ಹೊಲದಲ್ಲಿ ಹೂತಿಟ್ಟ 4,000 ವರ್ಷಗಳಷ್ಟು ಹಳೆಯದಾದ ತಾಮ್ರದ ಆಯುಧಗಳು ಪತ್ತೆ….!

June 26, 2022
10:42 PM

ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕೃಷಿಭೂಮಿಯಲ್ಲಿ ಆಕಸ್ಮಿಕ ಉತ್ಖನನದ ಸಂದರ್ಭ ಸುಮಾರು 4,000 ವರ್ಷಗಳ ಹಿಂದಿನ ದೊಡ್ಡ ಸಂಖ್ಯೆಯ ತಾಮ್ರದ ಕತ್ತಿಗಳು  ಪತ್ತೆಯಾಗಿದೆ.

ಮೈನ್‌ ಪುರಿ ಜಿಲ್ಲೆಯ ರೈತ ತನ್ನ ಹೊಲವನ್ನು ಸಮತಟ್ಟು ಮಾಡುತ್ತಿದ್ದನು. ಈ ಸಂದರ್ಭ ತಾಮ್ರದ ಕತ್ತಿಗಳು ಪತ್ತೆಯಾಗಿತ್ತು. ಆರಂಭದಲ್ಲಿ, ರೈತರು ಈ ಕಲಾಕೃತಿಗಳನ್ನು ಚಿನ್ನ ಮತ್ತು ಬೆಳ್ಳಿಯೆಂದು ಭಾವಿಸಿ ಮನೆಗೆ ಕೊಂಡು ಹೋಗಿದ್ದರು. ಆದರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ ಬಳಿಕ  ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಗೆ ಮಾಹಿತಿ ನೀಡಲಾಯಿತು.

ತಜ್ಞರ ಪ್ರಕಾರ, ಆಯುಧಗಳನ್ನು ತಾಮ್ರದ ಯುಗಕ್ಕೆ ಅಂದರೆ ಸರಿಸುಮಾರು 4,000 ವರ್ಷಗಳ ಹಿಂದೆ ಗುರುತಿಸಬಹುದು. “ಈ ತಾಮ್ರದ ಶೇಖರಣೆಗಳು ಚಾಲ್ಕೋಲಿಥಿಕ್ ಅವಧಿಗೆ ಸೇರಿವೆ ಮತ್ತು ಓಕ್ರೆ-ಬಣ್ಣದ ಕುಂಬಾರಿಕೆ (OCP) ಉಪಸ್ಥಿತಿಯು ಈ ಸಮಯದೊಂದಿಗೆ ನೇರವಾಗಿ ಸಂಬಂಧಿಸಿದೆ” ಎಂದು ಪುರಾತತ್ವ ನಿರ್ದೇಶಕ ಭುವನ್ ವಿಕ್ರಮ್ ಮಾಧ್ಯಮಗಳಿಗೆ ಹೇಳಿದರು.

ಪುರಾತತ್ವ ಇಲಾಖೆಯ ಶಾಸ್ತ್ರಜ್ಞ ರಾಜ್ ಕುಮಾರ್, “ಆಯುಧಗಳ ದಾಸ್ತಾನು ಗಮನಿಸಿದಾಗ  ಜನರು ಹೋರಾಟದಲ್ಲಿ ತೊಡಗಿಸಿಕೊಂಡಿರುವುದನ್ನು ಸೂಚಿಸುತ್ತದೆ ಮತ್ತು ಅಂತಹ ಹೋರಾಟಗಳು ಅಂದು  ಭೂಮಿ ಅಥವಾ ಹಕ್ಕುಗಳಿಗಾಗಿ ದೊಡ್ಡ ಗುಂಪುಗಳ ನಡುವೆ ಇದ್ದಿರಬಹುದು ಎಂದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?
April 11, 2026
1:52 PM
by: ಸಾಯಿಶೇಖರ್ ಕರಿಕಳ
ಜನನ-ಮರಣ ನೋಂದಣಿ 21 ದಿನಗಳೊಳಗೆ ಕಡ್ಡಾಯ ನೋಂದಣಿ – ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ
April 11, 2026
7:09 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ
April 10, 2026
3:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!
April 9, 2026
1:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror