ಮಾನವೀಯ ಸೇವೆಯೇ ಮರೆಯಾಗುತ್ತಿರುವ ಕಾಲ ಇದು. ಉಪಕರಿಸಿದರೆ, ಮರುಕ್ಷಣವೇ ಮರೆತು ಹೋಗುವ ಸಮಯ ಇದು. ಅಂತಹದ್ದರಲ್ಲಿ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಸೇವಾ ಕಾರ್ಯ ಗುರುತಿಸಿಕೊಂಡಿದೆ. ಹೀಗಾಗಿ ಸೇವೆ ಮಾಡಿರುವ ಸಂಸ್ಥೆಯೇ ನೆರವಾದ ಘಟನೆಯೊಂದು ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ಹಾಲೆಮಜಲು ಎಂಬಲ್ಲಿ ಬೆಳಿಗ್ಗೆ ವೃದ್ದ ರೊಬ್ಬರು ಆಕಸ್ಮಿಕವಾಗಿ ಬಿದ್ದಿದ್ದರು .ಆ ಸಂದರ್ಭ ಗಮನಿಸಿದ ವಿನ್ಯಾಸ್ ಕೊಚ್ಚಿ ಅವರು ಗುತ್ತಿಗಾರು ಪ್ರದೇಶದಲ್ಲಿ ಕಳೆದ ಕೆಲ ಸಮಯಗಳಿಂದ ಅಮರ ಟಾರಿಟೇಬಲ್ ಟ್ರಸ್ಟ್ ಮೂಲಕ ಸಾಮಾಜಿಕ ಕೆಲಸ ಮಾಡುತ್ತಿರುವ ಆಂಬುಲೆನ್ಸ್ ಸೇವೆಗೆ ತಿಳಿಸಿದರು. ಸ್ಥಳೀಯರೆಲ್ಲರೂ ಜೊತೆಯಾಗಿ ತಕ್ಷಣವೇ ಅವರನ್ನು ಗುತ್ತಿಗಾರಿನ ಡಾ.ಅನಂತಕೃಷ್ಣ ಕಾಮತ್ ಅವರಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿದರು. ನಂತರ ಸ್ವತಃ ಆಂಬುಲೆನ್ಸ್ ಮೂಲಕವೇ ಅವರ ಸಂಬಂಧಿಗಳ ಮನೆಯಾದ ದುಗಲಡ್ಕಕಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಚೇತರೀಕೆಗೊಂಡ ಗಾಯಾಳು ಆಂಬುಲೆನ್ಸ್ ಸೇವೆಗೆ ಸಹಾಯಧನ ನೀಡಿ ಮಾದರಿಯಾದರು. ಸೇವೆಯನ್ನು ನೆನೆದು ಧನ್ಯವಾದ ಅರ್ಪಿಸಿದರು.
ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ, ಮಾಧವ್ ಎರ್ದಡ್ಕ, ರಾಜೇಶ್ ಉತ್ರಂಬೆ, ರಾಜೇಶ್ ಕುಕ್ಕುಜೆ, ಗಿರೀಶ್ ಕಾಯರಮೊಗೇರ್, ತೇಜಾವತಿ ಸಹಕಾರ ನೀಡಿದ್ದರು. ಚಂದ್ರಶೇಖರ ಕಡೋಡಿ ಮತ್ತು ವಿನಯ್ ಮಾಡಬಾಕಿಲು ಆಸ್ಪತ್ರೆಗೆ ಮತ್ತು ಮನೆಗೆ ತಲುಪಿಸುವಲ್ಲಿ ನೆರವಾದರು.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…