ಸೀಮೆಎಣ್ಣೆ ಗೋದಾಮಿನಲ್ಲಿ ಭಾರೀ ಬೆಂಕಿ ಅನಾಹುತ ಉಂಟಾಗಿದ್ದು, ಅಪಾರ ನಾಶ ನಷ್ಟ ಉಂಟಾಗಿದೆ. ಕಾಸರಗೋಡು ನಗರದ ವಿದ್ಯಾನಗರದ ಬಳಿ ಗೋದಾಮಿನಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ದುರಂತ ನಡೆದ ಸಂದರ್ಭದಲ್ಲಿ ಗೋದಾಮಿನಲ್ಲಿ ಕಾರ್ಮಿಕರು ಇಲ್ಲದಿದ್ದುದರಿಂದ ಅಪಾಯ ತಪ್ಪಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಕಾಸರಗೋಡಿ ನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ಮುನೀರ್ ಎಂಬವರ ಮಾಲಕತ್ವದ ಎರಡಂತಸ್ತಿನ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಅಗ್ನಿ ಶಾಮಕ ದಳ ಹಾಗೂ ಪರಿಸರ ವಾಸಿಗಳ ಸಕಾಲಿಕ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿದೆ ಎನ್ನಲಾಗಿದೆ.ಬೆಂಕಿ ಅನಾಹುತ ಸಂಭವಿಸಿದ ಕೂಡಲೇ ಈ ಕಟ್ಟಡದಲ್ಲಿದ್ದವರನ್ನು ತೆರವು ಗೊಳಿಸಲಾಯಿತು. ಕಾಸರಗೋಡಿನಿಂದ ಆಗಮಿಸಿದ ಮೂರು ಅಗ್ನಿಶಾಮಕ ಘಟಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel