ಸಿಲಿಕಾನ್ ಸಿಟಿಯಲ್ಲಿ ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆಯೊಂದು ನಡೆದಿದೆ.
ಇದರ ವಿಡಿಯೋ ಸಖತ್ ವೈರಲ್ ಆಗಿದ್ದು, ವಿಡಿಯೋದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಜಗಳವಾಡುತ್ತಿದ್ದರೇ ಉಳಿದವರು ಅದನ್ನು ನೋಡಿ ಮನೋರಂಜನೆ ಪಡೆಯುತ್ತಿರುವುದು ಕಂಡು ಬಂದಿದೆ.
ಹಾಗೇ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕ್ಯಾಂಟೀನ್‌ನಲ್ಲಿ ಈ ಹೊಡೆದಾಟ ನಡೆದಿದ್ದು, ವಿಡಿಯೋದಲ್ಲಿ ಇಬ್ಬರು ಯುವತಿಯರು ಮೊದಲು ಮಾತಿನ ಚಕಮಕಿ ನಡೆಸಿಕೊಳ್ಳುತ್ತಾರೆ.
ಬಳಿಕ ಪರಸ್ಪರ ಕೆಟ್ಟ ಕೆಟ್ಟ ಶಬ್ದಗಳಿಂದ ಬೈದುಕೊಂಡು ಹೊಡೆದಾಟ ಆರಂಭಿಸುತ್ತಾರೆ. ಆದರೆ ಅಲ್ಲಿದ್ದವರು ಮಾತ್ರ ಇವರಿಬ್ಬರ ಜಗಳ ಬಿಡಿಸುವ ಬದಲಿಗೆ ಸಿನಿಮಾ ತರಹ ಪೂರ್ಣ ಮನೋರಂಜನೆ ಪಡೆದಿದ್ದಾರೆ.
ಇವರಿಬ್ಬರ ನಡುವೆ ಜಗಳ ಆಗಲು ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಅಲ್ಲದೆ,ಇವರಿಬ್ಬರ ಜಗಳ ಅಲ್ಲೇ ಇದ್ದ ಸಿಸಿಟಿವಿಯಲ್ಲೂ ಕೂಡ ಸೆರೆಯಾಗಿದೆ
ಪವಿತ್ರ ಕುಮಾರಧಾರಾ ನದಿಯನ್ನೂ ಮಲಿನ ಮಾಡಲು ಹೊರಟಿದೆಯಾ ಭಕ್ತ ಸಮೂಹ..? ಅದಕ್ಕೆ ಕೆಲವು…
ತಮ್ಮಂದಿರಿಗೆ ಅಣ್ಣನಾಗಿ, ಪ್ರಜೆಗಳಿಗೆ ರಾಜನಾಗಿ, ಧರ್ಮದ ಪ್ರತಿನಿಧಿಯಾಗಿ, ಪ್ರಾಮಾಣಿಕತೆಗೆ ಕನ್ನಡಿಯಾಗಿ, ಶುದ್ಧ ಚಾರಿತ್ರ್ಯವಂತನಾಗಿ,…
ಮುಖ್ಯ ರಸ್ತೆಗೆ ಸೇರಲು ಎಂಟತ್ತು ಕಿಮೀ ಹಳ್ಳಿಗಾಡಿನ, ಗದ್ದೆ ಬದುಗಳ, ಯಮುನೆಯ ತಟದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರ ಸಂಕಷ್ಟ ಕಾಲದಲ್ಲಿ ಕೈ…
ಪರಿಸರ ಇಲಾಖೆಯಿಂದ ಅನುಮತಿ ದೊರೆಯದ ತನಕ ಎತ್ತಿನಹೊಳೆ ಕಾಮಗಾರಿ ಮುಂದುವರೆಸಲು ಕಷ್ಟಕರವಾಗಿದೆ.