ಅಡಿಕೆ ಬೆಲೆ ಕುಸಿಯುತ್ತಿದೆ | ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಬರುತ್ತಿದೆ | ಆತಂಕದಲ್ಲಿ ಕರಾವಳಿಯ ಅಡಿಕೆ ಬೆಳೆಗಾರರು | ಏನಾಗಬಹುದು ಅಡಿಕೆ ಮಾರುಕಟ್ಟೆ…?

February 15, 2024
2:33 PM
ಅಡಿಕೆ ಧಾರಣೆ ಕುಸಿಯುತ್ತಿದೆ. ಅಡಿಕೆ ಬೆಳೆಗಾರರು ಈಗ ಮಾರುಕಟ್ಟೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆಮದು ಅಡಿಕೆಯ ಮೇಲೆ ನಿಯಂತ್ರಣವಾದರೆ ಧಾರಣೆ ಏರಿಕೆ ಸಾಧ್ಯತೆ ಇದೆ.

ಅಡಿಕೆಯ ಧಾರಣೆ ಎರಡು ವರ್ಷದ ಹಿಂದೆ 500 ರೂಪಾಯಿ ಗಡಿದಾಟಿತು. ಎಲ್ಲೆಡೆಯೂ ಸಂಭ್ರಮ ಹೆಚ್ಚಾಯಿತು. “ಅಡಿಕೆಗೆ  ಚಿನ್ನದ ಬೆಲೆ” ಎಂದೇ ಹೇಳಲಾಯಿತು. ಈಗ ಅಡಿಕೆ ಧಾರಣೆ ಕುಸಿಯುತ್ತಿದೆ. ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಇದೀಗ ಅಡಿಕೆ ಬೆಳೆಗಾರರಿಗೆ ಸಹಜವಾಗಿಯೇ ಆತಂಕ ಶುರುವಾಗಿದೆ. ಅದರ ಜೊತೆಗೇ ವಿವಿಧ ರೋಗಗಳೂ ಕಾಡಲು ಆರಂಭವಾಗಿದೆ.  ಬೆಳೆಗೆ) ವಿವಿಧ ರೀತಿಯ ರೋಗಗಳು ಬರುತ್ತಿದ್ದರೂ ಬೆಲೆ ಮಾತ್ರ ಏರುಗತಿಯಲ್ಲೇ ಸಾಗುತ್ತಿತ್ತು. ಅದೊಂದು ಕೊಂಚ ಅಡಿಕೆ ಬೆಳೆಗಾರರರಿಗೆ ಸಮಾಧಾನ ತಂದಿತ್ತು. ಇದೀಗ ಕರಾವಳಿ(Coastal) ಭಾಗದ ಕೃಷಿಕರ(Farmers) ಪ್ರಮುಖ ವಾಣಿಜ್ಯ ಬೆಳೆಯಾದ(commercial crop) ಅಡಿಕೆಗೆ ಮತ್ತೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಭೀತಿ ಎದುರಾಗಿದೆ. ಈಗ ಆತಂಕ ಆರಂಭವಾಗಿದೆ.

Advertisement
Advertisement
Advertisement

ಅಡಿಕೆ ಧಾರಣೆ ಏರಿಕೆಗೆ ಆರಂಭವಾಗುತ್ತಿದ್ದಂತೆಯೇ  ವಿದೇಶಗಳಿಂದ(Foreign) ಅಕ್ರಮವಾಗಿ ಅಡಿಕೆಯು ಭಾರತದ ಮಾರುಕಟ್ಟೆಗಳಿಗೆ ಆಗಮಿಸಲು ಆರಂಭವಾಯಿತು. ಕೆಲವು ಸಮಯಗಳಿಂದ ಅಕ್ರಮ ಆಮದು ಇದ್ದರೂ ಇಲ್ಲಿನ ಅಡಿಕೆ ಮೇಲೆ ಪರಿಣಾಮ ಬೀರಲಿಲ್ಲ. ಇದೀಗ ಪರಿಣಾಮ ಬೀರಲು ಆರಂಭವಾಗಿದೆ. ಎಲ್ಲೆಲ್ಲಾ ತಡೆ ಸಾಧ್ಯವೋ ಅಲ್ಲೆಲ್ಲಾ ಸರ್ಕಾರ ಪ್ರಯತ್ನ ಮಾಡಿದರೂ ಒಣ ಹಣ್ಣುಗಳ ಹೆಸರಿನಲ್ಲಿ ತಪ್ಪಾಗಿ ನಮೂದಿಸಿ ಅಕ್ರಮವಾಗಿ ಅಡಿಕೆ ಆಮದು ಮಾಡಲಾಗುತ್ತಿದೆ. ಹೀಗಾಗಿ ಸಮಸ್ಯೆ ಆಗುತ್ತಿದೆ. ಇಲಾಖೆಗಳು ಅಲ್ಲಲ್ಲಿ ದಾಳಿ ನಡೆಸಿ ಅಕ್ರಮ ಅಡಿಕೆಯನ್ನು ವಶಕ್ಕೆ ಪಡೆಯುತ್ತಿದ್ದಾರೆ. ಹಾಗಿದ್ದರೂ ಅಡಿಕೆ ಆಮದು ಕಿನ್‌ಪಿನ್‌ ಮಾತ್ರಾ ಇನ್ನೂ ಬಲೆಗೆ ಬಿದ್ದಿಲ್ಲ..!.

Advertisement

ಕುಸಿದ ಧಾರಣೆ : ಪ್ರತಿ ಕಿಲೋವೊಂದಕ್ಕೆ 500 ರೂಪಾಯಿ ಗಡಿದಾಟಿದ್ದ ಚಾಲಿ ಅಡಿಕೆ ಬೆಲೆ ಇದೀಗ  ಕುಸಿಯಲಾರಂಭಿಸುತ್ತಿದೆ. ಹೊಸ ಅಡಿಕೆ ಬೆಲೆ ಇದೀಗ ಕಿಲೋವೊಂದಕ್ಕೆ 340 ರಿಂದ 350ರ ಆಸುಪಾಸಿನಲ್ಲಿದ್ದು, ಹಳೆ ಅಡಿಕೆ ಬೆಲೆ 405-410 ರ ಆಸುಪಾಸಿನಲ್ಲಿದೆ.

ಅಡಿಕೆ ಧಾರಣೆ ಕುಸಿತಕ್ಕೆ ಕಾರಣ ಏನು ? : ಸಹಜವಾಗಿಯೇ ಫೆಬ್ರವರಿ -ಮಾರ್ಚ್‌ ತಿಂಗಳಲ್ಲಿ ಅಡಿಕೆ ಧಾರಣೆ ಇಳಿಕೆ ಆಗಿರುತ್ತದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಧಾರಣೆ ಇಳಿಕೆಯಾಗಿದೆ. ಫೆಬ್ರವರಿ ನಂತರವೇ ಅಡಿಕೆ ಮಾರುಕಟ್ಟೆ ಸಂಪೂರ್ಣವಾಗಿ ತೆರೆದುಕೊಳ್ಳುತ್ತದೆ. ಈಗ ಹೊಸ ಅಡಿಕೆಗೇ ಬೇಡಿಕೆ ಇರುತ್ತದೆ. ಹೀಗಾಗಿ ಆರಂಭದಲ್ಲಿ ಧಾರಣೆ ಕಡಿಮೆ ಇದ್ದರೂ ನಂತರ ಏರಿಕೆಯಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಈ ಬಾರಿ ಏರುಗತಿಯಲ್ಲಿ ಸಾಗಬೇಕಾದ ಮಾರುಕಟ್ಟೆ ಇಳಿಕೆಯ ಹಾದಿಯಲ್ಲಿದೆ. ಈ ಧಾರಣೆಗಿಂತಲೂ ಕಡಿಮೆ ಬೆಲೆಗೆ ಆಮದು ಅಡಿಕೆ ಲಭ್ಯವಾಗುತ್ತಿರುವುದೇ ಧಾರಣೆ ಇಳಿಕೆಗೆ ಕಾರಣ. ಆಮದು ಅಡಿಕೆ ಜೊತೆಗೆ ಇಲ್ಲಿನ ಅಡಿಕೆ ಮಿಶ್ರಣ ಮಾಡುವ ಸಲುವಾಗಿ ಅಡಿಕೆ ಸದ್ಯ ಬೇಡಿಕೆ ಉಳಿಸಿಕೊಂಡಿದೆ.

Advertisement

ಅಡಿಕೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ಹಲವು ನಿಬಂಧನೆಗಳಿದ್ದರೂ, ಹೆಚ್ಚಿನ ಲಾಭ ಗಳಿಸುವ ಉದ್ಧೇಶದಿಂದ ಅಡಿಕೆ ಖರೀದಿದಾರರು ವಿದೇಶೀ ಅಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಆಮದಾಗುವ ಅಡಿಕೆಗಳಲ್ಲಿ ಕೆಲವು ಮಾತ್ರ ತೆರಿಗೆ ಕಟ್ಟಿ ದೇಶೀ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಅದಕ್ಕಿಂತ ದುಪ್ಪಟ್ಟು ಪ್ರಮಾಣದ ಅಡಿಕೆ ಅಕ್ರಮವಾಗಿ ಆಮದಾಗುತ್ತಿದೆ.

ಕ್ರಮ ಆಗಬೇಕು : ದಕ್ಷಿಣ ಕನ್ನಡ ಭಾಗದಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಬೆರೆಸಿ ಉತ್ತರ ಭಾರತಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ದಕ್ಷಿಣಕನ್ನಡ ಜಿಲ್ಲೆಯ ಅಡಿಕೆಯ ಗುಣಮಟ್ಟವೂ ಕುಸಿಯುವ ಜೊತೆಗೆ ಬೆಲೆಯೂ ಕುಸಿಯುತ್ತದೆ. ದಕ್ಷಿಣಕನ್ನಡದ ಬಹುಪಾಲು ಕೃಷಿಕರು ಅಡಿಕೆಯನ್ನೇ ತನ್ನ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದು, ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ ಬದಲಾವಣೆಗಳಾದರೂ, ಅದು ನೇರವಾಗಿ ಅಡಿಕೆ ಬೆಳೆಗಾರನ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಡಿಕೆ ಬೆಳೆಗಾರರ ಹಿತ ಕಾಯಬೇಕು ಎಂದು ಅಡಿಕೆ ಬೆಳೆಗಾರ ಸಂಘಟನೆಗಳಯ ಒತ್ತಾಯಿಸಿದೆ.

Advertisement

ಏನಾದೀತು ಮಾರುಕಟ್ಟೆ : ಅಡಿಕೆ ಮಾರುಕಟ್ಟೆಯಲ್ಲಿ ಸದ್ಯ ಸ್ಥಿರವಾದ ವಾತಾವರಣ ಇದೆ. ವ್ಯಾಪಾರಿಗಳು ಉತ್ಸಾಹದಲ್ಲಿ ಅಡಿಕೆ ಖರೀದಿ ನಡೆಸುತ್ತಿಲ್ಲ. ಆಮದು ಅಡಿಕೆಯ ಪರಿಣಾಮ ಹಾಗೂ ಅದರ ಲಭ್ಯತೆಯ ಬಗ್ಗೆ ವ್ಯಾಪಾರಿಗಳು ಗಮನಿಸುತ್ತಿದ್ದಾರೆ. ಅಡಿಕೆ ಹೆಚ್ಚಿನ ದರದಲ್ಲಿ ಖರೀದಿ ಮಾಡಿದರೂ ಮಾರುಕಟ್ಟೆಯ ಪ್ರಕ್ರಿಯೆಯಲ್ಲಿ ನಿಧಾನವಾದರೆ  ವ್ಯಾಪಾರಿಗಳಿಗೆ ಆರ್ಥಿಕ ಸಮಸ್ಯೆಯಾಗುವ ಕಾರಣದಿಂದ ಬೇಡಿಕೆ ಇದ್ದರೂ ಪೂರೈಕೆಗೆ ಆಸಕ್ತಿ ತೋರಿಸುತ್ತಿಲ್ಲ. ಈಗಲೂ ಗುಣಮಟ್ಟದ ಅಡಿಕೆ ಬೇಡಿಕೆ ಇರುವುದರಿಂದ ಆಮದು ಅಡಿಕೆಯ ಮೇಲೆ ನಿಯಂತ್ರಣವಾದರೆ ಇಲ್ಲಿನ ಅಡಿಕೆ ಧಾರಣೆ ಏರಿಕೆ ಸಾಧ್ಯತೆ ಇದೆ. ಈಗಿನ ಅಂದಾಜು ಪ್ರಕಾರ ಮುಂದಿನ 15-20 ದಿನದಲ್ಲಿ ಅಡಿಕೆ ಧಾರಣೆ ಕನಿಷ್ಠ 25 -30 ರೂಪಾಯಿ ಏರಿಕೆಯಾಗುವ ನಿರೀಕ್ಷೆ ಇದೆ. ಆದರೆ ಆಮದು ಅಡಿಕೆಯ ನಿಯಂತ್ರಣದ ಮೇಲೆ ಇಲ್ಲಿ ಅಡಿಕೆ ಧಾರಣೆ ಏರಿಕೆಯು ಹೊಂದಿಕೊಂಡಿದೆ. ಸದ್ಯ ಕ್ಯಾಂಪ್ಕೋ ಹಾಗೂ ರೈತ ಪರ ಸಂಸ್ಥೆಗಳು ಅಡಿಕೆ ಮಾರುಕಟ್ಟೆಯನ್ನು ಸ್ವಲ್ಪ ಮಟ್ಟಿಗೆ ಹಿಡಿದಿರಿಸಿದೆ.

The main commercial crop of the farmers of Coastal part is faced with the threat of falling price in the market again. The cause of this fear is the illegal arrival of arecanuts from foreign countries to the coastal markets. Coastal arecanut is in high demand in many parts of North India, being the highest quality Arecanut growing region.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror