#RuralMirror | ರಸ್ತೆ ಬದಿ ಬಿದ್ದಿದ್ದ ವೃದ್ಧ | ಮಾನವೀಯ ಕಾರ್ಯಕ್ಕೆ ಕಾಣಿಕೆ ನೀಡಿದ ವೃದ್ಧ |

August 21, 2023
6:20 PM
ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಉಪಚರಿಸಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ ಘಟನೆ ಗುತ್ತಿಗಾರಿನಲ್ಲಿ ನಡೆದಿದೆ. ಈ ಸಂದರ್ಭ ಮಾನವೀಯ ಸೇವೆಯಿಂದ ಚೇತರಿಕೆ ಕಂಡ ರೋಗಿಯೇ ನೆರವಾಗುವ ಮೂಲಕ ಮಾದರಿಯಾಗಿದ್ದಾರೆ.

ಮಾನವೀಯ ಸೇವೆಯೇ ಮರೆಯಾಗುತ್ತಿರುವ ಕಾಲ ಇದು. ಉಪಕರಿಸಿದರೆ, ಮರುಕ್ಷಣವೇ ಮರೆತು ಹೋಗುವ ಸಮಯ ಇದು.  ಅಂತಹದ್ದರಲ್ಲಿ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಸೇವಾ ಕಾರ್ಯ ಗುರುತಿಸಿಕೊಂಡಿದೆ. ಹೀಗಾಗಿ ಸೇವೆ ಮಾಡಿರುವ ಸಂಸ್ಥೆಯೇ ನೆರವಾದ ಘಟನೆಯೊಂದು ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆದಿದೆ.

ಸುಳ್ಯ ತಾಲೂಕಿನ  ಗುತ್ತಿಗಾರು ಸಮೀಪದ ಹಾಲೆಮಜಲು ಎಂಬಲ್ಲಿ ಬೆಳಿಗ್ಗೆ  ವೃದ್ದ ರೊಬ್ಬರು ಆಕಸ್ಮಿಕವಾಗಿ ಬಿದ್ದಿದ್ದರು .ಆ ಸಂದರ್ಭ ಗಮನಿಸಿದ ವಿನ್ಯಾಸ್ ಕೊಚ್ಚಿ ಅವರು ಗುತ್ತಿಗಾರು ಪ್ರದೇಶದಲ್ಲಿ ಕಳೆದ ಕೆಲ ಸಮಯಗಳಿಂದ ಅಮರ ಟಾರಿಟೇಬಲ್‌ ಟ್ರಸ್ಟ್‌ ಮೂಲಕ ಸಾಮಾಜಿಕ ಕೆಲಸ ಮಾಡುತ್ತಿರುವ  ಆಂಬುಲೆನ್ಸ್ ಸೇವೆಗೆ ತಿಳಿಸಿದರು. ಸ್ಥಳೀಯರೆಲ್ಲರೂ ಜೊತೆಯಾಗಿ ತಕ್ಷಣವೇ ಅವರನ್ನು ಗುತ್ತಿಗಾರಿನ ಡಾ.ಅನಂತಕೃಷ್ಣ ಕಾಮತ್ ಅವರಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿದರು. ನಂತರ ಸ್ವತಃ ಆಂಬುಲೆನ್ಸ್ ಮೂಲಕವೇ ಅವರ ಸಂಬಂಧಿಗಳ ಮನೆಯಾದ ದುಗಲಡ್ಕಕಕ್ಕೆ  ತಲುಪಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಚೇತರೀಕೆಗೊಂಡ ಗಾಯಾಳು ಆಂಬುಲೆನ್ಸ್ ಸೇವೆಗೆ ಸಹಾಯಧನ ನೀಡಿ ಮಾದರಿಯಾದರು. ಸೇವೆಯನ್ನು ನೆನೆದು ಧನ್ಯವಾದ ಅರ್ಪಿಸಿದರು.

ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ, ಮಾಧವ್ ಎರ್ದಡ್ಕ, ರಾಜೇಶ್ ಉತ್ರಂಬೆ, ರಾಜೇಶ್ ಕುಕ್ಕುಜೆ, ಗಿರೀಶ್ ಕಾಯರಮೊಗೇರ್, ತೇಜಾವತಿ  ಸಹಕಾರ ನೀಡಿದ್ದರು. ಚಂದ್ರಶೇಖರ ಕಡೋಡಿ ಮತ್ತು ವಿನಯ್ ಮಾಡಬಾಕಿಲು ಆಸ್ಪತ್ರೆಗೆ ಮತ್ತು ಮನೆಗೆ ತಲುಪಿಸುವಲ್ಲಿ ನೆರವಾದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ
ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ
April 1, 2026
6:13 AM
by: ಮಿರರ್‌ ಡೆಸ್ಕ್
ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ
April 1, 2026
6:07 AM
by: ಮಿರರ್‌ ಡೆಸ್ಕ್
ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್
April 1, 2026
5:56 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror