ಅಡಿಕೆ ಹಳದಿ ಎಲೆರೋಗ | ಅಡಿಕೆ ಆದಾಯವೇ ಇಲ್ಲದೆ ಬದುಕು ಕಟ್ಟಿದ ಕೃಷಿಕ ಶಂಕರಪ್ರಸಾದ್‌ ರೈ | ಹಲವು ಕೃಷಿಕರಿಗೆ ಸ್ಫೂರ್ತಿ ಇವರ ಕೃಷಿ |

June 1, 2024
10:20 AM
ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶದ ಹಲವು ಕೃಷಿಕರಿಗೆ ಭವಿಷ್ಯದ ಬಗ್ಗೆ ಆತಂಕ. ಈಚೆಗೆ ಕೆಲವು ಅನಪೇಕ್ಷಿತ ಘಟನೆಗಳು ನಡೆದವು. ಹಳದಿ ಎಲೆರೋಗ ಬಾಧಿತ ಕೃಷಿಕರಿಗೆ ಶಂಕರ ಪ್ರಸಾದ್‌ ರೈ ಅವರು ಸ್ಫೂರ್ತಿಯಾಗಿದ್ದಾರೆ. ಎಲ್ಲಾ ಸಂಕಷ್ಟಗಳ ನಡುವೆ ಅಡಿಕೆ ಆದಾಯವೇ ಇಲ್ಲದೆ ಅವರು ಬದುಕು ಕಟ್ಟಿಕೊಂಡಿದ್ದಾರೆ.

ಅಡಿಕೆ ಹಳದಿ ಎಲೆರೋಗ ಕಳೆದ ಹಲವು ಸಮಯಗಳಿಂದ ಬಾಧಿಸುತ್ತಿದೆ. ಅಡಿಕೆ ಉಳಿಸಲು ವಿವಿಧ ಪ್ರಯತ್ನಗಳು ನಡೆಯುತ್ತಿದೆ. ಕೃಷಿಕರು ಕೆಲವು ಕಡೆ ಸಂಕಷ್ಟಪಡುತ್ತಿದ್ದಾರೆ. ಈ ನಡುವೆ ಅಡಿಕೆ ಆದಾಯವೇ ಇಲ್ಲದೇ ಬದುಕು ಹೇಗೆ..? ಎಂದು ಹಲವಾರು ಮಂದಿ ಕೃಷಿಕರು ಆತಂಕಕ್ಕೆ ಒಳಗಾಗಿದ್ದರು. ಅಂತಹವರಿಗೆಲ್ಲಾ ಉತ್ತರವಾಗಿ, ಸ್ಪೂರ್ತಿಯಾಗಿ ಬೆಳೆದವರು ಸಂಪಾಜೆಯ ಶಂಕರ ಪ್ರಸಾದ್‌ ರೈ. ಅಡಿಕೆ ಆದಾಯವೇ ಇಲ್ಲದೆ, ಇವರು ಬದುಕು ಕಟ್ಟಿಕೊಂಡಿದ್ದಾರೆ. ಪರ್ಯಾಯ ಕೃಷಿ, ಉದ್ಯಮದಲ್ಲಿ ಯಶಸ್ಸು ಕಂಡಿದ್ದಾರೆ. …….ಮುಂದೆ ಓದಿ…..

Advertisement
Advertisement
ಗೇರು ಹಾಗೂ ಕಾಳುಮೆಣಸು ಕೃಷಿಯ ಜೊತೆಗೆ ಶಂಕರ ಪ್ರಸಾದ ರೈ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಹಲವು ಕಡೆ ಅಡಿಕೆ ತೋಟಗಳಿಗೆ ಹಳದಿ ಎಲೆರೋಗ ಬಾಧಿಸಿದೆ. ಹೀಗಾಗಿ ಹಲವು ತೋಟಗಳು ನಾಶವಾಗಿದೆ. ಸಂಪಾಜೆ, ಮಡಿಕೇರಿ ತಪ್ಪಲು ಭಾಗ ಹಾಗೂ ಅರಂತೋಡು ಭಾಗದಲ್ಲೂ ಅಡಿಕೆ ಕೃಷಿ ನಾಶವಾಗಿದೆ. ಎಲ್ಲೆಡೆಯೂ ಅಡಿಕೆ ನಾಶವಾಗುತ್ತಿದೆ, ಕೃಷಿಕರ ಬದುಕೇ ಸಂಕಷ್ಟ ಎಂದು ಬಿಂಬಿಸಲಾಗಿದೆ. ಹಾಗಿದ್ದರೆ ಈ ರೈತರೆಲ್ಲಾ ಬದುಕು ಕಟ್ಟುವುದು ಹೇಗೆ..? ಈ ಪ್ರಶ್ನೆ ಎಲ್ಲೆಡೆಯೂ ಕಾಡುತ್ತದೆ. ಈ ನಡುವೆಯೇ ಅಡಿಕೆ ಹಳದಿಎಲೆರೋಗದ ಕಾರಣದಿಂದ ಕೃಷಿ ನಾಶವಾಗಿ ಆದಾಯ ಕುಂಠಿತವಾಗಿ ಆತ್ಮಹತ್ಯೆ ಮಾಡಿರುವ ಘಟನೆಗಳು ನಡೆದಿದೆ. ಇಂತಹ ಮಾನಸಿಕತೆ ಅಪಾಯಕಾರಿಯಾಗಿದೆ. ಇದಕ್ಕಾಗಿ ಹಳದಿ ಎಲೆರೋಗ ಪೀಡಿತ ಪ್ರದೇಶದಲ್ಲಿ ಅಡಿಕೆ ಆದಾಯದ ಹೊರತಾಗಿ ಬದುಕು ಕಟ್ಟಿಕೊಂಡವರು ಇಲ್ಲವೇ..? ಅಂತಹ ಒಂದು ಸಾಧನೆ ಮಾಡಿದವರು ಶಂಕರ ಪ್ರಸಾದ್‌ ರೈ.

Advertisement
ನೂತನವಾಗಿ ಬೆಳೆಸಿರುವ ಅಡಿಕೆ ಕೃಷಿ

ಬಿಎಸ್ಸಿ ಪದವಿ ಮುಗಿಸಿ ಎಂಎಸ್‌ಡಬ್ಯು ಮಾಡಿ ವಿವಿಧ ಕಂಪನಿಗಳಲ್ಲಿ10 ವರ್ಷಗಳ ಕಾಲ ಕೆಲಸ ಮಾಡಿದ ಶಂಕರ್‌ ಪ್ರಸಾದ್‌ ರೈ ಅವರು ತಮ್ಮ ಹೆತ್ತವರ ಅಪೇಕ್ಷೆಯಂತೆ 1990 ರಲ್ಲಿ ಕೃಷಿಗೆ ಬಂದರು. ಕೃಷಿಗೆ ಬಂದು ಕೆಲವೇ ಸಮಯದಲ್ಲಿ ಅಡಿಕೆ ಹಳದಿ ಎಲೆರೋಗ ಬಾಧಿಸಿತು. ಕೃಷಿ ನಷ್ಟವಾಯಿತು. ಆಗ ವಿಜ್ಞಾನಿಗಳು ಇವರ ತೋಟಕ್ಕೆ ಆಗಮಿಸಿ ಹಲವು ಪ್ರಯೋಗ, ಪರಿಹಾರದ ಬಗ್ಗೆ ಪ್ರಯತ್ನ ಮಾಡಿದರು. ಆದರೆ ಫಲ ನೀಡಲಿಲ್ಲ. ಅಡಿಕೆ ಕೃಷಿ ಮುಂದುವರಿಯುತ್ತಲೇ ಇತ್ತು. ಈ ನಡುವೆ  ಕ್ರಮೇಣ ಭೂಮಿಯ ಟೆಕ್ಚರ್‌ ಬದಲಾಯಿಸಲು ಅಡಿಕೆ ಬದಲಿಗೆ ರಬ್ಬರ್‌ ಕೃಷಿ ಮಾಡಿದರು ಶಂಕರ್‌ ಪ್ರಸಾದ್‌ ರೈ. 6 ಎಕ್ರೆಯಲ್ಲಿ ರಬ್ಬರ್‌ ಕೃಷಿ ಮಾಡಲಾಯಿತು, 25 ವರ್ಷದ  ರಬ್ಬರ್‌ ಕೃಷಿ ಮಾಡಿದ ಬಳಿಕ ಸಮಸ್ಯೆಯ ಅರಿವು ತಿಳಿಯಿತು. ಆರಂಭದಲ್ಲಿ ಉತ್ತಮ ಧಾರಣೆ ಇತ್ತು, ನಂತರ ಇಳಿಕೆಯಾಯಿತು. ಹೀಗಾಗಿ ನಷ್ಟದ ಪ್ರಮಾಣ ಹೆಚ್ಚಲು ಆರಂಭವಾದಾಗ ರಬ್ಬರ್‌ ಕೃಷಿಯನ್ನು ಕಡಿಮೆ ಮಾಡಿ ಗೇರು ಕೃಷಿ ಮಾಡಲಾಯಿತು.

ಗೇರು ಕೃಷಿಯ ಜೊತೆ ಶಂಕರ ಪ್ರಸಾದ ರೈ

ಫುಡ್‌ ಪ್ರಾಡಕ್ಟ್‌ ಏಕೆ ಮಾಡಬಾರದು ಎಂದು ರಬ್ಬರ್‌ ತೋಟವನ್ನು ಗೇರು ತೋಟವಾಗಿ ಪರಿವರ್ತನೆ ಮಾಡುವ ಹೆಜ್ಜೆ ಇಡಲಾಯಿತು. ಇಲಾಖೆಗಳ ಸಹಾಯ ದೊರೆಯಿತು. ರಬ್ಬರ್‌ ತೋಟ, ಗುಡ್ಡೆಯ ಭಾಗವನ್ನು ಗೇರು ಕೃಷಿಗೆ ಬದಲಾಯಿಸಲಾಯಿತು. 2 ನೇ ವರ್ಷದಲ್ಲಿ ಗೇರು ತೋಟದಲ್ಲಿ ಫಸಲು ಬಂತು. 750 ಗಿಡ ಇತ್ತು, ಈಗ 550 ಗೇರು ಮರ ಇದೆ. ಗೇರು ಗಿಡಗದ 3  ವರ್ಷದ ನಂತರ ಕರಿಮೆಣಸು ಮರಕ್ಕೆ ನೆಡಲಾಯಿತು. ಗೇರು ಜೊತೆಗೆ ಕರಿಮೆಣಸು ಕೂಡಾ ಬೆಳೆಯಲಾಯಿತು. ಈಗ  ಈಗ 200-300 ಗಿಡದಲ್ಲಿ ಕರಿಮೆಣಸು ಇದೆ, ಇದರಿಂದ ಮಹಿಳೆಯರು ಕೂಡಾ ಕಟಾವು ಮಾಡಬಹುದು.

Advertisement

ಗೇರು ಕೃಷಿಕರಿಗೂ ಬೇಸರ ಇದೆ, ಅಂದರೆ ಸರಿಯಾದ ಧಾರಣೆ ಇಲ್ಲ, ಹೆಚ್ಚೆಂದರೆ 120 ರೂಪಾಯಿ ಕೆಜಿಗೆ ಬರುತ್ತದೆ, ಅಷ್ಟೇ ಕೆಲಸ ಇರುತ್ತದೆ, ಔಷಧಿ ಸಿಂಪಡಣೆ ಇತ್ಯಾದಿ ಇದೆ. ಖರ್ಚು ಇದೆ. ಗೇರು ಹೆಕ್ಕಲು, ನಿರ್ವಹಣೆ ಖರ್ಚು ಇದೆ, ಖರ್ಚು ಇದೆ. ಹೀಗಾಗಿ ಮಿಶ್ರ ಕೃಷಿ ಯಾವತ್ತೂ ಕೃಷಿಕನಿಗೆ ಆದಾಯ ತರುತ್ತದೆ ಎನ್ನುತ್ತಾರೆ ಶಂಕರ ಪ್ರಸಾದ್‌ ರೈ.

ಗೇರು ಕೃಷಿಯ ಫುಡ್‌ ಪ್ರಾಡಕ್ಟ್‌  ಕೃಷಿ, ಆದರೆ ರೇಟಿಲ್ಲ, ಅಡಿಕೆಗೆ ಫುಡ್‌ ಪ್ರಾಡಕ್ಟ್‌ ಅಲ್ಲ ಆದರೆ ರೇಟಿದೆ. ಹೀಗಾಗಿ ಯಾವತ್ತೂ ಗೊಂದಲ ಕೃಷಿಕರಿಗೆ ಇದೆ. ಆದರೆ ಆದಾಯ ಹೆಚ್ಚು ಮಾಡಲು ಮೌಲ್ಯವರ್ಧನೆ ನಡೆಯಬೇಕು. ಅದಕ್ಕಾಗಿ ನಾವೇ ಬೆಳೆದ ಗೋಡಂಬಿ ಮಾರಾಟಕ್ಕೆ ಸಿದ್ಧತೆ ನಡೆಸಿದೆವು ಎನ್ನುತ್ತಾರೆ ಶಂಕರ್‌ ಪ್ರಸಾದ್‌ ರೈ. ಈಗ ಗೋಡಂಬಿ  ಪ್ರೊಸೆಸ್‌ ಮಾಡಿ ತಮ್ಮದೇ ಬ್ರಾಂಡ್‌ ಮಾಡಿ ಅದೇ ಹೆಸರಲ್ಲಿ ಮಾರಾಟ ಮಾಡುತ್ತಾರೆ ಶಂಕರ್‌ ಪ್ರಸಾದ್‌ ಅವರು. ಸೂರ್ಯಗಣೇಶ ಹೆಸರಲ್ಲಿಸದ್ಯ ಗೋಡಂಬಿ ಮಾರಾಟ ಮಾಡುತ್ತಾರೆ.

Advertisement
ಕಬ್ಬು ಜ್ಯೂಸಿನ ಕ್ಯಾಂಡಿ

ಈ ನಡುವೆ ಕಬ್ಬಿನ ಹಾಲು ತಯಾರು ಮಾಡುವ ಜ್ಯೂಸ್‌ ಅಂಗಡಿ ತೆರೆದ ಶಂಕರ ಪ್ರಸಾದ್‌ ರೈ ಅವರು ಆ ಮೂಲಕವೂ ತಮ್ಮ ಆದಾಯ ಆರಂಭಿಸಿದರು. ಈಗ ಎಲ್ಲವನ್ನೂ ನಿಭಾಯಿಸಿ ಅಡಿಕೆ ಆದಾಯ ಇಲ್ಲದೆಯೇ ಬದುಕು ಸಾಗಿಸುತ್ತಿದ್ದಾರೆ. ಹಲವು ಕೃಷಿಕರಿಗೆ ಮಾದರಿಯಾಗಿದ್ದಾರೆ. ಈ ವರ್ಷ ಅಡಿಕೆ ಗಿಡವನ್ನೂ ಮತ್ತೆ ನೆಟ್ಟಿದ್ದಾರೆ. ಕೆಲವು ಸಮಯದ ಹಿಂದೆ ಸ್ವಲ್ಪ ಗಿಡ ನೆಟ್ಟಿದ್ದರು, ಅದು ಉತ್ತಮವಾಗಿ ಬೆಳೆಯುತ್ತಿದೆ, ಫಸಲು ಬರಲು ಆರಂಭವಾಗುತ್ತಿದೆ, ಇದುವರೆಗೆ ಹಳದಿ ಎಲೆರೋಗ ಕಾಣುತ್ತಿಲ್ಲ ಎಂದು ಹೇಳುತ್ತಾರೆ ಶಂಕರ್‌ ಪ್ರಸಾದರು.

ಇದರ ಜೊತೆಗೇ ಕಬ್ಬು ಬೆಳೆಸಿ ಜ್ಯೂಸ್‌ ಮಾಡುವ ವೇಳೆ ಅದನ್ನೂ ಮೌಲ್ಯವರ್ಧನೆ ಮಾಡಿರುವ ಶಂಕರ ಪ್ರಸಾದರು, ಕಬ್ಬು ರಸದಿಂದ ಕ್ಯಾಂಡಿ ತಯಾರು ಮಾಡಿ ತಮ್ಮದೇ ಕಬ್ಬು ಜ್ಯೂಸಿನ ಅಂಗಡಿಯಲ್ಲಿ ಮಾರಾಟಕ್ಕೆ ಇರಿಸಿದರು. ಈ ಕಬ್ಬು ಕ್ಯಾಂಡಿ ಯಾವುದೇ ರಾಸಾಯನಿಕ ಬಳಕೆ ಮಾಡದೇ ಇರುವುದರಿಂದ ಹೆಚ್ಚು ರುಚಿಕರವಾಗಿದ್ದು, ಒಮ್ಮೆ ಖರೀದಿ ಮಾಡಿದ ಗ್ರಾಹಕರು ಮತ್ತೆ ಮತ್ತೆ ಬಂದು ಖರೀದಿ ಮಾಡುತ್ತಾರೆ ಎನ್ನುತ್ತಾರೆ ಅವರು.…….ಮುಂದೆ ಓದಿ…..

Advertisement
ಕಬ್ಬು ಕ್ಯಾಂಡಿ

ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶದ ಕೃಷಿಕರು ಹಲವಾರು ಮಂದಿ ಏನು ಮಾಡಬೇಕು ಎಂದು ತೋಚದೆ ಸಂಕಷ್ಟ ಪಡುತ್ತಿದ್ದಾರೆ. ಈಗ ಅಡಿಕೆಯ ಜೊತೆಗೆ ತಾಳೆ ಕೂಡಾ ಬೆಳೆಯಬಹುದಾಗಿದೆ, ಅಡಿಕೆಗೆ ಹಳದಿ ಎಲೆರೋಗ ಎನ್ನುವುದು ಒಂದು ವೈರಸ್‌ ರೋಗ. ಅದು ನೀರು ನಿಲ್ಲುವಲ್ಲಿ ಹೆಚ್ಚು ಕಾಣುತ್ತದೆ ಇಂತಹ ಕೆಲವು ಸಂಗತಿ ಕೃಷಿಕರು ಗಮನಿಸಬೇಕು. ಯಾವುದಕ್ಕೂ ಕೃಷಿಕರು ಎದೆಗುಂದದೆ ಧೈರ್ಯವಾಗಿ ಎದುರಿಸಬೇಕು, ಸಾಕಷ್ಟು ಅವಕಾಶಗಳು ಇವೆ. ಕೃಷಿಯಲ್ಲಿ ಬೇರೆ ಬೇರೆ ಅವಕಾಶಗಳು ಇದೆ, ಧಾರಣೆ, ಮಾರುಕಟ್ಟೆಗೆ ವ್ಯವಸ್ಥೆ ಆಗಬೇಕು ಎಂದು ಕೃಷಿಕರಿಗೆ ಧೈರ್ಯ ತುಂಬುತ್ತಾರೆ ಶಂಕರ ಪ್ರಸಾದ ರೈ.

ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶದ ಹಲವಾರು ಕೃಷಿಕರು ಸಂಕಷ್ಟದಲ್ಲಿದ್ದಾರೆ. ಭವಿಷ್ಯದ ಆತಂಕವನ್ನು ಹೇಳುತ್ತಾರೆ. ಆದರೆ  ಯಾವ ಸಮಸ್ಯೆಗೂ ಎದೆಗುಂದದೆ ಅಡಿಕೆಯ ಆದಾಯವೂ ಇಲ್ಲದೆಯೇ ಯಶಸ್ವೀ ಬದುಕು ಸಾಗಿಸಿದ ಶಂಕರ ಪ್ರಸಾದ ರೈ ಅವರು ಮಾದರಿಯಾಗಿದ್ದಾರೆ.

Advertisement

Discover the inspiring journey of Farmer Shankaraprasad Rai, who found success beyond arecanut farming, motivating many in agriculture.

Arecanut yellow leaf blight has been a longstanding challenge for farmers, leading to significant hardships due to loss of income. Amid this crisis, Sankara Prasad Rai of Sampaje has emerged as a beacon of hope, demonstrating that it is possible to prosper through alternative agricultural and industrial ventures. Rai’s success story has become an inspirational model for others, showing resilience and innovation in the face of adversity, proving that reliance on a single crop is not the only path to financial stability.

Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಗೋವಿನ ಸಗಣಿಯಿಂದ ಗಣೇಶ ಮೂರ್ತಿ | ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಆದ್ಯತೆ ನೀಡಿದ ರೈತ|
September 7, 2024
10:59 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ಮೈಸೂರಿನಲ್ಲಿ ಗಮನ ಸೆಳೆದ ವಿಶೇಷ ಗಣಪ | ವಿವಿಧ ಪ್ರತಿಮೆಗಳು |
September 7, 2024
10:38 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ದೇವರ ಪ್ರಸಾದಕ್ಕೆ FSSAI ಪರವಾನಗಿ ಕಡ್ಡಾಯ | ಖಂಡನೆ-ಸಾರ್ವಜನಿಕರಿಂದ ಅಸಮಾಧಾನ |
September 7, 2024
10:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-09-2024 | ರಾಜ್ಯದ ಅಲ್ಲಲ್ಲಿ ಸಾಮಾನ್ಯ ಮಳೆ | ಸೆ.13 ರಿಂದ ಕರಾವಳಿ ಜಿಲ್ಲೆಯಲ್ಲೂ ಮಳೆ ಕಡಿಮೆ ಸಾಧ್ಯತೆ |
September 7, 2024
2:22 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror