ಜಲಕ್ಷಾಮದ ಜೊತೆಗೆ ವಿದ್ಯುತ್ ಕ್ಷಾಮ ಭೀತಿ | ರಾಯಚೂರು ಆರ್‌ಟಿಪಿಎಸ್‌ನ 4 ವಿದ್ಯುತ್ ಘಟಕಗಳು ಬಂದ್ |

March 29, 2024
9:00 PM

ಭೂಮಿ(Earth) ದಿನದಿಂದ ದಿನಕ್ಕೆ ಕಾದ ಕಾವಲಿಯಂತಾಗುತ್ತಿದೆ. ಎಲ್ಲೆಲ್ಲೂ ನೀರಿಗೆ ಕ್ಷಾಮ(Water Crisis) ಎದುರಾಗಿದೆ. ಬಿಸಿಲ ಧಗೆಗೆ ಜನ ಪರದಾಟುತ್ತಿದ್ದಾರೆ. ಫ್ಯಾನ್‌(Fan), ಏಸಿ(AC), ಕೂಲರ್‌(Cooler) ಇಲ್ಲದೆ  ದಿನ ಕಳೆಯೋದು ಕಷ್ಟವಾಗಿದೆ.  ಈ ಮಧ್ಯೆ  ರಾಯಚೂರಿನ (Raichuru) ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‌ಟಿಪಿಎಸ್‌ನ (RTPS) ನಾಲ್ಕು ಘಟಕಗಳು ಸ್ಥಗಿತವಾಗಿದ್ದು, ರಾಜ್ಯಕ್ಕೆ ವಿದ್ಯುತ್ ಕೊರತೆ(Electricity Crisis) ಎದುರಾಗುವ ಸಾಧ್ಯತೆಗಳು ಕಾಣಿಸುತಿದೆ.

Advertisement
Advertisement

ಬರಗಾಲ ಹಿನ್ನೆಲೆ ರಾಜ್ಯದಲ್ಲಿ ಈಗಾಗಲೇ ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಈಗ ಬಿರು ಬೇಸಿಗೆಯಲ್ಲಿ ವಿದ್ಯುತ್ ಕ್ಷಾಮ ಸಹ ಎದುರಾಗುವ ಭೀತಿ ಉಂಟಾಗಿದೆ. ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಪೂರೈಸುವ ವಿದ್ಯುತ್ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ತಲೆದೂರಿದ್ದು, ಆರ್‌ಟಿಪಿಎಸ್‌ನ ಎಂಟು ಘಟಕಗಳಲ್ಲಿ ನಾಲ್ಕು ಘಟಕ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳಿಸಿವೆ.

Advertisement

ಬಾಯ್ಲರ್ ಟ್ಯೂಬ್ ಲೀಕೇಜ್ ಹಾಗೂ ಬಂಕ್ಲರ್ ಸಮಸ್ಯೆಯಿಂದ ಘಟಕಗಳು ಸ್ಥಗಿತಗೊಂಡಿವೆ. 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಕೇಂದ್ರದಲ್ಲಿ ಈಗ ಕೇವಲ 665 ಮೆಗಾ ವ್ಯಾಟ್ ಉತ್ಪಾದನೆಯಾಗುತ್ತಿದೆ. ವಿದ್ಯುತ್ ಕೇಂದ್ರದ 1,2,3 ಹಾಗೂ 6 ನೇ ಘಟಕ ಬಂದ್ ಆಗಿದ್ದು, ಬೇಸಿಗೆಯಲ್ಲಿ ಹೆಚ್ಚು ಒತ್ತಡ ಇರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲೇ ಉತ್ಪಾದನೆ ಕುಂಠಿತವಾಗಿದೆ. ನೀರಿನ ಸಮಸ್ಯೆ ಬೆನ್ನಲ್ಲೆ ತಾಂತ್ರಿಕ ಸಮಸ್ಯೆಯಿಂದ ಘಟಕಗಳು ಬಂದ್ ಆಗಿದ್ದು, ಬೇಸಿಗೆಯಲ್ಲಿ ವಿಪರೀತ ಲೋಡ್ ಶೆಡ್ಡಿಂಗ್ ಭೀತಿ ಎದುರಾಗಿದೆ.

  •  ಅಂತರ್ಜಾಲ ಮಾಹಿತಿ
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |
April 28, 2024
9:26 PM
by: ಪ್ರಬಂಧ ಅಂಬುತೀರ್ಥ
ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ
April 28, 2024
9:24 PM
by: The Rural Mirror ಸುದ್ದಿಜಾಲ
ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |
April 28, 2024
4:55 PM
by: The Rural Mirror ಸುದ್ದಿಜಾಲ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |
April 28, 2024
4:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror