ವಿಸ್ಮಯ ಜಗತ್ತು | ಗಂಡು ಮೊಸಳೆಯ ಸಹಾಯವಿಲ್ಲದೆ ಮೊಟ್ಟೆ ಇಟ್ಟ ಹೆಣ್ಣು ಮೊಸಳೆ |

June 9, 2023
7:47 PM

ಜಗತ್ತಿನಲ್ಲಿ ಯಾವುದೇ ಜೀವಿಯಾಗಲಿ ಪರಸ್ಪರ ಗಂಡು ಹೆಣ್ಣಿನ ಮಿಲನವಿಲ್ಲದೆ ಮರಿಗಳಿಗೆ ಜನ್ಮ ನೀಡುವುದು ಅಸಾಧ್ಯದ ವಿಚಾರ. ಆದರೂ ಕೆಲವೊಂದು ಸರೀಸೃಪ ಜೀವಿಗಳು ಸ್ವತಃ ತಮ್ಮಷ್ಟಕ್ಕೆ ತಾವೇ ಗರ್ಭ ಧರಿಸಿದ ನಿದರ್ಶನಗಳಿವೆ. ಇತ್ತೀಚಿಗೆ ಈ ರೀತಿಯ ಮತ್ತೊಂದು ಆಶ್ವರ್ಯಕರ ಘಟನೆ ಕೋಸ್ಟರಿಕಾದಲ್ಲಿ ನಡೆದಿದೆ. ಹೆಣ್ಣು ಮೊಸಳೆಯೊಂದು ಗಂಡು ಮೊಸಳೆಯ ಮಿಲನವಿಲ್ಲದೆ ಮೊಟ್ಟೆ ಇಟ್ಟಿದೆ, ಇದು  ವೈಜ್ಞಾನಿಕ ಜಗತ್ತನ್ನೇ ಅಚ್ಚರಿಗೊಳಿಸಿದೆ. ಕೋಸ್ಟರಿಕಾದ ಮೃಗಾಲಯದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಈ ಮೊಟ್ಟೆಯು ತಾಯಿ ಮೊಸಳೆಗೆ 99.9% ನಷ್ಟು ಹೋಲಿಕೆಯನ್ನು ಹೊಂದಿದೆ ಎಂದು ಪರೀಕ್ಷೆಯು ಬಹಿರಂಗಪಡಿಸಿದೆ. ಈ ವಿದ್ಯಮಾನವು ಪಕ್ಷಿಗಳು, ಮೀನುಗಳು ಮತ್ತು ಇತರ ಸರೀಸೃಪ ಜಾತಿಗಳಲ್ಲಿ ಕಂಡುಬಂದಿವೆ. ಆದರೆ ಮೊಸಳೆಗಳಲ್ಲಿ ಹಿಂದೆದೂ ಕಂಡುಬಂದಿರಲಿಲ್ಲ.

Advertisement

ಹೆಣ್ಣು ಮೊಸಳೆಯು ಯಾವಾಗಲೂ ಇತರ ಮೊಸಳೆಗಳಿಂದ ಬೇರ್ಪಟ್ಟು ವಾಸಿಸುತ್ತಿದ್ದರಿಂದ ಅದು ಹೇಗೆ ಮೊಟ್ಟೆ ಇಟ್ಟಿದೆ ಎಂದು ಮೃಗಾಲಯದವರು ಗೊಂದಲಕ್ಕೊಳಗಾದರು. ಇದರ ವಿಚಾರಣೆಗಾಗಿ ವಾರೆನ್ ಬೂತ್ ನೇತೃತ್ವದ ವಿಜ್ಞಾನಿಗಳ ತಂಡವನ್ನು ಕರೆತರಲಾಯಿತು. ವಿಜ್ಞಾನಿಗಳು ವಂಶವಾಹಿಗಳನ್ನು ಪರೀಕ್ಷಿಸಿದಾಗ ಮೊಟ್ಟೆಯನ್ನು ತನ್ನ ತಾಯಿಯೊಂದಿಗೆ ಶೇಕಡಾ 99.9% ರಷ್ಟು ಹೋಲುತ್ತದೆ ಹಾಗೂ ಅದಕ್ಕೆ ಯಾವುದೇ ತಂದೆ ಇಲ್ಲ ಎಂದು ದೃಢಪಡಿಸಿದರು. ಹಾಗೆ “ಮೊಸಳೆಗಳಲ್ಲಿ ಈ ಅಪರೂಪದ ಸಂತಾನೋತ್ಪತ್ತಿ ವಿಧಾನ ಇದೇ ಮೊದಲು’ ಎಂದು ತಿಳಿಸಿದರು.

ಕೆಲವೊಮ್ಮೆ ಕೆಲವು ಪ್ರಾಣಿಗಳು ಗಂಡಿನ ಸಹಾಯವಿಲ್ಲದೆ ಮರಿಗಳಿಗೆ ಜನ್ಮ ನೀಡುತ್ತವೆ. ಇದನ್ನು ‘ವರ್ಜಿನ್ ಬರ್ತ್’ ಅಥವಾ ‘ಫ್ಯಾಕಲ್ಟೇಟಿವ್ ಪಾರ್ಥೆನೋಜೆನೆಸಿನ್’ ಎಂದು ಕರೆಯುತ್ತಾರೆ. ಈ ವಿಧಾನದಲ್ಲಿ ಅಂಡಾಣು ಪುರುಷ ಜೀವಿಗಳ ವೀರ್ಯದಿಂದ ಫಲವತ್ತಾಗದೆ ಭ್ರೂಣವಾಗುತ್ತವೆ. ಈ ಹಿಂದೆ ಕೆಲವು ಜಾತಿಯ ಪಕ್ಷಿಗಳು, ಮೀನುಗಳು, ಹಲ್ಲಿಗಳು ಈ ರೀತಿಯ ಸರೀಸೃಪಗಳಲ್ಲಿ ಈ ರೀತಿಯ ಗರ್ಭಧಾರಣೆ ಕಾಣಿಸಿಕೊಂಡಿವೆ. ಆದರೆ ಮೊಸಳೆಗಳಲ್ಲಿ ಈ ಪ್ರಕ್ರಿಯೆಯಲ್ಲಿ ಪುರುಷ ಜೀವಿಯ ಸಹಕಾರವಿಲ್ಲದೆ ಅಂಡಾಣು ಹೆಣ್ಣು ಜೀವಿಯಲ್ಲಿ ತನ್ನಿಂದ ತಾನೇ ಭ್ರೂಣವಾಗಿ ಬೆಳೆಯುತ್ತದೆ.

ಕನ್ಯಾಜತ್ವ ಅಥವಾ ವರ್ಜಿನ್ ಬರ್ತ್ ಎಂಬುದು ಫ್ಯಾಕಲ್ಟೇಟಿವ್ ಪಾರ್ಥೆನೋಜೆನೆಸಿಸ್ ಎಂಬ ನೈಸರ್ಗಿಕ ಪ್ರಕ್ರಿಯೆ. ಜೇನು ನೊಣಗಳು, ಇರುವೆಗಳಂತಹ ಜೀವಿಗಳಲ್ಲಿ ಲೈಂಗಿಕ ವರ್ಣತಂತು ಇರುವುದಿಲ್ಲ. ಈ ಜೀವಿಗಳು ಪಾರ್ಥೆನೋಜೆನೆಸಿಸ್ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ. ಅದೇ ರೀತಿ ಕೆಲವು ಸರೀಸೃಪಗಳು, ಮೀನುಗಳು, ಪಕ್ಷಿಗಳು ಸಹ ಈ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಆದರೂ ಪ್ರಕ್ರಿಯೆಯ ಮೂಲಕ ಜನಿಸಿದ ಭ್ರೂಣವು ಬದುಕುಳಿಯುವ ಸಾಧ್ಯತೆ ಕಡಿಮೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ
April 25, 2025
7:47 AM
by: The Rural Mirror ಸುದ್ದಿಜಾಲ
ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ
April 25, 2025
7:42 AM
by: The Rural Mirror ಸುದ್ದಿಜಾಲ
ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ
April 25, 2025
7:31 AM
by: The Rural Mirror ಸುದ್ದಿಜಾಲ
ಶುಕ್ರ ಮತ್ತು ರಾಹು ಮೀನ ರಾಶಿಯಲ್ಲಿ ಸಂಯೋಗ | 5 ರಾಶಿಚಕ್ರಗಳಲ್ಲಿ ವಿಶೇಷ ಪ್ರಭಾವ |
April 25, 2025
7:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group