ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ | ಇಬ್ಬರು ಸಜೀವ ದಹನ |

September 21, 2021
8:45 PM

ಬೆಂಗಳೂರಿನ ದೇವರಚಿಕ್ಕನಹಳ್ಳಿಯಲ್ಲಿನ ಆಶ್ರಿತ್ ಅಪಾರ್ಟ್‌ಮೆಂಟ್‌ನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು  ಮೂವರು  ಮೃತಪಟ್ಟಿದ್ದಾರೆ . ಮೂರನೇ ಮಹಡಿಯಲ್ಲಿದ್ದ  ಇಬ್ಬರು ಸಜೀವದಹನವಾಗಿದ್ದಾರೆ. ಪ್ಲಾಟ್‌ ನ ಮೂರು ಮಹಡಿಯಲ್ಲಿ  ಬೆಂಕಿಯ ಕೆನ್ನಾಲಿಗೆ ಹರಡಿಕೊಂಡಿತ್ತು.

ಮಧ್ಯಾಹ್ನ 3.30ರ ವೇಳೆಗೆ ಸಿಲಿಂಡರ್ ಸೋರಿಕೆಯಾಗಿದ್ದು ತಕ್ಷಣವೇ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಮಹಿಳೆಯರು ಸಜೀವ ದಹನವಾಗಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 210  ನೇ ಪ್ಲಾಟ್‌ನಲ್ಲಿದ್ದ  ಲಕ್ಷ್ಮೀದೇವಿ (82),  ಭಾಗ್ಯ ರೇಖಾ (59) ಸಜೀವ ದಹನಗೊಂಡವರು ಎಂದು ತಿಳಿದುಬಂದಿದೆ.

ಬೆಂಕಿ ಹತ್ತಿಕೊಂಡು ತಕ್ಷಣವೇ ಬೆಂಕಿ ವ್ಯಾಪಿಸಿದ ಕಾರಣ ಪ್ಲಾಟ್‌ ನಿಂದ ಹೊರಬರಲಾಗದೆ ಇಬ್ಬರು ಮಹಿಳೆಯರು ಒದ್ದಾಟ ನಡೆಸಿ ಪ್ರಾಣ ಉಳಿಸುವಂತೆ ಅಂಗಲಾಚುತ್ತಿದ್ದರು. ಕೊನೆಗೆ ಬೆಂಕಿ ವ್ಯಾಪಿಸಿ ದಹನವಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಗ್ನಿಶಾಮಕದಳದ ಸಿಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 30-03-2026 | ಇವತ್ತಿನ ಮಳೆ ಎಲ್ಲಿ…? ಎಷ್ಟು ದಿನ ಇದೆ ಮಳೆ…?
March 30, 2026
12:06 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಹಲವೆಡೆ ಮಳೆ ; ಬೆಂಗಳೂರಿನಲ್ಲಿ ಹಗುರ ಮಳೆ ಸಾಧ್ಯತೆ
March 30, 2026
7:52 AM
by: ದ ರೂರಲ್ ಮಿರರ್.ಕಾಂ
ಮಂಗಳವಾರದಿಂದ ರಾಜ್ಯದಲ್ಲಿ ಹೋಟೆಲ್‌ಗಳಿಗೆ ಹೆಚ್ಚಿನ ವಾಣಿಜ್ಯ ಅಡುಗೆ ಸಿಲಿಂಡರ್‌ಗಳ ಸರಬರಾಜು
March 30, 2026
7:44 AM
by: ದ ರೂರಲ್ ಮಿರರ್.ಕಾಂ
ದೇಶದಲ್ಲಿ ಪೆಟ್ರೋಲ್-ಡೀಸೆಲ್ ಕೊರತೆ ಇಲ್ಲ..! ವದಂತಿಗಳಿಗೆ ಬಲಿಯಾಗಬೇಡಿ – ಕೇಂದ್ರದ ಸ್ಪಷ್ಟನೆ
March 30, 2026
7:40 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror