ಉತ್ತರ ಭಾರತದಲ್ಲೂ ಮಳೆಯಬ್ಬರ | ಒಡಿಸ್ಸಾದಲ್ಲಿ ಮಳೆಯಿಂದ ಹಾನಿಗೊಳಗಾದ ಆಹಾರ ಬೆಳೆ |

January 13, 2022
7:39 PM

ಕಳೆದ ಮೂರು ದಿನಗಳಿಂದ ಒಡಿಸ್ಸಾದ ಕಲಹಂಡಿ ಮತ್ತು ಉಮರ್‌ಕೋಟೆ ಭಾಗಗಳಲ್ಲಿ ಭಾರೀ ಮಳೆ ಹಾಗೂ ಆಲಿಕಲ್ಲು ಮಳೆಯಾಗುತ್ತಿದ್ದು, ಮಳೆಯಿಂದ ಅಪಾರ ಹಾನಿಯಾಗಿದ್ದು ಕೃಷಿ ನಷ್ಟವಾಗಿದೆ.

ಒಡಿಸ್ಸಾದ ಹಲವಾರು ಭಾಗಗಳಲ್ಲಿ ಭಾರೀ ಮಳೆಯೊಂದಿಗೆ ಆಳಿಕಲ್ಲು ಮಳೆಯಾಗಿದೆ. ಭತ್ತದ ಜತೆಗೆ ಬೇಳೆಕಾಳು, ಕಬ್ಬು, ತರಕಾರಿ ಬೆಳೆಗಳಿಗೂ ಅಪಾರ ಹಾನಿಯಾಗಿದೆ. ಮಂಗಳವಾರ ರಾತ್ರಿಯಿಂದ ವಿದ್ಯತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹೊಲಗಳು ಮತ್ತು ರಸ್ತೆಗಳು ಆಲಿಕಲ್ಲುಗಳಿಂದ ಕೂಡಿದ್ದವು. ಮೂಲಗಳ ಪ್ರಕಾರ, ಕೆಲವು ರೈತರು ತಮ್ಮ ಕಟಾವು ಮಾಡಿದ ಭತ್ತವನ್ನು ಪಾಲಿಥಿನ್ ಶೀಟ್‌ಗಳಿಂದ ಮುಚ್ಚುವಲ್ಲಿ ಯಶಸ್ವಿಯಾದರೆ, ಇನ್ನೂ ಅನೇಕರು ತಮ್ಮ ಉತ್ಪನ್ನಗಳನ್ನು ಉಳಿಸಲು ಸಾಧ್ಯವಾಗಲಿಲ್ಲ.

ಆಲಿಕಲ್ಲು ಮಳೆಯ ಪ್ರಭಾವಕ್ಕೆ ಜೋಳ, ಹೂಕೋಸು, ಎಲೆಕೋಸು ಗಿಡಗಳು ನೆಲಕಚ್ಚಿವೆ. ಆರಂಭಿಕ ಮೌಲ್ಯಮಾಪನವು ದಿನದಲ್ಲಿ ಸುಮಾರು 4,000 ಹೆಕ್ಟೇರ್ ಮಕ್ಕೆಜೋಳ ಮತ್ತು 6,000 ಹೆಕ್ಟೇರ್ ಹೂಕೋಸು ಕೃಷಿಗೆ ಹಾನಿಯಾಗಿದೆ ಎಂದು ವರದಿ ಆಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಅಭಿಯಾನಕ್ಕೆ ಚಾಲನೆ | ಕೃಷಿ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ
March 30, 2026
10:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 30-03-2026 | ಇವತ್ತಿನ ಮಳೆ ಎಲ್ಲಿ…? ಎಷ್ಟು ದಿನ ಇದೆ ಮಳೆ…?
March 30, 2026
12:06 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಹಲವೆಡೆ ಮಳೆ ; ಬೆಂಗಳೂರಿನಲ್ಲಿ ಹಗುರ ಮಳೆ ಸಾಧ್ಯತೆ
March 30, 2026
7:52 AM
by: ದ ರೂರಲ್ ಮಿರರ್.ಕಾಂ
ಮಂಗಳವಾರದಿಂದ ರಾಜ್ಯದಲ್ಲಿ ಹೋಟೆಲ್‌ಗಳಿಗೆ ಹೆಚ್ಚಿನ ವಾಣಿಜ್ಯ ಅಡುಗೆ ಸಿಲಿಂಡರ್‌ಗಳ ಸರಬರಾಜು
March 30, 2026
7:44 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror