ಕೊನೆಗೂ ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್‌ನ್ಯೂಸ್ | ಮನೆಯ 2ನೇ ಯಜಮಾನರ ಖಾತೆಗೆ ಅನ್ನಭಾಗ್ಯ ಹಣ

December 5, 2023
11:59 AM

ಅನ್ನಭಾಗ್ಯದ(AnnaBhagya Scheme) ಮೂಲಕ 10 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ ಎಂದಿದ್ದ ರಾಜ್ಯ ಸರ್ಕಾರ(State govt), ಈಗ ಐದು ಕೆಜಿ ಅಕ್ಕಿ ನೀಡಿ ಉಳಿದ ಅಕ್ಕಿಯ ಹಣವನ್ನು ಖಾತೆಗೆ(Bank Account) ಹಾಕುತ್ತೇವೆ ಎಂದಿತ್ತು. ಇದೀಗ ಡಿಸೆಂಬರ್‌ನಲ್ಲಿ ಅನ್ನಭಾಗ್ಯದ ಬಾಕಿ ದುಡ್ಡು ಹಾಕುವುದಾಗಿ ಹೇಳಿದೆ.  9 ಲಕ್ಷ ಅನ್ನಭಾಗ್ಯ ಡಿಬಿಟಿ ವಂಚಿತರಿಗೆ ಈ ಹಣ ಸಿಗಲಿದೆ.

Advertisement
Advertisement
Advertisement

ಅನ್ನಭಾಗ್ಯದ DBT ಹಣ ಇದುವರೆಗೆ ರೇಷನ್ ಕಾರ್ಡ್‌ನಲ್ಲಿ (Ration Card) ನಮೂದಾಗಿದ್ದ ಮುಖ್ಯಸ್ಥರಿಗೆ ಬರುತ್ತಿತ್ತು. ಆದ್ರೆ ತಾಂತ್ರಿಕ ದೋಷದಿಂದ ರಾಜ್ಯದಲ್ಲಿ ಸುಮಾರು 9 ಲಕ್ಷ ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ವಂಚಿತರಾಗಿದ್ರು. ಅನೇಕರಿಗೆ ಅನ್ನಭಾಗ್ಯದ ದುಡ್ಡು ಖಾತೆಗೆ ಜಮೆಯಾಗಿದ್ರೂ ಕೆಲವು ರೇಷನ್ ಕಾರ್ಡ್‌ನ ಮುಖ್ಯಸ್ಥರಿಗೆ ತಾಂತ್ರಿಕ ದೋಷದಿಂದ ದುಡ್ಡು ಜಮೆಯಾಗಿರಲಿಲ್ಲ. ಹೀಗಾಗಿ ಸರ್ಕಾರದ ಅನುಮತಿ ಪಡೆದು ಆಹಾರ ಇಲಾಖೆ ಮನೆಯ 2ನೇ ಯಜಮಾನರ ಬ್ಯಾಂಕ್ ಖಾತೆಗೆ (Bank Account) ನೇರವಾಗಿ ಹಣ ಹಾಕಲಿದೆ. ಈ ತಿಂಗಳಿಂದಲೇ ಮನೆಯ 2ನೇ ಯಜಮಾನರ ಖಾತೆಗೆ ದುಡ್ಡು ಹೋಗಲಿದೆ. ಹಾಗಿದ್ರೇ ಈ ಪ್ರಕ್ರಿಯೆ ಹೇಗೆ ನಡೆಯಲಿದೆ ಎಷ್ಟು ಜನರಿಗೆ ಈ ಸೌಲಭ್ಯ ಸಿಗಲಿದೆ ಸಾರ್ವಜನಿಕರು ಏನು ಮಾಡಬೇಕು ವಿವರ ಇಲ್ಲಿದೆ.

Advertisement

ಒಟ್ಟು 9 ಲಕ್ಷ ಜನರಿಗೆ ಇದುವರೆಗೆ ಅನ್ನಭಾಗ್ಯದ ದುಡ್ಡು ಜಮೆಯಾಗಿಲ್ಲ. ಈ ಫಲಾನುಭವಿಗಳ ರೇಷನ್ ಕಾರ್ಡ್ನಲ್ಲಿದ್ದ ಮನೆಯ ಹಿರಿಯ ಸದಸ್ಯರ ಆಕೌಂಟ್ ನಿಷ್ಕ್ರಿಯ, ಆಧಾರ್ ಸೀಡಿಂಗ್ ಸಮಸ್ಯೆ ಕೆ ವೈಸಿ ಸಮಸ್ಯೆ ಇತ್ತು. ಆದ್ದರಿಂದ ಈ ವಿವರವನ್ನು ಈಗಾಗಲೇ ಆಹಾರ ಇಲಾಖೆ ಕಲೆ ಹಾಕಿದೆ. ಹೀಗಾಗಿ ಈ ತಿಂಗಳಿಂದಲೇ ಬಿಪಿಎಲ್ ಕಾರ್ಡ್ದಾರರ ತಾಂತ್ರಿಕ ದೋಷವಿರುವ ರೇಷನ್ ಕಾರ್ಡ್‌ನ 2ನೇ ಯಜಮಾನರ ಬ್ಯಾಂಕ್ ಖಾತೆಗೆ ದುಡ್ಡು ಜಮೆಯಾಗಲಿದೆ. ಇದಕ್ಕೆ ಸಾರ್ವಜನಿಕರು ಅರ್ಜಿ ಸಲ್ಲಿಕೆ ಮಾಡಬೇಕಾಗಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳ ಬಳಿ ಎಲ್ಲಾ ಮಾಹಿತಿ ಇರಲಿದೆ ಎಂದು ಆಹಾರ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ ಖಾಸಗಿ ವಾಹಿನಿಗೆ ತಿಳಿಸಿದ್ದಾರೆ.

It has been a year since they came to power that they are struggling to fulfill the promises they made to the Congress Govt who took the helm of power through the Guarantee Scheme. The state government, which had promised to provide 10 kg of rice free of charge through AnnaBhagya Scheme, could no longer provide it. The government, which had promised to give five kg of rice and put the rest of the money in the bank account, has now said that it will pay the balance of Annabhagya in December. 9 lakh Annabhagya DBT deprived people will get this money.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror