ಹಟ್ಟಿ ಗೊಬ್ಬರಕ್ಕೆ ಬರಲಿ ಹಟ್ಟಿ “ಚಿನ್ನದ ಬೆಲೆ” | ದೇಸಿ ಗೋವು, ಗೋಪಾಲಕರು , ಗವ್ಯೋತ್ಪನ್ನದ ಬಗ್ಗೆ ಗಮನ ಕೊಡಿ |

November 4, 2023
9:12 AM
ಅಡಿಕೆ ಬೆಳೆಗಾರರು ಮನಸು ಮಾಡಿದರೆ ದೇಸಿ ತಳಿ ಹಸುಗಳನ್ನು ಸಾಕುವ ಗೋಪಾಲಕರ ಬಳಿ ಅವರ ಕೊಟ್ಟಿಗೆ ಗೊಬ್ಬರಕ್ಕೆ ಉತ್ತಮ ಬೆಲೆ ಕೊಟ್ಟು ಗೊಬ್ಬರ ಖರೀದಿಸಿ ಪ್ರೋತ್ಸಾಹಿಸಿದರೆ ದೇಸಿ ತಳಿ ಹಸುಗಳೂ ಉಳಿಯುತ್ತದೆ ಮತ್ತು ಮಲೆನಾಡು ಕರಾವಳಿಯ ಅಡಿಕೆ ತೋಟಗಳೂ ಉಳಿಯುತ್ತದೆ.

ಸಗಣಿ(Dung) ಗೋಮೂತ್ರ(Cow Urine) ಆಧಾರಿತ ಸಾವಯವ ಗೊಬ್ಬರ(Organic fertilizer) ತಯಾರಿಸಿ ಮಾರಾಟ ಮಾಡಲು ಮನಸು ಮಾಡಲು ಮುಖ್ಯ ಕಾರಣ ಈ ಹೊತ್ತಿನ ಕೃಷಿ ಜಗತ್ತಿನಲ್ಲಿ ಕೊರತೆಯಾಗಿರುವ ಗೋ ಆದಾರಿತ ಗವ್ಯೋತ್ಪನ್ನಗಳು. ಈ ಡೈರಿ‌ಫಾರ್ಮ್(Dairy Farm) ಬಂದ ಮೇಲೆ ಹಳ್ಳಿ ಹಳ್ಳಿಯಲ್ಲಿ ಜಾನುವಾರುಗಳ ಸಾಕಣೆ ನಿಂತಿತು. ಹಳ್ಳಿ ಹಳ್ಳಿಯಲ್ಲೂ ಈಗ ಪ್ಯಾಕೆಟ್ ಹಾಲು(Milk) ಲಭ್ಯವಿದೆ. ಒಂದು ಎರಡು ದನ ಕಟ್ಟಿ ತಿಂಗಳಿಗೆ ಹಿಂಡಿ ಹುಲ್ಲು ಲೆಕ್ಕಾಚಾರದಲ್ಲಿ ಹತ್ತು ಹದಿನೈದು ಸಾವಿರ ಖರ್ಚಾಗುವುದಕ್ಕಿಂತ ದಿನಕ್ಕೆ ಎರಡು ಲೀಟರ್ ಹಾಲು ಕೊಂಡರೂ ಮೂರು ಸಾವಿರ ಖರ್ಚಾಗದು. ಹೀಗೆ ಹಾಲು ಕೊಳ್ಳುತ್ತಾ ತಮ್ಮ ಜಮೀನಿಗೆ ಗೊಬ್ಬರದ(Fertilizer) ಅಂಗಡಿಯಲ್ಲಿ ಬಣ್ಣದ ಚೀಲದ ಬ್ಯಾಗಡೆ ಮೇಲೆ ಬರೆದ ಪೋಷಕಾಂಶಗಳನ್ನು ನೋಡಿಕೊಂಡು ಜಮೀನಿಗೆ ಹಾಕುತ್ತಾ ಹಂತ ಹಂತವಾಗಿ ಚಿಕ್ಕ ಪುಟ್ಟ ರೈತರು ಮತ್ತು ಅವರ ಜಮೀನಿಗೆ ಗೊಬ್ಬರಕ್ಕಾಗಿ ಗೋಪಾಲನೆ ಎಂಬ ವಿಚಾರ ಅಳಿದು ಹೋಗಿದೆ.

Advertisement
Advertisement

ಈಗ ಎರಡು ಎಕರೆ ಇರುವ ಗೋಪಾಲನೆ ಆಸಕ್ತಿ ಇದ್ದರೂ ಸಾಕುವುದು ಒಂದು ಒಂದೂವರೆ ಗೋವುಗಳನ್ನು ಮಾತ್ರ ಅದೇ ಬಗೆಯಲ್ಲಿ ಇವತ್ತು ಹತ್ತು ಎಕರೆ ಜಮೀನಿನ ರೈತನೂ ಸಾಕುವುದು ಹಾಲಿನ ಅಗತ್ಯದ ಒಂದು ಎರಡು ಗೋವುಗಳನ್ನ ಮಾತ್ರ. ಇವತ್ತು ತೊಂಬತ್ತು ಪ್ರತಿಶತ ರೈತರು ಗೊಬ್ಬರಕ್ಕಾಗಿ ಗೋಪಾಲನೆ ಮಾಡುವುದಿಲ್ಲ.‌…!.ಒಂದು ಲಕ್ಷ ಎಕರೆ ಅಡಿಕೆ ತೋಟ ಇದ್ದರೆ ಅದರಲ್ಲಿ ಸಾಂಪ್ರದಾಯಿಕ ಮಾದರಿಯಲ್ಲಿ ಬೇಸಾಯ ಪದ್ದತಿಯಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ಬೇಸಾಯ ಮಾಡುವುದಾದಲ್ಲಿ ಅವರಲ್ಲಿ ಕೇವಲ ಹತ್ತು ಪ್ರತಿಶತ ಅಂದರೆ ಲಕ್ಷ ಎಕರೆಯಲ್ಲಿ ಹತ್ತು ಸಾವಿರ ಎಕರೆ ಅಡಿಕೆ ತೋಟಕ್ಕೆ ಬೇಸಾಯ ಮಾಡ ಬಹುದು…!??? ಈ ಪರಿ ತೊಂಬತ್ತು ಸಾವಿರ ಎಕರೆಯಷ್ಟು ಎಕರೆ ಅಡಿಕೆ ತೋಟಕ್ಕೆ ನ್ಯಾಯವಾದ ಕೊಟ್ಟಿಗೆ ಬೇಸಾಯ ಇಲ್ಲವಾಗಿದೆ….!!

Advertisement

ನಮ್ಮ ಮಲೆನಾಡು ಕರಾವಳಿಯ ಅಡಿಕೆ ತೋಟದಲ್ಲಿ ಕಳೆದ ನಲವತ್ತು ಐವತ್ತು ವರ್ಷಗಳಿಂದಲೂ ಸುಪ್ತಾವಸ್ಥೆಯಲ್ಲಿ ಚಿಕ್ಕ ಪ್ರಮಾಣದಲ್ಲಿ ಎಲೆಚುಕ್ಕಿ ರೋಗ ಇದ್ದರೂ ಅದೀಗ ಗಂಭೀರವಾಗಿ ತನ್ನ ಪ್ರಭಾವ ತೋರಿಸುತ್ತಾ ಕಳೆದ ಮೂರು ವರ್ಷಗಳಿಂದ ಶಿಲೀಂದ್ರಗಳು ಅಡಿಕೆ ಮರಗಳ ಹಸಿರು ತಿನ್ನುತ್ತಾ ಮರಗಳ ಉಸಿರು ತಿನ್ನುತ್ತಿದೆ. ಈ ಅಡಿಕೆ ಮರಕ್ಕೆ ವರ್ಷದ ಮುನ್ನೂರರವತ್ತೆರೆಡು ದಿನವೂ ಜೀವ ಚೈತನ್ಯ ನೀಡುತ್ತಿದ್ದ ನಮ್ಮ ಸಾಂಪ್ರದಾಯಿಕ ಕೊಟ್ಟಿಗೆ ಗೊಬ್ಬರ ಬೇಸಾಯವನ್ನು ಬಿಟ್ಟ ಮೇಲೆ ನಮ್ಮ ಮಲೆನಾಡು ಮತ್ತು ಕರಾವಳಿಯ ಅಡಿಕೆ ತೋಟದ ಅಡಿಕೆ ಮರಗಳು ತಮ್ಮ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡು ರೋಗ ಗ್ರಸ್ತವಾಗ ತೊಡಗಿ ಅಡಿಕೆ ಕೃಷಿಯೇ ನಾಶವಾಗುತ್ತಿದೆ. ಖಂಡಿತವಾಗಿಯೂ ಅತಿ ಮಳೆ ಬೀಳುವ ನಮ್ಮ ಮಲೆನಾಡು ಮತ್ತು ಕರಾವಳಿಯ ಅಡಿಕೆ ಕೃಷಿಯ ಬೇಸಾಯಕ್ಕೆ ಕೊಟ್ಟಿಗೆ ಗೊಬ್ಬರ ಬೇಕೇ ಬೇಕು.

Advertisement

ಅಡಿಕೆ ಬೆಳೆಗಾರರು ಮನಸು ಮಾಡಿದರೆ ದೇಸಿ ತಳಿ ಹಸುಗಳನ್ನು ಸಾಕುವ ಗೋಪಾಲಕರ ಬಳಿ ಅವರ ಕೊಟ್ಟಿಗೆ ಗೊಬ್ಬರಕ್ಕೆ ಉತ್ತಮ ಬೆಲೆ ಕೊಟ್ಟು ಗೊಬ್ಬರ ಖರೀದಿಸಿ ಪ್ರೋತ್ಸಾಹಿಸಿದರೆ ದೇಸಿ ತಳಿ ಹಸುಗಳೂ ಉಳಿಯುತ್ತದೆ ಮತ್ತು ಮಲೆನಾಡು ಕರಾವಳಿಯ ಅಡಿಕೆ ತೋಟಗಳೂ ಉಳಿಯುತ್ತದೆ.

ಅಡಿಕೆ ಬೆಳೆಗಾರ ಬಂಧುಗಳೇ..,  ದಯಮಾಡಿ ದೇಸಿ ತಳಿ ಹಸು ಸಾಕಣೆ ಮಾಡುವ ರೈತರಿಂದ ಉತ್ತಮ ಬೆಲೆ ಕೊಟ್ಟು ಸಗಣಿ ಗೊಬ್ಬರ ಕೊಳ್ಳಿ.. ಈಗಾಗಲೇ ಹಲವಾರು ಎಲೆಚುಕ್ಕಿ ಬಾಧಿತ ಅಡಿಕೆ ಕೃಷಿಕರು ತಮ್ಮ ಅಡಿಕೆ ತೋಟಕ್ಕೆ ದೇಸಿ ಹಸುಗಳ ಗಂಜಳ ಮತ್ತು ಸಗಣಿ ಸ್ಲರಿಯನ್ನ ಹಾಕಿ ರೋಗ ಗುಣ ಮುಖ ಮಾಡಿಕೊಂಡಿದ್ದಾರೆ. ದಯಮಾಡಿ ರೈತ ಬಾಂಧವರು ದೇಸಿ ಗೋವು, ಗೋಪಾಲಕರು , ಗವ್ಯೋತ್ಪನ್ನದ ಬಗ್ಗೆ ಗಮನ ಕೊಡಿ…

Advertisement

ದಯಮಾಡಿ ರೈತ ಬಾಂಧವರು ಮಾರುಕಟ್ಟೆ ಯಲ್ಲಿ ಕಡಿಮೆ ಬೆಲೆಗೆ ಸಿಗುವ ಮೂರು ಕಾಸಿನ ಸಕ್ಕರೆ ಕಾರ್ಖಾನೆ ತ್ಯಾಜ್ಯ, ಬೆಂಗಳೂರಿನ ಬೊಮ್ಮಸಂದ್ರದ ಮಣ್ಣು + ಬೆಂಗಳೂರಿನ ಪರಮ ಗಲೀಜಿನ ಗಾರ್ಬೇಜಿಗೆ ದಯಮಾಡಿ ನಮ್ಮ ದೇಸಿ ತಳಿಗಳ ಸಗಣಿ ಗೋಮೂತ್ರದಿಂದ ತಯಾರಾದ ಸಾವಯವ ಗೊಬ್ಬರಕ್ಕೆ ಹೋಲಿಸ ಬೇಡಿ.. ದಯಮಾಡಿ ವಿಜ್ಞಾನಿಗಳ ಯಾವುದೋ ಕಾಲದ ಅರ್ಥ ವಿಲ್ಲದ ಪ್ರೆಸ್ ಮಡ್ ನವರ ಮಣ್ಣು ತಿಂದು ಸುಳ್ಳು ಪೋಷಕಾಂಶಗಳ ಪಟ್ಟಿ ನೀಡುವ ಆ ಬೆಂಕಿ ಬಿದ್ದ ಗೊಬ್ಬರದ ರೂಪದ ಮಣ್ಣು ಕೂಡ ನಮ್ಮ ಪವಿತ್ರ ಗೋವುಗಳ ಸಗಣಿ ಗೊಬ್ಬರ ಕ್ಕೆ ಸಮ ಎನ್ನುವ ಮಾತನ್ನು ದಯಮಾಡಿ ಯಾವ ರೈತರೂ ನಂಬದಿರಿ…

ಈಗ್ಗೆ ಇಪ್ಪತ್ತೈದು ವರ್ಷಗಳ ತನಕವೂ ಇಡೀ ಮಲೆನಾಡು ಕರಾವಳಿಯ ಎಲ್ಲಾ ಅಡಿಕೆ ಬೆಳೆಗಾರರು ತಮ್ಮ ಅಡಿಕೆ ಬೇಸಾಯಕ್ಕೆ ನಮ್ಮ ದೇಸಿ ಹಸುಗಳ ಕೊಟ್ಟಿಗೆ ಗೊಬ್ಬರವನ್ನೇ ಬಳಸುತ್ತಿದ್ದರು. ಈ ಇತಿಹಾಸ ಎಲ್ಲಾ ಅಡಿಕೆ ಬೆಳೆಗಾರರ ಗಮನದಲ್ಲಿರಲಿ… ಒಬ್ಬೊಬ್ಬ ಅಡಿಕೆ ಬೆಳೆಗಾರರೂ ತಮ್ಮ ಅಡಿಕೆ ತೋಟದ ಬೇಸಾಯಕ್ಕೆ ಮರಕ್ಕೆ ಕೇವಲ ಒಂದು ಕೆಜಿ‌ ದೇಸಿ ಹಸುಗಳ ಸಗಣಿ ಗೊಬ್ಬರ ಬಳಸುವ ಮನಸು ಮಾಡಿದರೂ ದೇಸಿ ಹಸುಗಳು ನೆಮ್ಮದಿಯ ಮೆಲಕು ಹಾಕುತ್ತವೆ… ಮತ್ತು ದೇಸಿ ಹಸುಗಳು ಉಳಿಯುತ್ತದೆ.. ಪ್ರತಿ ಅಡಿಕೆ ಬೆಳೆಗಾರರೂ ಇದೊಂದು ಸಂಕಲ್ಪ ಮಾಡಿ ಎಂದು ಬೇಡುತ್ತೇನೆ.

Advertisement
ಬರಹ :
ಪ್ರಬಂಧ ಅಂಬುತೀರ್ಥ
Please buy dung manure from the farmers who keep desi breed cow at a good price. Please farmer brothers pay attention to desi cow, cowherds, crop production...
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror