ಇಲ್ಲಿ ರೈತರು ಕೀಟನಾಶಕಗಳ ಬದಲಿಗೆ ಬಾತುಕೋಳಿಗಳನ್ನು ಬಳಸುತ್ತಾರೆ..!

June 22, 2025
12:00 PM

ರಾಸಾಯನಿಕ ನೀಡಿಯೇ ಇದುವರೆಗೆ ಕೃಷಿ ಮಾಡುವ ವಿಧಾನವಿತ್ತು. ಇದೀಗ ಕೀಟಗಳ ನಿಯಂತ್ರಣಕ್ಕೆ ಹಾಗೂ ಉತ್ತಮ ಬೆಳೆಗಳನ್ನು ಬೆಳೆಯಲು ಬಾತುಕೋಳಿಗಳನ್ನು ಬಳಸಲು ಕೆಲವು ಕೃಷಿಕರು ಸಿದ್ಧತೆ ಮಾಡಿದ್ದಾರೆ.  ಅಷ್ಟೇ ಅಲ್ಲ ಹವಾಮಾನ-ನಿರೋಧಕ ಬೀಜಗಳನ್ನು ಆಯ್ಕೆ ಮಾಡಿ ಸುಸ್ಥಿರ ವಿಧಾನಗಳತ್ತ ಮುಖ ಮಾಡುತ್ತಿದ್ದಾರೆ. ಈ ಪ್ರಾಯೋಗಿಕ ತಂತ್ರಗಳು ಕೊಯ್ಲುಗಳನ್ನು ಉತ್ತಮವಾಗಿಸುವುದರ ಜೊತೆಗೆ ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತಿವೆ. ಈಗ ಕೇರಳದ ಭತ್ತದ ಕೃಷಿಯಲ್ಲಿ ಬಾತುಕೋಳಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

Advertisement

ಭಾರತದಲ್ಲಿ ಕೃಷಿಯು ಹೆಚ್ಚಿನ ನೀರಿನ ಬಳಕೆ ಮತ್ತು ರಾಸಾಯನಿಕ ಸಿಂಪಡಣೆಯ ಮೇಲೆ ಅವಲಂಬಿತವಾಗಿರುವ ಸಾಂಪ್ರದಾಯಿಕ ಕೃಷಿ ಪದ್ಧತಿಗಳು ನೈಸರ್ಗಿಕ ಸಂಪನ್ಮೂಲಗಳ ಅವನತಿಗೆ ಕಾರಣವಾಗುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಸುಧಾರಿತ ವಿಧಾನಗಳ ಆಯ್ಕೆ ಅನಿವಾರ್ಯವಾಗಿದೆ.ಇದಕ್ಕಾಗಿ ಕೆಲವು ವಿಧಾನಗಳ ಪಟ್ಟಿ ಹೀಗಿದೆ…

ಕೇರಳದ ಭತ್ತದ ಕೃಷಿಯಲ್ಲಿ ಬಾತುಕೋಳಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಭತ್ತದ ಬೆಳೆಗಳನ್ನು ಕೊಯ್ಲು ಮಾಡಿದ ನಂತರ, ರೈತರು ತಮ್ಮ ಹೊಲಗಳಿಗೆ ಬಾತುಕೋಳಿಗಳನ್ನು ಬಿಡುತ್ತಾರೆ, ಅಲ್ಲಿ ಬಾತುಕೋಳಿಗಳು ಉಳಿದ ಧಾನ್ಯಗಳು, ಕಳೆಗಳು ಮತ್ತು ಹುಳುಗಳನ್ನು ತಿನ್ನುತ್ತವೆ ಮತ್ತು ರಾಸಾಯನಿಕಗಳಿಲ್ಲದೆ ಕೀಟಗಳನ್ನು ನಿಯಂತ್ರಿಸುವಾಗ ನೈಸರ್ಗಿಕವಾಗಿ ಹೊಲಗಳನ್ನು ಸ್ವಚ್ಛಗೊಳಿಸುತ್ತವೆ. ಬಾತಕೋಳಿಯು ಮಣ್ಣನ್ನು ತಮ್ಮ ಹಿಕ್ಕೆಗಳಿಂದ ಸಾವಯವ ಪೋಷಕಾಂಶಗಳಿಂದ ಸಮೃದ್ಧಗೊಳಿಸುತ್ತದೆ, ಮುಂದಿನ ಬೆಳೆಗೆ ಅದು ಅನುಕೂಲವಾಗುತ್ತದೆ. ಬಾತುಕೋಳಿಗಳು ಕೊಯ್ಲಿನ ನಂತರ ಕೆಲವು ವಾರಗಳ ಕಾಲ ಹೊಸದಲ್ಲಿರುತ್ತದೆ,  ಹೊಸ ಸಸಿಗಳನ್ನು ನೆಟ್ಟ ನಂತರ ಸ್ವಲ್ಪ ಸಮಯದವರೆಗೆ ಇರುತ್ತದೆ. ಹೀಗಾಗಿ ಕಳೆ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ.

ಭಾರತೀಯ ಅಕ್ಕಿ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ಬೀಜಗಳು ಬರ ಮತ್ತು ಲವಣಾಂಶಕ್ಕೆ ಸುಧಾರಿತ ತಳಿ ಹೊಂದಿದ್ದು, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳ ನಡುವೆ ಬೆಳೆ ಸ್ಥಿರತೆಯನ್ನು ಹೆಚ್ಚಿಸುತ್ತದೆ. ಐದು ಮಿಲಿಯನ್ ಹೆಕ್ಟೇರ್‌ನಲ್ಲಿ ಕೃಷಿ ಮಾಡುವುದರಿಂದ 4.5 ಮಿಲಿಯನ್ ಟನ್ ಹೆಚ್ಚುವರಿ ಭತ್ತದ ಉತ್ಪಾದನೆಯಾಗುವ ಭರವಸೆ ಸಿಗುತ್ತದೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಶೇಕಡಾ 20 ರಷ್ಟು ಕಡಿಮೆ ಮಾಡುತ್ತದೆ.

ಸಾಂಪ್ರದಾಯಿಕ ಭತ್ತದ ಕೃಷಿಯು ಪ್ರತಿ ಕಿಲೋಗ್ರಾಂ ಭತ್ತಕ್ಕೆ 4,000 ಲೀಟರ್‌ಗಳಷ್ಟು ನೀರನ್ನು ಬಳಸುತ್ತದೆ, ಏಕೆಂದರೆ ಕಳೆಗಳನ್ನು ನಿಯಂತ್ರಿಸಲು ಹೊಲಗಳು ನೀರಿನಿಂದ ತುಂಬಿರುತ್ತವೆ, ಇದರಿಂದಾಗಿ ಅಂತರ್ಜಲ ಮಟ್ಟವು ಕ್ಷೀಣಿಸುತ್ತಿದೆ. ಪಂಜಾಬ್‌ನಲ್ಲಿ ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಮಾಜಿ ಐಎಎಸ್ ಅಧಿಕಾರಿ ಕಹಾನ್ ಸಿಂಗ್ ಪನ್ನು ಅವರು ಹೊಸ ತಂತ್ರವನ್ನು ಆವಿಷ್ಕರಿಸಿದರು. ಇದು ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ನೀರಿನ ಬಳಕೆಯನ್ನು ಶೇಕಡಾ 75 ರಷ್ಟು ಕಡಿಮೆ ಮಾಡುತ್ತದೆ. ಈ ವಿಧಾನವು ನೀರನ್ನು ಸಂರಕ್ಷಿಸುತ್ತದೆ ಮತ್ತು ನೀರಾವರಿ ವೆಚ್ಚವನ್ನು ಕಡಿಮೆ ಮಾಡುತ್ತದೆ.

Advertisement

ಹೀಗೇ ಕೃಷಿಯಲ್ಲಿ ವಿವಿಧ ತಂತ್ರಗಳು ರಾಸಾಯನಿಕ ಕಡಿಮೆ ಬಳಕೆಗೆ , ಪರಿಸರ ಸ್ನೇಹಿಯಾಗಿಯೂ ಇರುವುದಕ್ಕೆ ಅನುಕೂಲವಾಗುತ್ತಿದೆ. ಈ ಬಗ್ಗೆ ಬೆಟರ್‌ ಇಂಡಿಯಾ ವರದಿ ಮಾಡಿದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ.ಡಿ.ಎಸ್
July 13, 2025
8:14 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕೃತಿಕಾ
July 13, 2025
8:01 AM
by: ದ ರೂರಲ್ ಮಿರರ್.ಕಾಂ
ರಾಜ್ಯಾದ್ಯಂತ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ | ಹೆಬ್ರಿಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ
July 13, 2025
7:50 AM
by: The Rural Mirror ಸುದ್ದಿಜಾಲ
ಶತ್ರುಗಳಿಂದ ಈ ರಾಶಿಯವರಿಗೆ ಜೀವಕ್ಕೆ ಅಪಾಯವಿದೆ..?
July 13, 2025
7:40 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror