ಪಟಾಕಿ ವ್ಯಾಪಾರಿ ಕಾರನ್ನು ಅಡ್ಡಗಟ್ಟಿ ಹಣ ದೋಚಿ ದುಷ್ಕರ್ಮಿಗಳು ಪರಾರಿ | ಬೆಂಗಳೂರು ಬಳಿ ಘಟನೆ |

October 25, 2022
3:24 PM

ಪಟಾಕಿ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ 20 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾದ ಘಟನೆ ಬೆಂಗಳೂರಿನ ಅತ್ತಿಬೆಲೆ ಟೋಲ್ ಬಳಿಯ ಹೆದ್ದಾರಿಯಲ್ಲಿ ನಡೆದಿದೆ. ಪಟಾಕಿ ವ್ಯಾಪಾರಿ ಚಂದ್ರಶೇಖರ್ ರೆಡ್ಡಿ ಎಂಬವರು ತಮ್ಮ  ವಾಹನದಲ್ಲಿ 20 ಲಕ್ಷ ರೂಪಾಯಿ ಹಣದೊಂದಿಗೆ ತೆರಳುವಾಗ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಚಂದ್ರಶೇಖರ್ ಭುಜಕ್ಕೆ ಹೊಡೆದು ಕಾರಿನ ಗಾಜನ್ನು ಪುಡಿ ಮಾಡಿದ್ದಾರೆ.

ಚಂದ್ರಶೇಖರ್​ ಅವರು ಅತ್ತಿಬೆಲೆಯ ಪಟಾಕಿ ಅಂಗಡಿಯಿಂದ ತಮಿಳುನಾಡಿನ ಕಡೆಗೆ ಹೋಗುವ ಸಂದರ್ಭ ಈ ಘಟನೆ ನಡೆದಿದೆ.  ಚಂದ್ರಶೇಖರ್​ ಅವರ ಮೊಬೈಲ್ ಹಾಗು ಕಾರಿನ ಕೀ ಕಿತ್ತುಕೊಂಡು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಅತ್ತಿಬೆಲೆ ಇನ್ಸ್ಪೆಕ್ಟರ್ ಕೆ ವಿಶ್ವನಾಥ್ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?
October 6, 2026
1:39 PM
by: ಸಾಯಿಶೇಖರ್ ಕರಿಕಳ
ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ
October 6, 2026
7:09 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್
October 6, 2026
7:03 AM
by: ದ ರೂರಲ್ ಮಿರರ್.ಕಾಂ
ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ
October 6, 2026
6:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror