ಕಳೆದ ಮೂರು ತಿಂಗಳ ಹಿಂದೆ ನಾಸದಿಂದ ನಡೆದಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಯಾನದಲ್ಲಿ, ಗಗನಯಾತ್ರಿ ಶುಭಾಂಶು ಶುಕ್ಲಾ ನಡೆಸಿದ್ದ ಮೆಂತ್ಯ ಮತ್ತು ಹೆಸರು ಕಾಳುಗಳ ಮೊಳಕೆಯೊಡೆಯುವ ಪ್ರಯೋಗ ಯಶಸ್ವಿಯಾಗಿದ್ದು, ಅದರ ಮುಂದುವರಿದ ಸಂಶೋಧನೆ ಇದೀಗ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಗತಿಯಲ್ಲಿದೆ. ಬಾಹ್ಯಾಕಾಶಕ್ಕೆ ರವಾನಿಸಿದ್ದ, ಮೆಂತ್ಯ ಮತ್ತು ಹೆಸರು ಕಾಳುಗಳು ಇದೀಗ ವಿಶ್ವವಿದ್ಯಾಲಯಕ್ಕೆ ಬಂದಿದ್ದು, ಕಾಳುಗಳು ಇದೀಗ ಮೊಳಕೆಯೊಡೆದಿದ್ದು, ಹೆಚ್ಚಿನ ಸಂಶೋಧನೆ ಆರಂಭಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರವಿಕುಮಾರ್ ಹೊಸಮನಿ ತಿಳಿಸಿದ್ದಾರೆ.

ಮೆಂತ್ಯೆ ಮತ್ತು ಹೆಸರು ಕಾಳುಗಳು, ಔಷಧೀಯ ಗುಣಗಳನ್ನು ಹೊಂದಿದ್ದು, ಹೃದಯ ಹಾಗೂ ಮೂತ್ರಪಿಂಡಗಳ ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗಲಿವೆ. ಭವಿಷ್ಯದಲ್ಲಿ ಗಗನಯಾನ ಕೈಗೊಳ್ಳುವವರ ಆರೋಗ್ಯ ಸುಧಾರಣೆಗೆ ನೆರವಾಗಲಿದೆ. ಈ ಕಾಳುಗಳಿಗೆ, ಶುಭಾಂಶು ಶುಕ್ಲಾ ಅವರು ಬ್ಯಾಹ್ಯಾಕಾಶದಲ್ಲಿ ನೀರು ಸಿಂಪಡಣೆ ಮಾಡಿದ್ದರು. ಇದೀಗ ಮೊಳಕೆಯೊಡೆದಿದ್ದು, ವಿಶ್ವವಿದ್ಯಾಲಯದ ಜೈವಿಕ ಸಂಶೋಧನಾ ಘಟಕದಲ್ಲಿ ಅದನ್ನು ಹೆಚ್ಚಿನ ಸಂಶೋಧನೆಗೆ ಒಳಪಡಿಸಲಾಗುತ್ತಿದೆ ಎಂದು ಸಹಾಯಕ ಪ್ರಾಧ್ಯಾಪಕ ರವಿಕುಮಾರ್ ಹೊಸಮನಿ ಹೇಳುತ್ತಾರೆ. ಈ ಸಂಶೋಧನೆ, ಮುಂದಿನ ದಿನಗಳಲ್ಲಿ ಕೃಷಿ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಸಹಕಾರಿಯಾಗಲಿದೆ ಎಂದು ಹೇಳುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..

