ಗ್ರಾಮೀಣ ಭಾಗದಲ್ಲಿ ಬಿಎಸ್‌ಎನ್‌ಎಲ್ 4G ವ್ಯವಸ್ಥೆಗೆ ಸಿದ್ಧತೆ ನಡೆಯುತ್ತಿದೆ. ಹಳ್ಳಿ ಭಾಗಕ್ಕೆ ಇದು ಹೊಸದು. ನಗರದ ಎಲ್ಲಾ ಕಡೆ 5G ಹಂತ ತಲಪುತ್ತಿರುವಾಗ ಗ್ರಾಮೀಣ ಭಾಗದಲ್ಲಿ ಈಗ 4G ವ್ಯವಸ್ಥೆಗೆ ಬಿಎಸ್‌ಎನ್‌ಎಲ್ ಸಿದ್ಧತೆ ಮಾಡುತ್ತಿದೆ. ಗ್ರಾಮೀಣ ಭಾಗಕ್ಕೂ ಇಂತಹ ವ್ಯವಸ್ಥೆ ಏಕೆ ಬೇಕು..? ಹಾಗೂ ಬಿಎಸ್‌ಎನ್‌ಎಲ್ ನಿಂದಷ್ಟೇ ಈ ಸೇವೆ ಹಳ್ಳಿಗೆ ನೀಡಲು ಸಾಧ್ಯ ಏಕೆ..?.
ಭಾರತ ಗ್ರಾಮೀಣ ಪ್ರದೇಶಗಳಿಂದ ತುಂಬಿರುವ ದೇಶ. ಅಭಿವೃದ್ಧಿ ಹೊಂದುತ್ತಿರುವ ದೇಶ. ಇಲ್ಲಿ ಹಳ್ಳಿಗಳು ಬೆಳೆದರೆ ಮಾತ್ರವೇ ದೇಶದ ಸರ್ವತೋಮುಖವಾದ ಅಭಿವೃದ್ಧಿಗೆ ಸಾಧ್ಯವಿದೆ, ಕೃಷಿ ಕ್ಷೇತ್ರ ಬೆಳೆಯಬೇಕು, ಯುವ ಜನತೆ ಕೃಷಿಗೆ ಬರಬೇಕು, ಗ್ರಾಮೀಣ ಭಾಗದ ಮೂಲಭೂತ ವ್ಯವಸ್ಥೆಗಳು ಬೆಳೆವಣಿಗೆಯಾಗಬೇಕು ….. ಇದೆಲ್ಲಾ ಥಿಯರಿ… ಭಾಷಣಗಳು…!, ಪ್ರಾಕ್ಟಿಕಲ್‌ಗೆ ಬಂದರೆ ಬಹುತೇಕ ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಇದೆ… ಸರಿಯಾದ ಸಂಪರ್ಕ ವ್ಯವಸ್ಥೆಗಳು ಇಲ್ಲ, ಸೇತುವೆ, ರಸ್ತೆ ಸುಧಾರಣೆ ಇಲ್ಲ… ವಿದ್ಯುತ್, ಶಾಲೆ ಸಹಿತ ಹಲವು ವ್ಯವಸ್ಥೆಗಳ ಸುಧಾರಣೆ ಕಾಣಬೇಕಿದೆ. ಹಾಗಿದ್ದರೂ, ಎಲ್ಲಾ ಕೊರತೆಗಳ ನಡುವೆಯೂ ಈಚೆಗೆ ವಿದ್ಯುತ್ ಹಾಗೂ ನೆಟ್ವರ್ಕ್ ಸ್ವಲ್ಪ ಸುಧಾರಣೆ ಕಾಣುತ್ತಿದೆ.
ಇಡೀ ದೇಶದಲ್ಲಿ ನೆಟ್ವರ್ಕ್ ವ್ಯವಸ್ಥೆಯಲ್ಲಿ ಗ್ರಾಮೀಣ ಭಾಗದಲ್ಲೂ ಉತ್ತಮ ಸೇವೆ ನೀಡಬಹುದಾದ ಮೂಲಭೂತ ವ್ಯವಸ್ಥೆ ಇರುವುದು ಬಿಎಸ್‌ಎನ್‌ಎಲ್ ಗೆ . ಹಳ್ಳಿ ಹಳ್ಳಿಗೆ ಕೇಬಲ್ ವ್ಯವಸ್ಥೆ ಇದೆ, ಟವರ್ ಇದೆ. ಹಾಗಿದ್ದೂ ಇಂದಿಗೂ ಸುವ್ಯವಸ್ಥಿತವಾದ ಸೇವೆ ನೀಡಲು ಸಾಧ್ಯವಾಗಿಲ್ಲ, ಸಾಧ್ಯವಾಗುತ್ತಿಲ್ಲ. ಅನೇಕ ಖಾಸಗಿ ವ್ಯವಸ್ಥೆಗಳು ಸುಧಾರಿತ ವ್ಯವಸ್ಥೆ ನೀಡುತ್ತಾ ಹೋದರೂ ಗ್ರಾಮೀಣ ಭಾಗದ ಕಡೆಗೆ ಬಂದಾಗ,” ಆ ಊರಲ್ಲಿ ಕಾಡೇ ಹೆಚ್ಚಾಗಿದೆ, ಹೀಗಾಗಿ ಸೇವೆ ನೀಡಲು ಕಷ್ಟ, ನೀಡಿದರೂ ಆದಾಯವಿಲ್ಲ..” ಎಂದು ರದ್ದಾಗುತ್ತದೆ. ಆದರೆ ಬಿಎಸ್‌ಎನ್ ಎಲ್ ಸರ್ಕಾರಿ ವ್ಯವಸ್ಥೆ ಒಳಗೆ ಬರುತ್ತದೆ, ಕನಿಷ್ಟ ಜನರಿದ್ದರೂ , ಕಡಿಮೆ ಆದಾಯವಾದರೂ ಅಲ್ಲಿ ಸೇವೆಯೇ ಮುಖ್ಯ. ಗ್ರಾಮೀಣ ಭಾಗಕ್ಕೂ ಸೇವೆ ನೀಡುತ್ತದೆ. ಹಾಗಿದ್ದರೂ ಎಲ್ಲಾ ವ್ಯವಸ್ಥೆ ಇದ್ದರೂ ಇಂದಿಗೂ ಸೇವೆಯನ್ನು ನೀಡಲು ಸಾಧ್ಯವಾಗಿಲ್ಲ.
ಅನೇಕ ಬಾರಿ ಬಿಎಸ್‌ಎನ್‌ಎಲ್ ಗೆ ಸಾರ್ವಜನಿಕರೆಲ್ಲರೂ ಹಿಗ್ಗಾಮುಗ್ಗಾ ಜಾಡಿಸುತ್ತಾರೆ. ಅದೊಂದು “ದಂಡಪಿಂಡ” ವ್ಯವಸ್ಥೆ ಅನ್ನುತ್ತಾರೆ. ಆದರೆ ಅದು ಸರ್ಕಾರಿ ವ್ಯವಸ್ಥೆ, ಹಲವು ಅಧಿಕಾರಿಗಳಿಗೆ ಸೇವಾ ಮನೋಭಾವ, ಉತ್ತಮ ಸೇವೆ ನೀಡಬೇಕು ಎನ್ನುವ ಮನಸ್ಥಿತಿ ಇರುತ್ತದೆ. ಕೆಲವು ಆಯಕಟ್ಟಿನ ಜಾಗದಲ್ಲಿ ಸಾಮಾಜಿಕ ಕಾಳಜಿ, ಸೇವಾ ಮನೋಭಾವ ಇಲ್ಲದ ಅಧಿಕಾರಿಗಳು, ಜನಪ್ರತಿನಿಧಿಗಳು ಇರುತ್ತಾರೆ. ಹೀಗಾಗಿ ಒಂದು ಹಂತದ ಮುಂದೆ ಸೇವೆ ನೀಡಲು ಆಗುವುದಿಲ್ಲ, ಅದೇ ಖಾಸಗಿ ಸೇವೆಗಳಿಗೆ ಅವಕಾಶ ಸಿಗುತ್ತದೆ. ಇದೆಲ್ಲಾ ಸುಧಾರಣೆ ಆಗಬೇಕಾದ್ದು ಮೇಲಿನ ಹಂತದಿಂದಲೇ, ಅಲ್ಲಿ ಯಾರೊಬ್ಬರೂ ಮಾತನಾಡುವುದಿಲ್ಲ, ಏನಿದ್ದರೂ ತಳಮಟ್ಟದ ಅಧಿಕಾರಿಗೆ ಬಾಯಿಗೆ ಬಂದ ಹಾಗೆ ನಿಂದಿಸುವುದರಲ್ಲೇ ತೃಪ್ತಿ…!.
ಇರಲಿ, ಈಗ ಬಿಎಸ್‌ಎನ್ ಎಲ್ ಸುಧಾರಣೆ ಕಾಣುತ್ತಿದೆ. ಹಳ್ಳಿ ಹಳ್ಳಿಗೂ ಕೇಬಲ್ ಮೂಲಕ ವೇಗದ ಇಂಟರ್ನೆಟ್ ನೀಡಿದೆ. ಏರ್ ಫೈಬರ್ ಮೂಲಕ ಹಳ್ಳಿಯಲ್ಲಿ ಕೇಬಲ್ ಇಲ್ಲದೆಯೇ ವೇಗದ ಇಂಟರ್ನೆಟ್ ನೀಡಿದೆ. ಈಗ 3g ಸೇವೆಯಿಂದ 4g ಸೇವೆಗೆ ಶಿಫ್ಟ್ ಆಗುತ್ತಿದೆ. ಮೊದಲ ಹಂತದಲ್ಲಿ ಹಲವು ಕಡೆ ಗ್ರಾಮೀಣ ಭಾಗದಲ್ಲಿ ಸೇವೆ ನೀಡಲು ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಕೆಲವೇ ದಿನದಲ್ಲಿ ಗ್ರಾಮೀಣ ಭಾಗದಲ್ಲೂ ಬಿಎಸ್‌ಎನ್ ಎಲ್ 4g ಸೇವೆ ಸಿಗಲಿದೆ. ಹಾಗಿದ್ದರೆ ಹಳ್ಳಿಗೂ ಏಕೆ ವೇಗದ ಇಂಟರ್ನೆಟ್ ಬೇಕು..?
ಕೊರೋನಾ ನಂತರ ಹಳ್ಳಿಗಳ ಬೆಳವಣಿಗೆ ಸಾಧ್ಯವಾಗುತ್ತಿದೆ. ಅನೇಕ ಕಂಪನಿಗಳು ವರ್ಕ್ ಫ್ರಂ ಹೋಂ ಅವಕಾಶ ನೀಡಿವೆ. ಹೀಗಾಗಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡಬಹುದಾಗಿದೆ. ಆದರೆ ಬೇಕಾಗಿರುವುದು ಎರಡೇ, ವಿದ್ಯುತ್ ಹಾಗೂ ಇಂಟರ್ನೆಟ್. ಅದೂ ವಾಟ್ಸಪ್ ಯುನಿವರ್ಸಿಟಿಯ ಇಂಟರ್ನೆಟ್ ಸಾಕಾಗುವುದಿಲ್ಲ..!, ವೇಗದ ಇಂಟರ್ನೆಟ್ ಹಾಗೂ ಸ್ಥಿರವಾದ ವೇಗದ ಇಂಟರ್ನೆಟ್ ಬೇಕು. ಒಬ್ಬ ಯುವಕನಿಗೆ ಅಥವಾ ಕೆಲಸ ಮಾಡುವ ಯುವ ಸಮುದಾಯಕ್ಕೆ ಇಂತಹ ವ್ಯವಸ್ಥೆ ಇದ್ದರೆ ಹಳ್ಳಿಯೇ ಕುಳಿತು ದೂರದ ಕಂಪನಿಗೆ ಕೆಲಸ ಮಾಡಲು ಸಾಧ್ಯವಿದೆ. ಒಬ್ಬ ಯುವಕ ಹಳ್ಳಿಯಲ್ಲಿ ಇದ್ದು ಕೆಲಸ ಮಾಡುತ್ತಾನೆ ಎಂದರೆ ಕೃಷಿಯೂ ಬೆಳವಣಿಗೆಯಾಗಲು ಸಾಧ್ಯವಿದೆ. ಕೃಷಿ ಬೆಳವಣಿಗೆ, ಗ್ರಾಮೀಣ ಭಾಗದ ಬೆಳವಣಿಗೆಯಾಯಿತೆಂದರೆ ದೇಶದ ಅಭಿವೃದ್ಧಿಯೂ ಸಾಧ್ಯವಿದೆ.
ಸುಮ್ಮನೆ ಗಮನಿಸಿ, ಹಳ್ಳಿಯಲ್ಲಿ ಒಬ್ಬ ಯುವಕ ಇದ್ದು ದೂರದ ಕಂಪನಿಗೆ ಕೆಲಸ ಮಾಡುತ್ತಾನೆ ಎಂದಾದರೆ, ಆತನ ಎಲ್ಲಾ ವ್ಯವಹಾರಗಳೂ ಹಳ್ಳಿಯಲ್ಲಿ, ಗ್ರಾಮೀಣ ಭಾಗದಲ್ಲಿ ಇರುತ್ತದೆ. ಅಲ್ಲಿನ ಆರ್ಥಿಕತೆ ಬೆಳೆಯುತ್ತದೆ. ಕೃಷಿ ಅಭಿವೃದ್ಧಿಗೆ ಆ ಹಣವೂ ಬಳಕೆಯಾಗುತ್ತದೆ, ಕೃಷಿಯ ಉತ್ಪಾದನೆ ಹೆಚ್ಚಾಗುತ್ತದೆ, ಸ್ಥಳೀಯವಾದ ಉದ್ಯೋಗ ಹೆಚ್ಚಾಗುತ್ತದೆ. ಈ ಮಾದರಿಯಲ್ಲಿ ಕೃಷಿ-ಗ್ರಾಮೀಣ ಭಾಗದ ಬೆಳವಣಿಗೆ ಸಾಧ್ಯವಾಗುತ್ತದೆ.
ಆದರೆ, ಏನಾಗುತ್ತಿದೆ..? ವಾಟ್ಸಪ್ ಯುನಿವರ್ಸಿಟಿಗೆ ಕಡಿಮೆ ವೇಗದ ಇಂಟರ್ನೆಟ್ ಸಾಕು. ಹೀಗಾಗಿ ಇಂಟರ್ನೆಟ್ ವೇಗ ಸಾಕಾಗುತ್ತಿಲ್ಲ, ಇಂಟರ್ನೆಟ್ ಸಿಗುತ್ತಿಲ್ಲ, 5g-4g ಇಲ್ಲ ಎಂದು ವರ್ಕ್ ಪ್ರಂ ಹೋಂ ಯುವಕರು ದೂರು ಕೊಟ್ಟಾಗ, ಹೇಳಿಕೊಂಡಾಗ ವ್ಯಂಗ್ಯವಾಡುವ ಮಂದಿ ಹೆಚ್ಚಾಗುತ್ತಾರೆ. ಇಲ್ಲ, ಆ ದೂರೇ ಸುಮ್ಮನೆ ಎಂದು ಪ್ರತಿ ದೂರು ನೀಡಿ ಸುಮ್ಮನಾಗುವ ವ್ಯವಸ್ಥೆ ಕಾರಣದಿಂದ ಗ್ರಾಮೀಣ ಭಾಗದ ಸೇವೆಗಳು ಸುಧಾರಣೆಯಾಗುವುದಿಲ್ಲ. ಈಗ ಆಗಬೇಕಾದ್ದು ಈ ಸುಧಾರಣೆ, ಬದಲಾವಣೆ. ಸದ್ಯ ಯುವಕರು ಹಳ್ಳಿಯಲ್ಲಿ-ಗ್ರಾಮೀಣ ಭಾಗದಲ್ಲಿ ಉಳಿದು ಕೆಲಸ ಮಾಡಲು ಈ ತಾಂತ್ರಿಕ ವ್ಯವಸ್ಥೆಗಳು ಬೇಕು. ಇದರ ನಂತರ ಮುಂದಿನ ಬೆಳವಣಿಗೆಯ ಬಗ್ಗೆ ಯೋಚಿಸಬೇಕು. ಇದಕ್ಕಾಗಿಯೇ ಗ್ರಾಮೀಣ ಭಾಗದಲ್ಲೀ ಸ್ಥಿರವಾಗಿ ಇರಬಲ್ಲ, ಆಗಾಗ ಸ್ಥಗಿತಗೊಳ್ಳುವ ನೆರ್ಟ್ವರ್ಕ್ ಬದಲಾಗಿ ಸ್ಥಿರವಾಗಿ, ನಿರಂತರವಾಗಿ ಲಭ್ಯವಾಗುವ ಸೇವೆ. ಗ್ರಾಮೀಣ ಭಾಗದಲ್ಲೂ ಇಂತಹದೊಂದು ಸೇವೆ ನೀಡಬಲ್ಲ ಶಕ್ತಿ ಇರುವುದು ಬಿಎಸ್‌ಎನ್ ಎಲ್ ಗೆ. ಇದಕ್ಕಾಗಿಯೇ 4G ಸೇವೆ ಹಳ್ಳಿಯಲ್ಲೂ ಗಟ್ಟಿಯಾಗಲಿ….
Discover how fast internet transforms rural areas, improving education, healthcare, and economic opportunities for villages. Connect to the future today.Unlock the potential of rural areas with high-speed internet.
Villages and rural areas require fast internet to bridge the digital divide, ensuring equal access to information, educational resources, and economic opportunities that the digital world offers. Fast internet facilitates telemedicine services, allowing residents in remote locations to access healthcare advice and consultations without the need to travel long distances, thereby improving the overall health and well-being of rural populations. Moreover, it empowers local businesses by opening up new markets and enabling farmers and artisans to sell their products online, driving economic growth and innovation within these communities.