ಭಕ್ತಾದಿಗಳೇ ಎಚ್ಚರ, ಇನ್ನು ಮುಂದೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸ ಎಸೆದರೆ, ಕುಮಾರಧಾರಾ ನದಿಗೆ ತ್ಯಾಜ್ಯ ಎಸದರೆ ದಂಡ ಖಚಿತ. ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶುಚಿತ್ವದ ಕಡೆಗೆ ಆದ್ಯತೆ ನೀಡಲಾಗುತ್ತಿದೆ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ದೇವಸ್ಥಾನದ ಆಡಳಿತ ಕ್ರಮ ಕೈಗೊಂಡಿದೆ. ಇದೀಗ ತ್ಯಾಜ್ಯ ಎಸೆದರೆ ದಂಡ ಪ್ರಯೋಗಕ್ಕೂ ಕುಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕೂಡಾ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಮುಂದಾಗಿದೆ. ಈಗಾಗಲೇ ಕೆಲವರಿಗೆ ದಂಡ ವಿಧಿಸಿದೆ.…… ಮುಂದೆ ಓದಿ……

ಸೆಪ್ಟೆಂಬರ್ 8 ರಂದು ಕುಮಾರಧಾರ ನದಿಯ ಸೇತುವೆ ಮೇಲಿಂದ ಕಾರ್ಕಳದ ವ್ಯಕ್ತಿಯೊಬ್ಬರು ಕಸ ಎಸೆದ ದೃಶ್ಯವನ್ನು ಸ್ಥಳೀಯ ಯುವಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದರು. ಈ ಮಾಹಿತಿ ತಕ್ಷಣವೇ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನೀಡಿದ್ದರು. ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಕುರಿತು ವಾಹನದ ವಿವರವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹಂಚಿಕೊಂಡಿದ್ದು, ಪೊಲೀಸರು ವಾಹನ ಮಾಲೀಕರನ್ನು ಪತ್ತೆಹಚ್ಚಲು ನೆರವಾದರು. ನಂತರ ಗ್ರಾಮ ಪಂಚಾಯತ್ ಕಾನೂನು ಕ್ರಮ ಕೈಗೊಂಡು, ಕಸ ಎಸೆದವರಿಗೆ ರೂ.2000 ದಂಡ ವಿಧಿಸಿತು. …… ಮುಂದೆ ಓದಿ…… ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..

ಕುಕ್ಕೆ ಸುಬ್ರಹ್ಮಣ್ಯದ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಈ ಕಾರ್ಯಾಚರಣೆಯ ಮೂಲಕ ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಭಕ್ತರು ಹಾಗೂ ಸ್ಥಳೀಯರು ಪ್ಲಾಸ್ಟಿಕ್ ಅಥವಾ ಬೇರೆ ಯಾವುದೇ ರೀತಿಯ ಕಸವನ್ನು ನದಿ ನೀರಿಗೆ ಎಸೆಯುವುದು ತಪ್ಪು. ಇದು ಪರಿಸರ ಮಾಲಿನ್ಯ ಹೆಚ್ಚಿಸುವುದಲ್ಲದೆ, ಪವಿತ್ರ ಕುಮಾರಧಾರ ನದಿಯ ಸ್ವಚ್ಛತೆಯನ್ನು ಹಾಳುಮಾಡುತ್ತದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು ಕೂಡಾ ನಿಲ್ಲಿಸಬೇಕಿದೆ. …… ಮುಂದೆ ಓದಿ……
ಈ ಕಾರ್ಯಾಚರಣೆಗೆ ಸ್ಥಳೀಯ ಯುವಕರ ತಂಡ ಹಾಗೂ ಪರಿಸರ ಪ್ರೇಮಿಗಳ ಸಹಕಾರ ಇದ್ದು, ವಾಹನದಲ್ಲಿ ತೆರಳುವ ಯಾರೇ ಆದರೂ ತಕ್ಷಣವೇ ಫೋಟೊ ತೆಗೆದು ಪಂಚಾಯತ್ ಆಡಳಿತಕ್ಕೆ ನೀಡಲಿದೆ. ಹೀಗಾಗಿ ಎಲ್ಲೆಂದರಲ್ಲಿ ಕಸ ಎಸೆಯದೇ ಇರುವುದು ಉತ್ತಮ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..


