ಕಳೆದ ಮೂರು ದಿನಗಳಿಂದ ಒಡಿಸ್ಸಾದ ಕಲಹಂಡಿ ಮತ್ತು ಉಮರ್‌ಕೋಟೆ ಭಾಗಗಳಲ್ಲಿ ಭಾರೀ ಮಳೆ ಹಾಗೂ ಆಲಿಕಲ್ಲು ಮಳೆಯಾಗುತ್ತಿದ್ದು, ಮಳೆಯಿಂದ ಅಪಾರ ಹಾನಿಯಾಗಿದ್ದು ಕೃಷಿ ನಷ್ಟವಾಗಿದೆ.
ಒಡಿಸ್ಸಾದ ಹಲವಾರು ಭಾಗಗಳಲ್ಲಿ ಭಾರೀ ಮಳೆಯೊಂದಿಗೆ ಆಳಿಕಲ್ಲು ಮಳೆಯಾಗಿದೆ. ಭತ್ತದ ಜತೆಗೆ ಬೇಳೆಕಾಳು, ಕಬ್ಬು, ತರಕಾರಿ ಬೆಳೆಗಳಿಗೂ ಅಪಾರ ಹಾನಿಯಾಗಿದೆ. ಮಂಗಳವಾರ ರಾತ್ರಿಯಿಂದ ವಿದ್ಯತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹೊಲಗಳು ಮತ್ತು ರಸ್ತೆಗಳು ಆಲಿಕಲ್ಲುಗಳಿಂದ ಕೂಡಿದ್ದವು. ಮೂಲಗಳ ಪ್ರಕಾರ, ಕೆಲವು ರೈತರು ತಮ್ಮ ಕಟಾವು ಮಾಡಿದ ಭತ್ತವನ್ನು ಪಾಲಿಥಿನ್ ಶೀಟ್‌ಗಳಿಂದ ಮುಚ್ಚುವಲ್ಲಿ ಯಶಸ್ವಿಯಾದರೆ, ಇನ್ನೂ ಅನೇಕರು ತಮ್ಮ ಉತ್ಪನ್ನಗಳನ್ನು ಉಳಿಸಲು ಸಾಧ್ಯವಾಗಲಿಲ್ಲ.
ಆಲಿಕಲ್ಲು ಮಳೆಯ ಪ್ರಭಾವಕ್ಕೆ ಜೋಳ, ಹೂಕೋಸು, ಎಲೆಕೋಸು ಗಿಡಗಳು ನೆಲಕಚ್ಚಿವೆ. ಆರಂಭಿಕ ಮೌಲ್ಯಮಾಪನವು ದಿನದಲ್ಲಿ ಸುಮಾರು 4,000 ಹೆಕ್ಟೇರ್ ಮಕ್ಕೆಜೋಳ ಮತ್ತು 6,000 ಹೆಕ್ಟೇರ್ ಹೂಕೋಸು ಕೃಷಿಗೆ ಹಾನಿಯಾಗಿದೆ ಎಂದು ವರದಿ ಆಗಿದೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.