ನಿಮ್ಮಲ್ಲಿ ಎಳೆ ಅಡಿಕೆ ಬೀಳ್ತಾ ಇದೆಯಾ…? ಕೇಳಲು ಶುರು ಮಾಡಿದ್ದಾರೆ ಅಡಿಕೆ ಬೆಳೆಗಾರರು..!

June 11, 2025
3:30 PM

ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.‌10 ಕಳೆಯುವ ಹೊತ್ತಿಗೆ ವಾತಾವರಣ ಉಷ್ಣತೆ ತೀರಾ ಇಳಿಕೆಯಾಗಿದೆ. ಈಗ ಅಡಿಕೆ ಬೆಳೆಗಾರರು ಅಲ್ಲಲ್ಲಿ ಮಾತನಾಡುವುದು ಶುರು ಮಾಡಿದ್ದಾರೆ,”ನಿಮ್ಮಲ್ಲಿ ಎಳೆ ಅಡಿಕೆ ಬೀಳ್ತಾ ಇದೆಯಾ..? , ನಮ್ಮಲ್ಲಿ ಕೆಲವು ಕಡೆ ಕಾಣ್ತದೆ..” ಎಂದು ಹೇಳಲು ಶುರು ಮಾಡಿದ್ದಾರೆ. ಕಾರಣ ಏನು ಎಂಬುದರ ಬಗ್ಗೆ ಚಿಂತಿಸುತ್ತಿದ್ದಾರೆ.

ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ವರ್ಷ ಅಡಿಕೆ ಫಸಲು ತೀರಾ ಇಳಿಕೆಯಾಗಿತ್ತು. ಅಡಿಕೆ ಹಿಂಗಾರ ಒಣಗುವುದು ಹಾಗೂ ಎಳೆ ಅಡಿಕೆ ಬಿದ್ದ ಕಾರಣದಿಂದ ಶೇ.40 ರಷ್ಟು ಅಡಿಕೆ ಫಸಲು ಇಳಿಕೆಯಾಗಿತ್ತು. ಅದರ ಪರಿಣಾಮವಾಗಿ ಈ ಬಾರಿ ಹೊಸ ಅಡಿಕೆ ಧಾರಣೆ ಈಗಲೇ 480-490 ರೂಪಾಯಿ ಗೆ ಏರಿಕೆಯಾಗಿದೆ, ಮತ್ತಷ್ಟು ಏರಿಕೆಯಾಗುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಆದರೆ ಈ ಬಾರಿಯೂ ಅದೇ ಪರಿಸ್ಥಿತಿ ಪುನರಾವರ್ತನೆಯಾಗುತ್ತದೆಯೇ ಎನ್ನುವ ಅನುಮಾನ ಅಡಿಕೆ ಬೆಳೆಗಾರರನ್ನು ಕಾಡಿದೆ.ಅಷ್ಟೇ ಅಲ್ಲ, ಹೀಗೇ ಆದರೆ ಅಡಿಕೆ ಬೆಳೆಯನ್ನು ನಂಬುದು ಹೇಗೆ. ಕೃಷಿ ಕೆಲಸ ಮಾಡುವುದು ಹೇಗೆ, ಹೊಸ ಕೃಷಿ ಏನು ಮಾಡಬಹುದು ಎನ್ನುವ ಬಗ್ಗೆಯೂ ಚಿಂತನೆಗಳು ನಡೆಯುತ್ತಿದೆ.

ಈ ಬಾರಿ ಮೇ ತಿಂಗಳ ಮಧ್ಯದವರೆಗೂ ಉತ್ತಮ ಫಸಲಿನ ನಿರೀಕ್ಷೆ ಎಲ್ಲಾ ಅಡಿಕೆ ಬೆಳೆಗಾರರಲ್ಲಿತ್ತು. ಆದರೆ ಮೇ ಅಂತ್ಯದ ಹೊತ್ತಿಗೆ ಕೆಲವು ಕಡೆ ಎಳೆ ಅಡಿಕೆ ಬೀಳುವುದು ಕಂಡಿತು. ಆದರೆ  ಜೂನ್‌ 10 ರ ಹೊತ್ತಿಗೆ ಮತ್ತಷ್ಟು ಎಳೆ ಅಡಿಕೆ ಬಿದ್ದಿರುವುದು ಕಂಡಿದೆ. ಹೀಗಾಗಿ ಅಡಿಕೆ ಬೆಳೆಗಾರರು ಯೋಚಿಸುವಂತೆ ಮಾಡಿದೆ.  ಕೆಲವು ಅಡಿಕೆ ಬೆಳೆಗಾರರು ಮಾರ್ಚ್‌ ತಿಂಗಳಿನಿಂದಲೇ ವಿವಿಧ ಔಷಧಿಗಳನ್ನು ಸಿಂಪಡಣೆ ಮಾಡಿದ್ದಾರೆ, ಆದರೂ ಜೂನ್‌ ವೇಳೆಗೆ ಎಳೆ ಅಡಿಕೆ ಬೀಳಲು ಶುರುವಾಗಿದೆ. ಕೆಲವು ಬೆಳೆಗಾರರು ಯಾವುದೇ ಔಷಧಿ ಸಿಂಪಡಣೆ ಮಾಡಿಲ್ಲ ಅಲ್ಲೂ ಎಳೆ ಅಡಿಕೆ ಬೀಳುವುದು ಕಾಣುತ್ತದೆ. ಹೀಗಾಗಿ ಈಗ ಸಮಸ್ಯೆ ಇರುವುದು ಎಲ್ಲಿ ಮತ್ತು ಏನು? ಎನ್ನುವುದರ ಬಗ್ಗೆ ರೈತರ ನಡುವೆಯೇ ಮಾತುಕತೆ ನಡೆಯುತ್ತಿದೆ.

Advertisement

ವಿಟ್ಲದ ಮಂಕುಡೆಯ ಕೃಷಿಕರೊಬ್ಬರ ಪ್ರಕಾರ, ವಿಪರೀತ ಬಿಸಿಲು ಹಾಗೂ ನೀರಾವರಿ ವ್ಯವಸ್ಥೆಯಲ್ಲಿನ ಲೋಪವೂ ಎಳೆ ಅಡಿಕೆ ಬೀಳುವುದಕ್ಕೆ ಕಾರಣ ಇರಬಹುದಾ ಎಂದು ಪ್ರಶ್ನಿಸುತ್ತಾರೆ. ಇದೇ ವೇಳೆ ಯಾವುದೇ ನಿರ್ವಹಣೆ ಮಾಡದ ಅಡಿಕೆ ತೋಟದಲ್ಲಿ ಅಡಿಕೆ ಬೀಳುವ ಪ್ರಮಾಣ ಕಡಿಮೆ ಎನ್ನುವುದನ್ನೂ ಅವರು ಗಮನಿಸಿ ಹೇಳುತ್ತಾರೆ. ಸಾಮಾನ್ಯವಾಗಿ ಬಿಸಿಲು-ಮಳೆ ಆರಂಭವಾಗುವ ವೇಳೆ ಅಂದರೆ ಮೇ ತಿಂಗಳಲ್ಲಿ ಪೆಂತಿ ಕೀಟದ ಬಾಧೆಯಿಂದ ಎಳೆ ಅಡಿಕೆ ಬೀಳುವುದು ಇದೆ.  ಔಷಧಿ ಸಿಂಪಡಣೆ ಮಾಡಿದರೂ ಎಳೆ ಅಡಿಕೆ ಬೀಳುವುದು ನಿಂತಿಲ್ಲ ಯಾಕೆ? ಎನ್ನುವುದು ಬೆಳೆಗಾರರ ಪ್ರಶ್ನೆ. ಹೀಗಾಗಿ ಎಳೆ ಅಡಿಕೆ ಬೀಳುವುದಕ್ಕೆ ತಾಪಮಾನದ ಏರುಪೇರು ಹಾಗೂ ಹವಾಮಾನ ಕಾರಣವೇ ಎನ್ನುವುದು ಕೂಡಾ ಈಗ ಗಮನಿಸಬೇಕಾದ ಅಂಶವಾಗಿದೆ.

ಒಟ್ಟಿನಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ಈಗ ಜೂನ್‌ ತಿಂಗಳು ಸವಾಲಿನ ದಿನಗಳಾಗಿದೆ. ಅಡಿಕೆ ಬೀಳುವುದು ತಡೆಯುವುದು ಹೇಗೆ..? ಅಡಿಕೆ ಉಳಿಸಿಕೊಳ್ಳುವುದು ಹೇಗೆ ಎನ್ನುವುದು ಚಿಂತೆ. ಇದೇ ವೇಳೆ ಅಡಿಕೆ ಧಾರಣೆಯೂ ಏರಿಕೆಯಲ್ಲಿದೆ, ಮುಂದಿನ ವರ್ಷವೂ ಅಡಿಕೆ ಫಸಲು ಕಡಿಮೆ ಎನ್ನುವ ಸುದ್ದಿ ಮತ್ತಷ್ಟು ಚಿಂತೆಗೆ ಕಾರಣವಾಗಿದೆ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಸುಳ್ಯ ಅಡಿಕೆ ಕೃಷಿಗೆ ಎಲೆಚುಕ್ಕಿ ಸಂಕಷ್ಟ | ಬೆಳೆಸಾಲ ಮನ್ನಾ ಮಾಡಲು ಆಗ್ರಹ – ಸಮೀಕ್ಷೆಗೆ ಸಹಕರಿಸುವಂತೆ ಕೃಷಿಕರಿಗೆ ಮನವಿ
January 10, 2026
8:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 10-01-2026 | ತುಂತುರು ಮಳೆ ಇದೆ..! ಎಲ್ಲೆಲ್ಲಿ ಮಳೆ ಇದೆ…?
January 10, 2026
8:02 PM
by: ಸಾಯಿಶೇಖರ್ ಕರಿಕಳ
ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!
January 10, 2026
7:24 AM
by: ದ ರೂರಲ್ ಮಿರರ್.ಕಾಂ
ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ
January 10, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror