ಕಿಸಾನ್ ಕ್ರೇಡಿಟ್ ಕಾರ್ಡ್ (KCC) ಮೂಲಕ ರೈತರು ತಮ್ಮ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಅಗತ್ಯವಿರುವ ಹಣವನ್ನು ಬ್ಯಾಂಕ್ ಗಳಿಂದ ಸಾಲದ ರೂಪವಾಗಿ ಪಡೆದುಕೊಳ್ಳಬಹುದು. 1998ರಲ್ಲಿ ಪ್ರಾರಂಭವಾದ ಈ ಯೋಜನೆ ಇಂದು ದೇಶದ ಲಕ್ಷಾಂತರ ರೈತರಿಗೆ ಆರ್ಥಿಕ ಬೆಂಬಲವಾಗಿ, ಕೃಷಿ ಚಟುವಟಿಕೆಗಳನ್ನು ನಿರಂತರ ಮುಂದುವರಿಸಲು ಸಹಾಯ ಮಾಡುತ್ತಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಿಗುವ ಸಾಲ ಮೊತ್ತ ರೈತನ ಕೃಷಿ ಪ್ರದೇಶ, ಬೆಳೆ ಪ್ರಕಾರ ಮತ್ತು ಚಟುವಟಿಕೆಗಳ ಮೇಳೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಮೊದಲ ವರ್ಷ ನಿರ್ಧರಿಸಿದವರ್ಷ ನಿರ್ಧರಿಸಿದ ಕ್ರೆಡಿಟ್ ಲಿಮಿಟ್ ಮುಂದಿನ ವರ್ಷಗಳಲ್ಲಿ ರೈತನ ಬಳಕೆ ಮತ್ತು ಅಗತ್ಯ ಆಧಾರದಲ್ಲಿ ಹೆಚ್ಚಿಸಲಾಗುತ್ತದೆ. ಈ ಯೋಜನೆ ಸಾಮಾನ್ಯವಾಗಿ 5 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.
ಕಿಸಾನ್ ಕ್ರೇಡಿಟ್ ಕಾರ್ಡ್ ಬಡ್ಡಿದರ ಮತ್ತು ಸಬ್ಸಿಡಿ:
• KCCಯೋಜನೆಯ ಪ್ರಮುಖ ಆಕರ್ಷಣೆ ಎಂದರೆ ಕಡಿಮೆ ಬಡ್ಡಿದರ
• ಕೃಷಿ ಸಾಲದ ಮೇಲೆ ಸಾಮಾನ್ಯ ಬಡ್ಡಿದರ ಸುಮಾರು 7%
• ಸರ್ಕಾರದ ಬಡ್ಡಿ ಸಬ್ಸಿಡಿ ಮತ್ತು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ, ರೈತರಿಗೆ ಬಡ್ಡಿದರ 4% ವರೆಗೆ ಇಳಿಯಬಹುದು
• ಇದು ರೈತರಿಗೆ ದೊಡ್ಡ ಆರ್ಥಿಕ ಸಹಾಯವಾಗಿದ್ದು, ಸಾಲದ ಭಾರವನ್ನು ಕಡಿಮೆ ಮಾಡುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
• ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ಸಹಕಾರಿ ಬ್ಯಾಂಕ್ ಅಥವಾ ಗ್ರಾಮೀಣ ಬ್ಯಾಂಕ್ ಗೆ ಭೇಟಿ ನೀಡಿ KCCಅರ್ಜಿ ಸಲ್ಲಿಸಬಹುದು.
• ಆನ್ ಲೈನ್ ಅರ್ಜಿ ಸಲ್ಲಿಸುವುದಾದರೆ ಕೆಲವು ಬ್ಯಾಂಕ್ ನಲ್ಲಿ ಸರಿಯಾದ ಮಾಹಿತಿ ತಿಳಿದು ಅರ್ಜಿ ಸಲ್ಲಿಸಬಹುದು.
ಬೇಕಾದ ದಾಖಲೆಗಳು:
• ಆಧಾರ್ ಕಾರ್ಡ್
• ಗುರುತಿನ ಚೀಟಿ
• ವಿಳಾಸ ಪ್ರಮಾಣ ಪತ್ರ
• ಜಮೀನು ದಾಖಲೆಗಳು ಅಥವಾ ಬಾಡಿಗೆ ಒಪ್ಪಂದ
• ಬ್ಯಾಂಕ್ ಪಾಸ್ ಬುಕ್ʼ
• ಪಾಸ್ ಪೋರ್ಟ್ ಫೋಟೋ

