ಕಳೆದ 3 ವರ್ಷಗಳಲ್ಲಿ ಭಾರತದ ಆರ್ಥವ್ಯವಸ್ಥೆ ಏರುಗತಿಯಲ್ಲಿ ಸಾಗಿದೆ. ಈ ಅವಧಿಯಲ್ಲಿ, ಸರಾಸರಿ ಶೇಕಡಾ 8.3ರಷ್ಟು ಅರ್ಥವ್ಯವಸ್ಥೆ ಬೆಳೆದಿದೆ ಎಂದು ಬಿಜೆಪಿ ವಕ್ತಾರ ಜಫರ್ ಇಸ್ಲಾಂ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಉತ್ಪಾದನೆ, ಸೇವೆಗಳು ಮತ್ತು ಮೂಲಸೌಕರ್ಯದಂತಹ ವಿವಿಧ ವಲಯಗಳಿಂದ ದೇಶದ ಆರ್ಥಿಕತೆ ಮುನ್ನುಗ್ಗುತ್ತ ಸಾಗಿದೆ. ಬಾಹ್ಯ ಅಪಾಯಗಳ ನಡುವೆಯೂ ಭಾರತದ ಆರ್ಥಿಕತೆ ಅತ್ಯಂತ ಬಲಿಷ್ಠವೆಂದು ಪರಿಗಣಿಸಲಾಗುತ್ತಿದೆ ಈ ಹಿನ್ನೆಲೆಯಲ್ಲಿ ಭಾರತವನ್ನು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯ ದೇಶ ಎಂದು ಕರೆಯಲಾಗುತ್ತಿದೆ ಎಂದರು. ಇಂದು, ಭಾರತವು ಚೀನಾ, ಜಪಾನ್ ಮತ್ತು ಸ್ವಿಟ್ಜರ್ಲೆಂಡ್‌ಗಳ ವಿದೇಶಿ ವಿನಿಮಯ ಮೀಸಲು 700 ಶತಕೋಟಿ ಡಾಲರ್‌ಗಳನ್ನು ಮೀರಿದ ವಿಶ್ವದ ನಾಲ್ಕನೇ ಆರ್ಥಿಕತೆ ಹೊರಹೊಮ್ಮಿದೆ ಎಂದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ…
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

