯಧನ
January 10, 2026
10:28 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror