ವಳಲಂಬೆಯಲ್ಲಿ ಯಕ್ಷಗಾನ | ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿಯವರಿಗೆ ಗೌರವಾರ್ಪಣೆ | ಕಲಾವಿದರನ್ನು ಗೌರವಿಸುವುದು ಉತ್ತಮ ಕೆಲಸ -ಹರೀಶ್ ಬಳಂತಿಮೊಗರು |

May 14, 2024
10:05 PM
ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ವತಿಯಿಂದ ಕಲಾವಿದ ಉಮೇಶ್‌ ಶೆಟ್ಟಿ ಉಬರಡ್ಕ ಅವರನ್ನು ಗೌರವಿಸಲಾಯಿತು.

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ಆಶ್ರಯದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ ವೇದೋದ್ಧರಣ ಶಿವಪಂಚಾಕ್ಷರೀ ಮಹಿಮೆ ಯಕ್ಷಗಾನ  ನಡೆಯಿತು. ಈ ಸಂದರ್ಭ ಯಕ್ಷಗಾನ ಕಲಾವಿದ ಉಮೇಶ್‌ ಶೆಟ್ಟಿ ಉಬರಡ್ಕ ಅವರನ್ನು ಗೌರವಿಸಲಾಯಿತು.

Advertisement
Advertisement
Advertisement

ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಹನುಮಗಿರಿ ಮೇಳದ ಪ್ರಬಂಧಕ ಹರೀಶ್‌ ಬಳಂತಿಮೊಗರು,

Advertisement
, ಎಲ್ಲಾ ಕಲಾವಿದರು ಸಮಾಜದಲ್ಲಿ ಗುರುತಿಸಲ್ಪಡಬೇಕು. ಸಮಾಜವೂ ಕಲಾವಿದರನ್ನು ಗೌರವಿಸಬೇಕು. ಕಲಾವಿದರನ್ನು ಸನ್ಮಾನಿಸುವುದು ಉತ್ತಮ ಕೆಲಸ, ಒಳ್ಳೆಯ ಸಂದೇಶ ನೀಡುತ್ತದೆ. ಏಕೆಂದರೆ, ಕೆಲಸ ಮಾಡುವವರನ್ನು ಸಮಾಜ ಗುರುತಿಸುತ್ತದೆ ಎನ್ನುವುದು ತಿಳಿಸಬೇಕು. ಇದು ಅರ್ಜಿ ಹಾಕಿ ನೀಡುವ ಪ್ರಶಸ್ತಿ ಇಲ್ಲ. ಕಲಾಭಿಮಾನಿಗಳು ಕಲಾವಿದರನ್ನು ಗುರುತಿಸುವ ಕೆಲಸ. ಅದಕ್ಕಾಗಿಯೇ ಇಂತಹ ಗೌರವಗಳಿಗೆ ಮೌಲ್ಯ, ಮನ್ನಣೆ ಇರುತ್ತದೆ ಎಂದರು.

ಕಲಾಭಿಮಾನಿಗಳ ಗೌರವ ಸ್ವೀಕರಿಸಿದ ಕಲಾವಿದ ಉಮೇಶ್‌ ಶೆಟ್ಟಿ ಉಬರಡ್ಕ,ಒಬ್ಬ ಕಲಾವಿದ ರೂಪುಗೊಳ್ಳಲು ಎಲ್ಲರ ಸಹಕಾರ ಬೇಕು. ಎಲ್ಲರ ಪ್ರಿತಿಯಿಂದ ಮಾತ್ರವೇ ಕಲಾವಿದ ಬೆಳೆಯಲು ಸಾಧ್ಯ. ಕಲಾವಿದರ ಆಸ್ತಿ ಕಲಾಭಿಮಾನಿಗಳು. ಅಭಿಮಾನಕ್ಕೆ ಕಲಾವಿದ ಖುಷಿ ಪಡುತ್ತಾನೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ವಿಷ್ಣು ಪ್ರಸಾದ್‌ ಬರೆಕೆರೆ,  ಕಲೆಯ ಆರಾಧನೆ ಉತ್ತಮವಾದ ಕೆಲಸ. ಕಲಾವಿರನ್ನು ಗೌರವಿಸುವು ಕೂಡಾ ಉತ್ತಮ ಕೆಲಸ. ಕಲೋಪಾನೆ ನಡೆಯಬೇಕು ಎಂದರು.

Advertisement

ವೇದಿಕೆಯಲ್ಲಿ ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಸಂಘಟನೆಯ ಹರಿಸುಬ್ರಹ್ಮಣ್ಯ ಪುಚ್ಚಪ್ಪಾಡಿ, ಪಿ ಎಸ್‌ ಚಂದ್ರಶೇಖರ‌ ಪುಚ್ಚಪ್ಪಾಡಿ, ‌ಗಂಗಾಧರ ಪುಚ್ಚಪ್ಪಾಡಿ, ವೆಂಕಟೇಶ ಪುಚ್ಚಪ್ಪಾಡಿ, ಸುಬ್ರಹ್ಮಣ್ಯ ಪ್ರಸಾದ ಚಣಿಲ, ಉದಯಕುಮಾರ್ ಕಮಿಲ, ಸತ್ಯನಾರಾಯಣ ಹೊನ್ನಾಡಿ, ಕೃಷ್ಣ ಭಟ್ ಹೊನ್ನಡಿ, ಸತ್ಯನಾರಾಯಣ ಮಾತೃಮಜಲು, ಮತ್ತಿತರರು ಉಪಸ್ಥಿತರಿದ್ದರು. ಅಪರ್ಣಾ ಪುಚ್ಚಪ್ಪಾಡಿ ನಿರೂಪಿಸಿದರು.

ಭಾಗವತರಾಗಿ ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ-ಮದ್ದಳೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಕೌಶಲ್ ರಾವ್ ಪುತ್ತಿಗೆ, ಚಕ್ರತಾಳದಲ್ಲಿ ನಿಶ್ವತ್ ಜೋಗಿ ಜೋಡುಕಲ್ಲು ಇದ್ದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror