ಜುಲೈನಲ್ಲಿ ಚುರುಕಾದ ಮುಂಗಾರು | ರೈತರಲ್ಲಿ ಭರವಸೆ ಮೂಡಿಸಿದ ಮಳೆ | ದೇಶದಲ್ಲಿ ಕಳೆದ ಬಾರಿಗಿಂತ ಈ ಸಲ ಹೆಚ್ಚು ಬಿತ್ತನೆ |

July 10, 2024
12:12 PM

ಮುಂಗಾರು ಮಳೆಯಿಂದ(Monsoon Rain) ದೇಶದ ಕೃಷಿ(Agriculture) ನಿರ್ಧರಿತವಾಗುತ್ತದೆ. ಚೆನ್ನಾಗಿ ಮಳೆ ಬಂದರೆ ಬೆಳೆ(Crop), ಇಲ್ಲವಾದರೆ ಬರ(Drought), ನಷ್ಟ, ಬೆಲೆ ಏರಿಕೆ(Price hike) ಎಲ್ಲಾ ಬಿಸಿಗಳನ್ನು ಅನುಭವಿಸಬೇಕಾಗುತ್ತದೆ. ಆದರೆ ಈ ಬಾರಿ ಜುಲೈ 6ರ ವೇಳೆಗೆ ದೇಶದಲ್ಲಿ ಬಿದ್ದ ಸಂಚಿತ ಮಳೆಯು ದೀರ್ಘಾವಧಿಯ ಸರಾಸರಿಗಿಂತ (ಜುಲೈ 6 ರಂತೆ) ಶೇ 1ರಷ್ಟು ಹೆಚ್ಚಾಗಿದ್ದರೆ, ಜುಲೈ 3ರಂತೆ ಸಾಪ್ತಾಹಿಕ ಮಳೆಯು ದೇಶದಲ್ಲಿ ದೀರ್ಘಕಾಲೀನ ಸರಾಸರಿಗಿಂತ ಶೇ 32ರಷ್ಟು ಹೆಚ್ಚಾಗಿದೆ ಎಂದು ವರದಿಯೊಂದು(Report) ತಿಳಿಸಿದೆ. ಹೀಗಾಗಿ ಈ ಬಾರಿ ಮುಂಗಾರು ಬಹುತೇಕ ಸಾಮಾನ್ಯವಾಗಿರಲಿದೆ ಎಂದು ಅಂದಾಜಿಸಲಾಗಿದೆ.

Advertisement

ಕಳೆದ ವಾರ ದೇಶದ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯಾಗುವುದರೊಂದಿಗೆ ಪ್ರಾದೇಶಿಕ ಮಳೆ ಪ್ರಮಾಣ ವ್ಯತ್ಯಾಸವು ಕಡಿಮೆಯಾಗಿದೆ. ಉತ್ತರ ಮತ್ತು ಪಶ್ಚಿಮ ಭಾರತ (ಶೇ 3), ಮಧ್ಯ ಭಾರತ (ಶೇ ಮೈನಸ್ 6), ಪೂರ್ವ ಮತ್ತು ಈಶಾನ್ಯ ಭಾರತ (ಶೇ 0) ಮತ್ತು ದಕ್ಷಿಣ ಪರ್ಯಾಯ ದ್ವೀಪ (ಶೇ 13) ಗಳಲ್ಲಿ ಈವರೆಗೆ ಸಾಮಾನ್ಯ ಮಳೆಯಾಗಿದೆ ಎಂದು ಎಂಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್ ವರದಿ ತಿಳಿಸಿದೆ.

“ಮಳೆಯ ಕೊರತೆಯೊಂದಿಗೆ ಜೂನ್ ತಿಂಗಳು ಕೊನೆಗೊಂಡಿತ್ತು. ಹೀಗಾಗಿ ಜುಲೈನಲ್ಲಿ ಉತ್ತಮ ಮಳೆ ಬೇಕಿದೆ. ಅದಕ್ಕೆ ತಕ್ಕಂತೆ ಭರವಸೆಯೊಂದಿಗೆ ಜುಲೈ ತಿಂಗಳು ಆರಂಭವಾಗಿದೆ” ಎಂದು ಎಂಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್​ನ ಪ್ರಮುಖ ಅರ್ಥಶಾಸ್ತ್ರಜ್ಞ ಮಾಧವಿ ಅರೋರಾ ಹೇಳಿದರು. ಈ ವರ್ಷ ಬಿತ್ತನೆ ವಿಳಂಬವಾಗಿದ್ದರೂ, ಈಗ ಅದು ವೇಗ ಪಡೆದುಕೊಂಡಿದೆ. ಅಲ್ಲದೆ ಕಳೆದ ವರ್ಷಕ್ಕಿಂತ ಹೆಚ್ಚಿನ ಬಿತ್ತನೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. “ಜೂನ್ 28ರ ಹೊತ್ತಿಗೆ ಬಿತ್ತನೆಗೆ ಒಳಗಾದ ಒಟ್ಟು ಪ್ರದೇಶ (24.1 ಮಿಲಿಯನ್ ಹೆಕ್ಟೇರ್)ವು ಕಳೆದ ವರ್ಷಕ್ಕಿಂತ ತೀವ್ರವಾಗಿ ಹೆಚ್ಚಾಗಿದೆ (ಶೇಕಡಾ 33). ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ತ್ವರಿತ ಬಿತ್ತನೆಯೇ ಇದಕ್ಕೆ ಮುಖ್ಯ ಕಾರಣ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭತ್ತದ ಬಿತ್ತನೆ ಪ್ರದೇಶವು ಕಳೆದ ವರ್ಷದಷ್ಟೇ ಇದೆ. ಕಬ್ಬು ಬಿತ್ತನೆಯೂ ಉತ್ತಮವಾಗಿದೆ. ಆಹಾರೇತರ ಬೆಳೆಗಳಲ್ಲಿ ಹತ್ತಿಯ ಬಿತ್ತನೆ ಹೆಚ್ಚಾಗಿದೆ. ಒಟ್ಟಾರೆ ಬಿತ್ತನೆ ಪ್ರದೇಶವು ಸಾಮಾನ್ಯ ಬಿತ್ತನೆ ಪ್ರದೇಶದ ಶೇಕಡಾ 22ರಷ್ಟಿದೆ. 2023 ರಲ್ಲಿ ಇದೇ ಸಮಯದಲ್ಲಿ ಒಟ್ಟಾರೆ ಬಿತ್ತನೆ ಪ್ರದೇಶವು ಶೇಕಡಾ 18.6 ರಷ್ಟಿತ್ತು. “ಈ ತಿಂಗಳಾಂತ್ಯದ ಹೊತ್ತಿಗೆ ದೇಶದಲ್ಲಿ ಶೇ 80ರಷ್ಟು ಬಿತ್ತನೆ ನಡೆಯುವುದರಿಂದ, ಈ ತಿಂಗಳು ಪೂರ್ತಿ ಉತ್ತಮ ಮಳೆಯಾಗುವುದು ಅಗತ್ಯವಾಗಿದೆ” ಎಂದು ಮಾಧವಿ ಅರೋರಾ ಹೇಳಿದರು.

  • ಅಂತರ್ಜಾಲ ಮಾಹಿತಿ

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 26-03-2025 | ಇಂದೂ ಕೆಲವು ಕಡೆ ಗಾಳಿ ಸಹಿತ ಮಳೆ ಸಾಧ್ಯತೆ | ಮಾ.27 ರಿಂದ ಮಳೆ ಕಡಿಮೆ |
March 26, 2025
1:29 PM
by: ಸಾಯಿಶೇಖರ್ ಕರಿಕಳ
ಕಂದಕ ಬದು ನಿರ್ಮಾಣ ಕುರಿತ ಕಾರ್ಯಾಗಾರ | ಬದು ನಿರ್ಮಾಣದಿಂದ ಮಳೆ ನೀರು ಪೋಲು ನಿಯಂತ್ರಣ |
March 26, 2025
7:06 AM
by: The Rural Mirror ಸುದ್ದಿಜಾಲ
ಹಾಸನ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ | ಸೆರೆ ಹಿಡಿದ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
March 26, 2025
6:49 AM
by: The Rural Mirror ಸುದ್ದಿಜಾಲ
ಕೋಲಾರ ತಾಲೂಕಿನ ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವು  ಕಾರ್ಯಾಚರಣೆ
March 26, 2025
6:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror