2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿ ಹಾನಿಯಿಂದ ಬೆಳೆಗಳಿಗೆ ರಾಜ್ಯ ಸರ್ಕಾರ ಪರಿಹಾರ ಹಣ ಘೋಷಿಸಿದ್ದು, ಜಿಲ್ಲೆಯಾದ್ಯಂತ ಬೆಳೆ ಹಾನಿಯಾದ ರೈತರಿಗೆ 498.72 ಕೋಟಿ ರೂ ಇನ್ಸುಟ್ ಸಬ್ಸಿಡಿ ಪರಿಹಾರ ಬಿಡುಗಡೆಯಾಗಿದೆ. ಆದರೆ, ವಿವಿಧ ಕಾರಣಗಳಿಂದ 12,313 ಪ್ರಕರಣದಲ್ಲಿ ಪರಿಹಾರ ಪಾವತಿ ವೈಫಲ್ಯವಾಗಿದೆ.
ತಾಂತ್ರಿಕ ದೋಷ ಅಂದರೆ, ಆಧಾರ್ ಲಿಂಕ್ ಆಗದೆ ಇನ್ನು ಕೆಲವು ಮಾಹಿತಿಗಳನ್ನು ಸರಿಯಾಗಿ ಇರದ ಕಾರಣ ಪರಿಹಾರ ಸಿಗದೆ ಉಳಿದಿದ್ದಾರೆ. ಇನ್ನು ರೈತರ ಪಟ್ಟಿಯನ್ನು ಸಂಬಂಧಪಟ್ಟ ಗ್ರಾಮಗಳ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಕಚೇರಿಗಳ ಸೂಚನಾ ಫಲಕಗಳಲ್ಲಿ ಪಟ್ಟಿ ಪ್ರಕಟಿಸಿದ್ದ ಪರಿಣಾಮ ಇದುವರೆಗೆ 3,860 ರೈತರು ಸಮಸ್ಯೆಗಳನ್ನು ಸರಿಪಡಿಸಿಕೊಂಡಿದ್ದಾರೆ. ಇನ್ನುಳಿದಂತೆ 8,464 ರೈತರು ಸಮಸ್ಯೆ ಸರಿಪಡಿಸಿಕೊಂಡಿರುವುದಿಲ್ಲ.
ಇನ್ನು, 10,544 ಪ್ರಕರಣಗಳಲ್ಲಿ ಆಧಾರ್-ಎನ್.ಪಿ.ಸಿ.ಐ ಮ್ಯಾಪಿಂಗ್ ಆಗದ ಕಾರಣ ಪರಿಹಾರ ಪಾವತಿ ಹಣ ಖಾತೆಗೆ ಜಮೆಯಾಗಿರುವುದಿಲ್ಲ. ಇಂತಹ ರೈತರು ಬ್ಯಾಂಕ್ ಗೆ ಭೇಟಿ ನೀಡಬೇಕು. ರೈತರು ತಮ್ಮ ಬ್ಯಾಂಕ್ ಖಾತೆ, ಆಧಾರ್ ಲಿಂಕ್ ಮತ್ತು ಮೊಬೈಲ್ ಸಂಖ್ಯೆಯನ್ನು ನಿರಂತರ ನವೀಕರಿಸಿಕೊಳ್ಳುವುದು ಮುಖ್ಯ ಎಂದು ರೈತ ಸಂಪರ್ಕ ಕೇಂದ್ರ ತಿಳಿಸಿದೆ.

