ಜಗತ್ತಿನಲ್ಲಿ ಯಾವುದೇ ಜೀವಿಯಾಗಲಿ ಪರಸ್ಪರ ಗಂಡು ಹೆಣ್ಣಿನ ಮಿಲನವಿಲ್ಲದೆ ಮರಿಗಳಿಗೆ ಜನ್ಮ ನೀಡುವುದು ಅಸಾಧ್ಯದ ವಿಚಾರ. ಆದರೂ ಕೆಲವೊಂದು ಸರೀಸೃಪ ಜೀವಿಗಳು ಸ್ವತಃ ತಮ್ಮಷ್ಟಕ್ಕೆ ತಾವೇ ಗರ್ಭ ಧರಿಸಿದ ನಿದರ್ಶನಗಳಿವೆ. ಇತ್ತೀಚಿಗೆ ಈ ರೀತಿಯ ಮತ್ತೊಂದು ಆಶ್ವರ್ಯಕರ ಘಟನೆ ಕೋಸ್ಟರಿಕಾದಲ್ಲಿ ನಡೆದಿದೆ. ಹೆಣ್ಣು ಮೊಸಳೆಯೊಂದು ಗಂಡು ಮೊಸಳೆಯ ಮಿಲನವಿಲ್ಲದೆ ಮೊಟ್ಟೆ ಇಟ್ಟಿದೆ, ಇದು ವೈಜ್ಞಾನಿಕ ಜಗತ್ತನ್ನೇ ಅಚ್ಚರಿಗೊಳಿಸಿದೆ. ಕೋಸ್ಟರಿಕಾದ ಮೃಗಾಲಯದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಈ ಮೊಟ್ಟೆಯು ತಾಯಿ ಮೊಸಳೆಗೆ 99.9% ನಷ್ಟು ಹೋಲಿಕೆಯನ್ನು ಹೊಂದಿದೆ ಎಂದು ಪರೀಕ್ಷೆಯು ಬಹಿರಂಗಪಡಿಸಿದೆ. ಈ ವಿದ್ಯಮಾನವು ಪಕ್ಷಿಗಳು, ಮೀನುಗಳು ಮತ್ತು ಇತರ ಸರೀಸೃಪ ಜಾತಿಗಳಲ್ಲಿ ಕಂಡುಬಂದಿವೆ. ಆದರೆ ಮೊಸಳೆಗಳಲ್ಲಿ ಹಿಂದೆದೂ ಕಂಡುಬಂದಿರಲಿಲ್ಲ.
ಹೆಣ್ಣು ಮೊಸಳೆಯು ಯಾವಾಗಲೂ ಇತರ ಮೊಸಳೆಗಳಿಂದ ಬೇರ್ಪಟ್ಟು ವಾಸಿಸುತ್ತಿದ್ದರಿಂದ ಅದು ಹೇಗೆ ಮೊಟ್ಟೆ ಇಟ್ಟಿದೆ ಎಂದು ಮೃಗಾಲಯದವರು ಗೊಂದಲಕ್ಕೊಳಗಾದರು. ಇದರ ವಿಚಾರಣೆಗಾಗಿ ವಾರೆನ್ ಬೂತ್ ನೇತೃತ್ವದ ವಿಜ್ಞಾನಿಗಳ ತಂಡವನ್ನು ಕರೆತರಲಾಯಿತು. ವಿಜ್ಞಾನಿಗಳು ವಂಶವಾಹಿಗಳನ್ನು ಪರೀಕ್ಷಿಸಿದಾಗ ಮೊಟ್ಟೆಯನ್ನು ತನ್ನ ತಾಯಿಯೊಂದಿಗೆ ಶೇಕಡಾ 99.9% ರಷ್ಟು ಹೋಲುತ್ತದೆ ಹಾಗೂ ಅದಕ್ಕೆ ಯಾವುದೇ ತಂದೆ ಇಲ್ಲ ಎಂದು ದೃಢಪಡಿಸಿದರು. ಹಾಗೆ “ಮೊಸಳೆಗಳಲ್ಲಿ ಈ ಅಪರೂಪದ ಸಂತಾನೋತ್ಪತ್ತಿ ವಿಧಾನ ಇದೇ ಮೊದಲು’ ಎಂದು ತಿಳಿಸಿದರು.
ಕೆಲವೊಮ್ಮೆ ಕೆಲವು ಪ್ರಾಣಿಗಳು ಗಂಡಿನ ಸಹಾಯವಿಲ್ಲದೆ ಮರಿಗಳಿಗೆ ಜನ್ಮ ನೀಡುತ್ತವೆ. ಇದನ್ನು ‘ವರ್ಜಿನ್ ಬರ್ತ್’ ಅಥವಾ ‘ಫ್ಯಾಕಲ್ಟೇಟಿವ್ ಪಾರ್ಥೆನೋಜೆನೆಸಿನ್’ ಎಂದು ಕರೆಯುತ್ತಾರೆ. ಈ ವಿಧಾನದಲ್ಲಿ ಅಂಡಾಣು ಪುರುಷ ಜೀವಿಗಳ ವೀರ್ಯದಿಂದ ಫಲವತ್ತಾಗದೆ ಭ್ರೂಣವಾಗುತ್ತವೆ. ಈ ಹಿಂದೆ ಕೆಲವು ಜಾತಿಯ ಪಕ್ಷಿಗಳು, ಮೀನುಗಳು, ಹಲ್ಲಿಗಳು ಈ ರೀತಿಯ ಸರೀಸೃಪಗಳಲ್ಲಿ ಈ ರೀತಿಯ ಗರ್ಭಧಾರಣೆ ಕಾಣಿಸಿಕೊಂಡಿವೆ. ಆದರೆ ಮೊಸಳೆಗಳಲ್ಲಿ ಈ ಪ್ರಕ್ರಿಯೆಯಲ್ಲಿ ಪುರುಷ ಜೀವಿಯ ಸಹಕಾರವಿಲ್ಲದೆ ಅಂಡಾಣು ಹೆಣ್ಣು ಜೀವಿಯಲ್ಲಿ ತನ್ನಿಂದ ತಾನೇ ಭ್ರೂಣವಾಗಿ ಬೆಳೆಯುತ್ತದೆ.
ಕನ್ಯಾಜತ್ವ ಅಥವಾ ವರ್ಜಿನ್ ಬರ್ತ್ ಎಂಬುದು ಫ್ಯಾಕಲ್ಟೇಟಿವ್ ಪಾರ್ಥೆನೋಜೆನೆಸಿಸ್ ಎಂಬ ನೈಸರ್ಗಿಕ ಪ್ರಕ್ರಿಯೆ. ಜೇನು ನೊಣಗಳು, ಇರುವೆಗಳಂತಹ ಜೀವಿಗಳಲ್ಲಿ ಲೈಂಗಿಕ ವರ್ಣತಂತು ಇರುವುದಿಲ್ಲ. ಈ ಜೀವಿಗಳು ಪಾರ್ಥೆನೋಜೆನೆಸಿಸ್ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ. ಅದೇ ರೀತಿ ಕೆಲವು ಸರೀಸೃಪಗಳು, ಮೀನುಗಳು, ಪಕ್ಷಿಗಳು ಸಹ ಈ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಆದರೂ ಪ್ರಕ್ರಿಯೆಯ ಮೂಲಕ ಜನಿಸಿದ ಭ್ರೂಣವು ಬದುಕುಳಿಯುವ ಸಾಧ್ಯತೆ ಕಡಿಮೆ.
ಅಕ್ರಮವಾಗಿ ಸುಮಾರು 68 ಟನ್ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…
ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…
ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…