ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.10 ಕಳೆಯುವ ಹೊತ್ತಿಗೆ ವಾತಾವರಣ ಉಷ್ಣತೆ ತೀರಾ ಇಳಿಕೆಯಾಗಿದೆ. ಈಗ ಅಡಿಕೆ ಬೆಳೆಗಾರರು ಅಲ್ಲಲ್ಲಿ ಮಾತನಾಡುವುದು ಶುರು ಮಾಡಿದ್ದಾರೆ,”ನಿಮ್ಮಲ್ಲಿ ಎಳೆ ಅಡಿಕೆ ಬೀಳ್ತಾ ಇದೆಯಾ..? , ನಮ್ಮಲ್ಲಿ ಕೆಲವು ಕಡೆ ಕಾಣ್ತದೆ..” ಎಂದು ಹೇಳಲು ಶುರು ಮಾಡಿದ್ದಾರೆ. ಕಾರಣ ಏನು ಎಂಬುದರ ಬಗ್ಗೆ ಚಿಂತಿಸುತ್ತಿದ್ದಾರೆ.
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ವರ್ಷ ಅಡಿಕೆ ಫಸಲು ತೀರಾ ಇಳಿಕೆಯಾಗಿತ್ತು. ಅಡಿಕೆ ಹಿಂಗಾರ ಒಣಗುವುದು ಹಾಗೂ ಎಳೆ ಅಡಿಕೆ ಬಿದ್ದ ಕಾರಣದಿಂದ ಶೇ.40 ರಷ್ಟು ಅಡಿಕೆ ಫಸಲು ಇಳಿಕೆಯಾಗಿತ್ತು. ಅದರ ಪರಿಣಾಮವಾಗಿ ಈ ಬಾರಿ ಹೊಸ ಅಡಿಕೆ ಧಾರಣೆ ಈಗಲೇ 480-490 ರೂಪಾಯಿ ಗೆ ಏರಿಕೆಯಾಗಿದೆ, ಮತ್ತಷ್ಟು ಏರಿಕೆಯಾಗುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಆದರೆ ಈ ಬಾರಿಯೂ ಅದೇ ಪರಿಸ್ಥಿತಿ ಪುನರಾವರ್ತನೆಯಾಗುತ್ತದೆಯೇ ಎನ್ನುವ ಅನುಮಾನ ಅಡಿಕೆ ಬೆಳೆಗಾರರನ್ನು ಕಾಡಿದೆ.ಅಷ್ಟೇ ಅಲ್ಲ, ಹೀಗೇ ಆದರೆ ಅಡಿಕೆ ಬೆಳೆಯನ್ನು ನಂಬುದು ಹೇಗೆ. ಕೃಷಿ ಕೆಲಸ ಮಾಡುವುದು ಹೇಗೆ, ಹೊಸ ಕೃಷಿ ಏನು ಮಾಡಬಹುದು ಎನ್ನುವ ಬಗ್ಗೆಯೂ ಚಿಂತನೆಗಳು ನಡೆಯುತ್ತಿದೆ.
ಈ ಬಾರಿ ಮೇ ತಿಂಗಳ ಮಧ್ಯದವರೆಗೂ ಉತ್ತಮ ಫಸಲಿನ ನಿರೀಕ್ಷೆ ಎಲ್ಲಾ ಅಡಿಕೆ ಬೆಳೆಗಾರರಲ್ಲಿತ್ತು. ಆದರೆ ಮೇ ಅಂತ್ಯದ ಹೊತ್ತಿಗೆ ಕೆಲವು ಕಡೆ ಎಳೆ ಅಡಿಕೆ ಬೀಳುವುದು ಕಂಡಿತು. ಆದರೆ ಜೂನ್ 10 ರ ಹೊತ್ತಿಗೆ ಮತ್ತಷ್ಟು ಎಳೆ ಅಡಿಕೆ ಬಿದ್ದಿರುವುದು ಕಂಡಿದೆ. ಹೀಗಾಗಿ ಅಡಿಕೆ ಬೆಳೆಗಾರರು ಯೋಚಿಸುವಂತೆ ಮಾಡಿದೆ. ಕೆಲವು ಅಡಿಕೆ ಬೆಳೆಗಾರರು ಮಾರ್ಚ್ ತಿಂಗಳಿನಿಂದಲೇ ವಿವಿಧ ಔಷಧಿಗಳನ್ನು ಸಿಂಪಡಣೆ ಮಾಡಿದ್ದಾರೆ, ಆದರೂ ಜೂನ್ ವೇಳೆಗೆ ಎಳೆ ಅಡಿಕೆ ಬೀಳಲು ಶುರುವಾಗಿದೆ. ಕೆಲವು ಬೆಳೆಗಾರರು ಯಾವುದೇ ಔಷಧಿ ಸಿಂಪಡಣೆ ಮಾಡಿಲ್ಲ ಅಲ್ಲೂ ಎಳೆ ಅಡಿಕೆ ಬೀಳುವುದು ಕಾಣುತ್ತದೆ. ಹೀಗಾಗಿ ಈಗ ಸಮಸ್ಯೆ ಇರುವುದು ಎಲ್ಲಿ ಮತ್ತು ಏನು? ಎನ್ನುವುದರ ಬಗ್ಗೆ ರೈತರ ನಡುವೆಯೇ ಮಾತುಕತೆ ನಡೆಯುತ್ತಿದೆ.
ವಿಟ್ಲದ ಮಂಕುಡೆಯ ಕೃಷಿಕರೊಬ್ಬರ ಪ್ರಕಾರ, ವಿಪರೀತ ಬಿಸಿಲು ಹಾಗೂ ನೀರಾವರಿ ವ್ಯವಸ್ಥೆಯಲ್ಲಿನ ಲೋಪವೂ ಎಳೆ ಅಡಿಕೆ ಬೀಳುವುದಕ್ಕೆ ಕಾರಣ ಇರಬಹುದಾ ಎಂದು ಪ್ರಶ್ನಿಸುತ್ತಾರೆ. ಇದೇ ವೇಳೆ ಯಾವುದೇ ನಿರ್ವಹಣೆ ಮಾಡದ ಅಡಿಕೆ ತೋಟದಲ್ಲಿ ಅಡಿಕೆ ಬೀಳುವ ಪ್ರಮಾಣ ಕಡಿಮೆ ಎನ್ನುವುದನ್ನೂ ಅವರು ಗಮನಿಸಿ ಹೇಳುತ್ತಾರೆ. ಸಾಮಾನ್ಯವಾಗಿ ಬಿಸಿಲು-ಮಳೆ ಆರಂಭವಾಗುವ ವೇಳೆ ಅಂದರೆ ಮೇ ತಿಂಗಳಲ್ಲಿ ಪೆಂತಿ ಕೀಟದ ಬಾಧೆಯಿಂದ ಎಳೆ ಅಡಿಕೆ ಬೀಳುವುದು ಇದೆ. ಔಷಧಿ ಸಿಂಪಡಣೆ ಮಾಡಿದರೂ ಎಳೆ ಅಡಿಕೆ ಬೀಳುವುದು ನಿಂತಿಲ್ಲ ಯಾಕೆ? ಎನ್ನುವುದು ಬೆಳೆಗಾರರ ಪ್ರಶ್ನೆ. ಹೀಗಾಗಿ ಎಳೆ ಅಡಿಕೆ ಬೀಳುವುದಕ್ಕೆ ತಾಪಮಾನದ ಏರುಪೇರು ಹಾಗೂ ಹವಾಮಾನ ಕಾರಣವೇ ಎನ್ನುವುದು ಕೂಡಾ ಈಗ ಗಮನಿಸಬೇಕಾದ ಅಂಶವಾಗಿದೆ.
ಒಟ್ಟಿನಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ಈಗ ಜೂನ್ ತಿಂಗಳು ಸವಾಲಿನ ದಿನಗಳಾಗಿದೆ. ಅಡಿಕೆ ಬೀಳುವುದು ತಡೆಯುವುದು ಹೇಗೆ..? ಅಡಿಕೆ ಉಳಿಸಿಕೊಳ್ಳುವುದು ಹೇಗೆ ಎನ್ನುವುದು ಚಿಂತೆ. ಇದೇ ವೇಳೆ ಅಡಿಕೆ ಧಾರಣೆಯೂ ಏರಿಕೆಯಲ್ಲಿದೆ, ಮುಂದಿನ ವರ್ಷವೂ ಅಡಿಕೆ ಫಸಲು ಕಡಿಮೆ ಎನ್ನುವ ಸುದ್ದಿ ಮತ್ತಷ್ಟು ಚಿಂತೆಗೆ ಕಾರಣವಾಗಿದೆ.
ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…
ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…
ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…
ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…
ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿದ್ದ ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಮಳೆಯ…