ಕಳೆದ ಒಂದು ತಿಂಂಗಳಿಂದ ಮೇಲೆ ಮೇಲೆ ಏರುತ್ತಲೇ ಸಾಗಿ ಶತಕ ದಾಟಿ 150 ರೂ ದಾಟಿತ್ತು ಟೊಮೆಟೋ ಬೆಲೆ. ಇದರಿಂದ ಹೈರಾಣಾಗಿದ್ದ ಗ್ರಾಹಕ ಟೊಮೆಟೋ ಕೊಳ್ಳುವುದಕ್ಕೆ 100 ಬಾರಿ ಯೋಚಿಸುವಂತಾಗಿತ್ತು. ಇದೀಗ ಗಗನಕ್ಕೇರಿದ ಟೊಮೆಟೊ ಬೆಲೆ ಕೊಂಚ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಟೊಮೆಟೊ ಬೆಲೆ 100 ರೂಪಾಯಿ ಆಗಿದೆ.
ಟೊಮೆಟೊ ಕೊಂಡುಕೊಳ್ಳೋಕೆ ಸಾಧ್ಯ ಇಲ್ಲ ಅನ್ನುವಷ್ಟರ ಮಟ್ಟಿಗೆ ಮಹಿಳೆಯರು ತಲೆಕೆಡಿಸಿಕೊಂಡಿದ್ದರು.. ಯಾಕಂದ್ರೆ ಟೊಮೆಟೊ ಬೆಲೆ ಗಗನಕ್ಕೇರಿತು. ಇಷ್ಟು ದಿನ ಟೊಮೆಟೊ ತೆಗೆದುಕೊಳ್ಳಬೇಕು ಎಂದ್ರೆ 150 ರಿಂದ 200 ರೂಪಾಯಿ ಇತ್ತು. ಇವತ್ತು ಬೆಂಗಳೂರಿನಲ್ಲಿ ಟೊಮೆಟೊ ಬೆಲೆ ಕಡಿಮೆಯಾಗಿದೆ. ಜುಲೈ ತಿಂಗಳಲ್ಲಿಯೇ ಮೊದಲ ಬಾರಿಗೆ ಶನಿವಾರ ಬೆಂಗಳೂರಿನ ಹಾಪ್ಕಾಮ್ಸ್ ನಲ್ಲಿ ಪ್ರತಿ ಕಿಲೋ ಟೊಮೆಟೊಗೆ 100 ರೂಪಾಯಿಗಿಂತ ಕಡಿಮೆ ಆಗಿದೆ. ಜನ ಸ್ವಲ್ಪ ನೆಮ್ಮದಿಯಾಗಿದ್ದಾರೆ. ಹಾಪ್ಕಾಮ್ಸ್ ನಲ್ಲಿ ಮಾತ್ರ 100 ರೂಪಾಯಿ ಇದೆ. ತಳ್ಳುಗಾಡಿ ಮತ್ತು ಬೀದಿ ಬದಿಯವರು 120, 130 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಅದಕ್ಕೆ ಜನ ಹಾಪ್ಕಾಮ್ಸ್ ನಲ್ಲಿ ಟೊಮೆಟೊ ತೆಗೆದುಕೊಳ್ತಾ ಇದ್ದಾರೆ. ಟೊಮೆಟೊ ಬೆಲೆ ಹೆಚ್ಚಾದಂತೆ, ಟೊಮೆಟೊ ಕಳ್ಳರು ಹೆಚ್ಚಾಗಿದ್ದಾರೆ. ಹೊಲಗಳಿಗೆ ನುಗ್ಗಿ ಟೊಮೆಟೊ ಕದಿಯುತ್ತಿದ್ದಾರೆ. ಟೊಮೆಟೊ ಕಳ್ಳರು ಹೆಚ್ಚಾದಂತೆ ರೈತರಿಗೆ ಟೆನ್ಶನ್ ಹೆಚ್ಚಾಗುತ್ತಿದೆ. ಕೆಲವರು ರಾತ್ರಿ ಹೊಲ ಕಾಯುತ್ತಿದ್ದಾರೆ.
ತಾವು ಬೆಳೆದ ಟೊಮೆಟೊ ಉಳಿಸಿಕೊಳ್ಳುವುದೇ ಸವಾಲು ಆಗಿದೆ. ಸದ್ಯ ನಮ್ಮ ರಾಜ್ಯದಲ್ಲಿ ಕೋಲಾರ, ವಡ್ಡಹಳ್ಳಿ, ಚಿಂತಾಮಣಿ, ಮೈಸೂರು ಮತ್ತಿತರ ಜಿಲ್ಲೆಗಳಲ್ಲಿ ಟೊಮೆಟೊ ಬೆಳೆದ ರೈತರು ಲಾಭದಲ್ಲಿದ್ದಾರೆ. ಖುಷಿಯಾಗಿದ್ದಾರೆ. ತನ್ನ ಶ್ರಮಕ್ಕೆ ಪ್ರತಿಫಲ ಸಿಕ್ತು ಎಂದು ಹೇಳ್ತಾ ಇದ್ದಾರೆ. ಇನ್ನಾದರು ಟೊಮೆಟೋ ಬೆಲೆ ಇಳಿಮುಖ ಕಾಣಬಹುದೋ ಎನೋ ಎಂಬ ನಿರೀಕ್ಷೆಯಲ್ಲಿ ಗ್ರಾಹಕರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…